ಮಧ್ಯಪ್ರದೇಶದಲ್ಲಿ ನಡೆದ ತನಿಖೆಯ ಸಮಯದಲ್ಲಿ, ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಗುಣಮಟ್ಟವಿಲ್ಲದ ಮತ್ತು ಕಳಪೆ ಗುಣಮಟ್ಟದ್ದಾಗಿದೆ ಎಂಬುದು ಕಂಡುಬಂದಿದೆ ಮತ್ತು ಆದ್ದರಿಂದ, ಈ ಕೆಮ್ಮಿನ ಸಿರಪ್ ಅನ್ನು ದೆಹಲಿಯಲ್ಲಿಯೂ ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ ಎಂದು ದೆಹಲಿ ಸರ್ಕಾರ ಆದೇಶ ಹೊರಡಿಸಿದೆ. ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಹಲವು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ಮಕ್ಕಳಿಗೆ ನೆಗಡಿ, ಕೆಮ್ಮು ಕಾಣಿಸಿಕೊಂಡ ಬಳಿಕ ಪೋಷಕರು ಅವರನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದರು, ವೈದ್ಯರು ಕೋಲ್ಡ್ರಿಫ್ ಸಿರಪ್ ಅನ್ನು ನೀಡಿದ್ದರು. ಅದನ್ನು ಸೇವಿಸಿದ ಬಳಿಕ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. 20 ಮಕ್ಕಳು ಇದುವರೆಗೆ ಪ್ರಾಣ ಕಳೆದುಕೊಂಡಿದ್ದಾರೆ.