LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Koppal

ಬನ್ನಿಕೊಪ್ಪದಲ್ಲಿ ಬ್ಯಾಟರಿ ಚಾಲಿತ ಯಂತ್ರದ ಮೂಲಕ ತೊಗರಿ ಕುಡಿ ಚಿವುಟುವಿಕೆ ಪ್ರಾತ್ಯಕ್ಷಿಕೆ

ಕೊಪ್ಪಳ ಆಗಸ್ಟ್ 19: ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ವತಿಯಿಂದ ಬನ್ನಿಕೊಪ್ಪ ಗ್ರಾಮದಲ್ಲಿ ಬ್ಯಾಟರಿ ಚಾಲಿತ ಯಂತ್ರದ ಮೂಲಕ ತೊಗರಿ ಬೆಳೆಯಲ್ಲಿ ಕುಡಿ ಚಿವುಟುವಿಕೆಯ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
 ಬನ್ನಿಕೊಪ್ಪ ಗ್ರಾಮದ ಮಾಜಿ ಸೈನಿಕ ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರಾಜ ವೆಂಕರಡ್ಡಿ ವೆಂಕಟಾಪುರ ಅವರ ತೊಗರಿ ಹೊಲದಲ್ಲಿ ಮಂಗಳವಾರ (ಆ. 18ರಂದು) ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.
 ಈ ಸಂದರ್ಭದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರಾದ ಡಾ. ಬದರಿ ಪ್ರಸಾದ್ ಅವರು ತೊಗರಿ ಬೆಳೆಯಲ್ಲಿ ಕುಡಿಚಿವುಟುವಿಕೆಯ ಅಗತ್ಯತೆ ಹಾಗೂ ಲಘು ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸುವುದರಿಂದ ಬೆಳೆಯ ಇಳುವರಿ ಹೆಚ್ಚಿಸುವ ಕುರಿತು ರೈತರಿಗೆ ಮಾಹಿತಿ ನೀಡಿದರು.
 ತೊಗರಿಯಲ್ಲಿ ಹೂ ಹಿಡಿಯಲು ಹಾಗೂ ಹೂ ಉದುರುವುದನ್ನು ತಡೆಯಲು ನಾಪ್ತಾಲೀನ್ ಅಸಿಟಿಕ್ ಆಸಿಡ್ (ಎನ್‌ಎಎ) ಹಾರ್ಮೋನ್‌ನ್ನು ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ. ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬಹುದು ಎಂದು ಅವರು ತಿಳಿಸಿದರು. ಅಲ್ಲದೆ, ಇಳುವರಿ ಹೆಚ್ಚಳಕ್ಕಾಗಿ ಹೂ ಬಿಡುವ ಹಂತದಲ್ಲಿ ಪಲ್ಸ್ ಮ್ಯಾಜಿಕ್‌ನ್ನು ಎಕರೆಗೆ 2 ಗ್ರಾಂ ಪ್ರಮಾಣದಲ್ಲಿ ಸಿಂಪಡಿಸುವAತೆ ಸಲಹೆ ನೀಡಿದರು. ಪಲ್ಸ್ ಮ್ಯಾಜಿಕ್ ಸಿಂಪಡಿಸುವ ಸಂದರ್ಭದಲ್ಲಿ ಒಂದು ಹೋಳು ನಿಂಬೆ ಹಣ್ಣಿನ ರಸವನ್ನು ದ್ರಾವಣಕ್ಕೆ ಬೆರೆಸಿ ಸಿಂಪಡಿಸುವAತೆ ತಿಳಿಸಿದರು.
 ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಪ್ರಮೋದ ತುಂಬಳ, ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ವಾಮನಮೂರ್ತಿ ಉಪಸ್ಥಿತರಿದ್ದರು.
 ಪ್ರಗತಿಪರ ರೈತರಾದ ಸಿದ್ದಪ್ಪ ಮಾಳೆಕೊಪ್ಪ, ಕಾಳಪ್ಪ ಡಂಬಳ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀರಪ್ಪ ಗೊಂದಿ, ಸಲಬಪ್ಪ ಗೊಂದಿ, ನಾಗರಾಜ ಹಳ್ಳಿಕೇರಿ, ಈಶಪ್ಪ ಬ್ಯಾಳಿ, ಪರಶುರಾಮ ವಜ್ರಬಂಡಿ, ಮರಿತಿಮ್ಮಪ್ಪ ದೇವರರ್ ಸೇರಿದಂತೆ ಸ್ಥಳೀಯ ರೈತರು ಭಾಗವಹಿಸಿದ್ದರು.
 ರೈತರು, ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು (ಡಾ. ಬದರಿ ಪ್ರಸಾದ್ ಪಿ.ಆರ್., ವಿಸ್ತರಣಾ ಮುಂದಾಳು ಮೊ. 9900145705) ಸಂಪರ್ಕಿಸಬಹುದು.
****

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾರದ ಗಡುವು ಠರಾವು ಅಂಗೀಕರಿಸದಿದ್ದರೆ ಬುಧವಾರ ಬೃಹತ್ ಪ್ರತಿಭಟನೆ: ಆರ್. ಅಭಿಲಾಷ್ ಎಚ್ಚರಿಕೆ. ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಿ:ಈಶ್ವರ ಖಂಡ್ರೆರೈತ ಸಂಘ ಸ್ಥಾಪನೆಯಿಂದ ರೈತರ ಸಮಸ್ಯ ಪರಿಹಾರ :ಚೂನಪ್ಪ ಪೂಜೇರಿ ಯುವಶಕ್ತಿ ರಾಷ್ಟçಶಕ್ತಿಯಾಗಲಿ: ಡಾ. ಇಂದ್ರಾಣಿ ಕರೆಪೂರ್ವಭಾವಿ ಸಭೆಯಲ್ಲಿ ನಿರ್ಧಾರ: ಮಹನೀಯರ ಜಯಂತಿಗಳ ಅರ್ಥಪೂರ್ಣ ಆಚರಣೆ - ತಹಶೀಲ್ದಾರ ಶೇಷಾವಲಿಬಿಮ್ಸ್  ನಿರ್ದೇಶಕ ಡಾ. ಗಂಗಾಧರ ಗೌಡರವರನ್ನು  ನಿರ್ದೇಶಕರನ್ನಾಗಿ ಮುಂದುವರೆಸಬೇಡಿ : ಕೆ. ಪಿ. ಹಸೇನ್ ಅಗ್ರಹ ಕನಿಷ್ಠ ವೇತನ ಜಾರಿಗೊಳಿಸಲು ಗ್ರಾಮ ಪಂಚಾಯಿತಿ ನೌಕರರಿಂದ ಧರಣಿ  : 13 ಬೇಡಿಕೆಗಳ ಈಡೇರಿಕೆಗೆ ಒತ್ತಾಯ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಅಹೋರಾತ್ರಿ ಧರಣಿ ಎರಡನೇಯ ದಿನದ ಹೋರಾಟ.ಕೆಪಿಎಸ್‌ಸಿ ಅಕ್ರಮದ ಬೆನ್ನತ್ತಿದ ಇಡಿ : ಕಿತ್ತೂರಿನಲ್ಲಿ ಸಂಬಂಧಿಕರ ಮನೆ ಮೇಲೆ ತಪಾಸಣೆ*ಮೂನ್ ವಾಕರ್ಸ್ ವತಿಯಿಂದ "ಶ್ರಾವಣ ಸಂಭ್ರಮ" ಕಾರ್ಯಕ್ರಮ*