Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

ಉದ್ಯೋಗ ಬೇಡಿಕೆ ಸಲ್ಲಿಸಿದರೆ ನಿರಂತರ ಕೆಲಸ: ಇಒ ಸಂಗನಗೌಡ

ಹುಲ್ಲೂರ: ಆರೋಗ್ಯ ಉಚಿತ ತಪಾಸಣಾ ಶಿಬಿರ 

ಮುದ್ದೇಬಿಹಾಳ: ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯತ ವತಿಯಿಂದ ಜಟ್ಟಗಿ ಗ್ರಾಮದ KEB ಸ್ಟೇಷನ್ ಪಕ್ಕದಲ್ಲಿ ಕಂದಕ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ವಿಬಿ-ಜಿ ರಾಮ್-ಜಿ ಕೂಲಿಕಾರರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಶುಕ್ರವಾರ ನಡೆಯಿತು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂಗನಗೌಡ ಬಿರಾದಾರ ಅವರು, ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ವಿಬಿ-ಜಿ ರಾಮ್-ಜಿ ಯೋಜನೆಯಡಿ ಕಳೆದ ಜುಲೈ ತಿಂಗಳಿಂದ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ಎಲ್ಲ ಕೂಲಿಕಾರರು ಸದರಿ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಬಿಸಿಲಿನಲ್ಲಿ ಕೆಲಸ ಮಾಡುವುದರಿಂದ ಆಯಾಸ, ಕೆಮ್ಮು ಇನ್ನಿತರ ಅಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಲಕ್ಷಣಗಳಿದ್ದು, ಸೂಕ್ತ ಸಮಾಲೋಚನೆ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಬರಗಾಲ ಪರಿಸ್ಥಿತಿ ಇರುವುದರಿಂದ ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಲಾಗುವುದು. ಆಯಾ ಗ್ರಾಮ ಪಂಚಾಯತಿಗಳಲ್ಲಿ ಸಮುದಾಯ ಕಾಮಗಾರಿಗಳನ್ನು ಗುರುತಿಸಿ ಬೇಡಿಕೆ ಆಧಾರಿತ ಕೂಲಿಕಾರರಿಗೆ ಉದ್ಯೋಗ ನೀಡಲಾಗುವುದು. ಗುಳೆ ಹೋಗದೆ ನಿಮ್ಮೂರಲ್ಲೆ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡಿ. ದಿನ ಒಂದಕ್ಕೆ ರೂ. 382 ಕೂಲಿ ದರವಿದ್ದು, ಎಲ್ಲರು ಕೆಲಸಕ್ಕೆ ಹಾಜರಾಗಿ ಕೂಲಿ ಹಣ ಪಡೆಯಬಹುದು ಎಂದು ತಿಳಿಸಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ರಾಜು ವಂದಾಲ ಮಾತನಾಡಿ, ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದು, ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹುಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೂಲಿಕಾರರ ಬೇಡಿಕೆಗಳು ಹೆಚ್ಚು ಸಲ್ಲಿಕೆಯಾಗುತ್ತಿದ್ದು, ಆಯಾ ಗ್ರಾಮಗಳಲ್ಲಿ ಸಮುದಾಯ ಕಾಮಗಾರಿಗಳನ್ನು ಗುರುತಿಸಿ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದರು.
ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕಫ, ಟಿಬಿ ಹಾಗೂ ಇನ್ನಿತರ ಅಸಾಂಕ್ರಮಿಕ ರೋಗಗಳ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣಾ ಮಾಡಿ ಸೂಕ್ತ ಸಮಾಲೋಚನೆ ನೀಡಿದರು.
ಈ ಸಂದರ್ಭದಲ್ಲಿ ಹುಲ್ಲೂರ ಗ್ರಾಮ ಪಂಚಾಯತ ಆಡಳಿತಾಧಿಕಾರಿ ಜ್ಞಾನೇಶ್ವರ ಮುರಾಳ, ಕಾರ್ಯದರ್ಶಿ ಶ್ರೀಮತಿ ಕನೀಜಾ ಫಾತಿಮಾ ರಾಜಮಹ್ಮದ್, ತಾಲೂಕು ಪಂಚಾಯತ ವಿಬಿಜಿ ರಾಮಜಿ ಐಇಸಿ ಸಂಯೋಜಕ ಪರಮೇಶ ಹೊಸಮನಿ, ತಾಂತ್ರಿಕ ಸಹಾಯಕ ರವಿಶಂಕರ ಮಾಳೆ, ಸಮುದಾಯ ಆರೋಗ್ಯ ಅಧಿಕಾರಿ ಎಂ.ಎಸ್.ಕಬಾಡೆ, ವೀರೇಶ ದಿಂಡುವಾರ, ಎಂ.ಎಸ್.ಗೌಡರ ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ: ಆರಂಭಿಕ ಕ್ರಮವೇ ಪರಿಹಾರದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ: ಆರಂಭಿಕ ಕ್ರಮವೇ ಪರಿಹಾರಮಹಾರಾಣಾ ಪ್ರತಾಪಸಿಂಹ ಅವರ ಪುತ್ಥಳಿ ಅನಾವರಣ ಹೆಮ್ಮೆಯ ಸಂಗತಿ-ಕೂಚಬಾಳಮುದ್ದೇಬಿಹಾಳದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಹಸಿರು ತೋರಣ ಬಳಗದಿಂದ ಸನ್ಮಾನಗೋದಾವರಿ ಬಯೋರಿಫೈನರೀಸ್‌ನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ: ಕೇನ್ ಕ್ಯಾರಿಯರ್ ಪೂಜೆ ನೆರವೇರಿಕೆಸಿಗ್ನಲ್ ಇಲ್ಲ, ವೈಜ್ಞಾನಿಕ ಹಂಪ್‌ಗಳಿಲ್ಲ, ಪಾದಚಾರಿ ಮಾರ್ಗವೂ ಇಲ್ಲ; ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ!"ಮೂಡಲಗಿಯಲ್ಲಿ ಶ್ರೀ ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ"ಕಲಾ ಪ್ರತಿಭೆಯೂ ಮಕ್ಕಳ ಭವಿ? ರೂಪಿಸುತ್ತದೆ: ಎ.ಆರ್. ಛಬ್ಬಿಕನ್ನಡದ ಶಕ್ತಿ ಮಹಾಕವಿ ರನ್ನ: ಚಂದ್ರಶೇಖರ ದೇಸಾಯಿಜುಜಾಟದ ಮೇಲೆ ಪೊಲೀಸರ ದಾಳಿ