ಬಳ್ಳಾರಿ.. 01:.ರಾಯರ ಆರಾಧನೆ ಅಂಗವಾಗಿ ಸತ್ಯನಾರಾಯಣ ಪೇಟೆ ರಾಘವೇಂದ್ರ ಮಠದಲ್ಲಿ ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಶ್ರಾವಣ ಸಾಂಸ್ಕ್ರತಿಕ ಸಂಜೆ ಕಾರ್ಯಕ್ರಮ ದಲ್ಲಿ ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕ, ರಾಯರ ಹಾಡುಗಳಿ ಗೆ ಶ್ರೀಜ, ವಸುಂಧರ, ತಂಡ ಮಾಡಿದ ನೃತ್ಯಗಳು ಭಕ್ತರ ಮನಸನ್ನು ರಂಜಿಸಿದವು. ಭಕ್ತಿಗೀತೆ ಗಾಯನ ಮನಸೊರಗಳಿಸಿತು. ಸಾಂಸ್ಕ್ರತಿಕ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮಠದ ವ್ಯವಸ್ಥಾಪಕರು ಐ. ಜಿ.ಪ್ರಸನ್ನ ಆಚಾರ್ ನುಡಿದರು. ಕಲಾವಿದರಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ, ಪಲ, ಮಂತ್ರಕ್ಷಿಗಳು ನೀಡಿ ಗೌರವಿಸಿದರು. ಸಂಸ್ಥೆ ವತಿಯಿಂದ ಪ್ರಸನ್ನ ಆಚಾರ್ಯ, ಗುರುರಾಜ್ ಆಚಾರ್ಯ, ಕಾಣೆಕಲ್ ಶ್ರೀಧರ್, ಸಿರುಗುಪ್ಪ ಕೃಷ್ಣಾಚರ್, ನೃತ್ಯ ಗುರುಗಳು ಶ್ರೀಜ, ಮುಂತಾದವರನ್ನು ಸನ್ಮಾನಿಸಲಾಯಿತು. ರಂಗಕಲಾವಿದರು ಟಿ.ನಾಗಭೂಷಣ್ ನಿರೂಪಿಸಿದರು..ಮಠದ ಸಿಬ್ಬಂದಿ, ಸಂಸ್ಥೆ ಪದಾಧಿಕಾರಿಗಳು, ಭಕ್ತರು ಮುಂತಾದವರು ಇದ್ದರು.