Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನಲ್ಲಿ 279 ಅನಧಿಕೃತ ಲೇಔಟ್​​ಗಳು: ಕಳವಳ ವ್ಯಕ್ತಪಡಿಸಿದ ಬಿಡಿಎ

ಬೆಂಗಳೂರು, ಏಪ್ರಿಲ್​ 23: ನಗರದಲ್ಲಿ ಹೆಚ್ಚುತ್ತಿರುವ ಅನಧಿಕೃತ ಲೇಔಟ್‌ಗಳ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಳವಳ ವ್ಯಕ್ತಪಡಿಸಿದೆ. ಸದ್ಯ ನಗರದಲ್ಲಿ 27,000 ಪ್ಲಾಟ್‌ಗಳನ್ನು ಹೊಂದಿರುವ 279 ಅನಧಿಕೃತ ಲೇಔಟ್‌ಗಳನ್ನು ಬಿಡಿಎ ಗುರುತಿಸಿದ್ದು, ಕಾನೂನು ಮತ್ತು ಆರ್ಥಿಕ ತೊಂದರಿಯಿಂದ ಪಾರಾಗಲು ಈ ಪ್ರದೇಶಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡದಂತೆ ಬಿಡಿಎ ಎಚ್ಚರಿಕೆ ನೀಡಿದೆ.

ಅನಧಿಕೃತ ಲೇಔಟ್‌ಗಳನ್ನು ತಡೆಗಟ್ಟಲು ಬಿಡಿಎ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಅನಧಿಕೃತ ಲೇಔಟ್‌ಗಳಲ್ಲಿ ಯಾವುದೇ ಹೊಸ ಆಸ್ತಿಯನ್ನು ನೋಂದಾಯಿಸದಂತೆ ಸಬ್ ರಿಜಿಸ್ಟ್ರಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ.

ಅನಧಿಕೃತ ಲೇಔಟ್‌ಗಳ ಬಗ್ಗೆ ಬಿಡಿಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಲೇಔಟ್‌ಗಳು ಇರುವ ತಾಲ್ಲೂಕು, ಹೋಬಳಿಗಳು, ಗ್ರಾಮಗಳು ಮತ್ತು ಸರ್ವೆ ನಂಬರ್‌ಗಳ ವಿವರಗಳ ಸಮಗ್ರ ವರದಿಯನ್ನು ಸಹ ಪ್ರಕಟಿಸಿದೆ.

ಯಲಹಂಕ, ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪೂರ್ವ ತಾಲ್ಲೂಕುಗಳಲ್ಲಿ ಈ ಅನಧಿಕೃತ ಲೇಔಟ್‌ಗಳಿವೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಬಿಡಿಎಯಿಂದ ಯಾವುದೇ ಅನುಮೋದನೆ ಪಡೆದಿಲ್ಲ. ಒಟ್ಟು 279 ಬಡಾವಣೆಗಳ ಪೈಕಿ ಬಿದರಹಳ್ಳಿ ಹೋಬಳಿ 52, ಯಲಹಂಕ ಹೋಬಳಿ 16, ಜಾಲ ಹೋಬಳಿ 29, ಕೆಂಗೇರಿ 41, ಉತ್ತರಹಳ್ಳಿ 4, ಜಿಗಣಿ 53, ಬೇಗೂರು 14, ಕೆಆರ್ ಪುರಂ 5, ಕೆಆರ್ ಪುರಂ 5, ಯಲಹಂಕ ಹೋಬಳಿ 279, ಸರ್ಜಾಪುರ ಮತ್ತು ವರ್ತೂರಿನಲ್ಲಿ 8 ಬಡಾವಣೆಗಳಿವೆ.

  • ಆನೇಕಲ್ ತಾಲೂಕು: ಬಿಲ್ವಾರದಹಳ್ಳಿ, ಕಲಕೆರೆ, ಹುಲಹಳ್ಳಿ, ಹುಲಿಮಂಗಲ, ಬೇಗಿಹಳ್ಳಿ, ಸಿಂಗೇನ ಅಗ್ರಹಾರ, ಚಿಕ್ಕೆನೆಕ್ಕುಂದಿ, ಹಲಸಹಳ್ಳಿ ತಿಪ್ಪಸಂದ್ರ, ಹುನ್ನೂರು, ಹಳೇ ಸಂಪಿಗೆಹಳ್ಳಿ, ಹೆಗೊಂಡನಹಳ್ಳಿ, ಕತ್ರಿಗುಪ್ಪೆ ರಾಮಣ್ಣನಾಯಕನಹಳ್ಳಿ, ಶ್ರೀರಾಮಪುರದನಹಳ್ಳಿ, ಶ್ರೀರಾಮಪುರದನಹಳ್ಳಿ, ಗಟ್ಟಲಹಳ್ಳಿ, ಗಟ್ಟಲಹಳ್ಳಿ , ದೊಮ್ಮಸಂದ್ರ, ಸೂಲಿಕುಂಟೆ, ಆವಲಹಳ್ಳಿ , ಕೊಡತಿ, ಹುನ್ನೂರು, ರಾಯಸಂದ್ರ, ಕಗ್ಗಲೀಪುರ, ಕೊಮ್ಮಸಂದ್ರ, ಮತ್ತಿತರ ಗ್ರಾಮಗಳು.

  • ಬೆಂಗಳೂರು ಪೂರ್ವ: ಅಗ್ರಹಾರ, ಬಂಡೆಬೊಮ್ಮಸಂದ್ರ, ಯರಪ್ಪನಹಳ್ಳಿ, ಕಾಡ, ಅನಗಳಾಪುರ, ಕಾಡುಸೊನ್ನಪ್ಪನಹಳ್ಳಿ, ರಾಂಪುರ, ಬಿದರಹಳ್ಳಿ, ಮತ್ತು ಇತರೆ.

  • ಬೆಂಗಳೂರು ದಕ್ಷಿಣ: ಕೆಂಗೇರಿ ಹೋಬಳಿ, ತಗಚಗುಪ್ಪೆ, ಕೆ. ಗೊಲ್ಲಹಳ್ಳಿ, ದೇವಗೆರೆ, ಗುಡಿಮಾವು, ಕಂಬಿಪುರ, ಅಗರ.

  • ಯಲಹಂಕ: ಜಾಲ ಹೋಬಳಿಯ ಸಾತನೂರು, ಬೈಯಪ್ಪನಹಳ್ಳಿ, ಸಿಂಗನಾಯಕನಹಳ್ಳಿ, ಮುದ್ದನಹಳ್ಳಿ, ಬೆಟ್ಟಹಲಸೂರು, ಹುಣಸಮಾರನಹಳ್ಳಿ, ಕಟ್ಟಿಗೇನಹಳ್ಳಿ, ಮಾರೇನಹಳ್ಳಿ, ಗಂಟಿಗಾನಹಳ್ಳಿ, ಮತ್ತಿತರೆ ಗ್ರಾಮಗಳು.


ಬಿಡಿಎ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ‘ಈ ಗುತ್ತಿಗೆದಾರರು ಮತ್ತು ಬಿಲ್ಡರ್‌ಗಳು ಬಿಡಿಎ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ನಿರ್ಮಿಸಿಲಾದ ರಸ್ತೆಗಳು ನಿಗದಿತ ಅಗಲ ಹೊಂದಿಲ್ಲ. ಉದ್ಯಾನವನಗಳು ಅಥವಾ CA ಸೈಟ್‌ಗಳಿಗೆ ಯಾವುದೇ ಜಾಗವನ್ನು ನಿಗದಿಪಡಿಸಲಾಗಿಲ್ಲ. ಬೋರ್‌ವೆಲ್‌ ಕೊರೆಯಲಾಗಿದೆ. ವಿದ್ಯುತ್‌ ಒದಗಿಸುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಪ್ಲಾಟ್ ಖರೀದಿದಾರರು ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ