Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈಲು ಕಾಮಗಾರಿ ಹಿನ್ನೆಲೆ ಹುಬ್ಬಳ್ಳಿ - ಬೆಂಗಳೂರು ರೈಲುಗಳ ಮಾರ್ಗ ಬದಲಾವಣೆ

ಹುಬ್ಬಳ್ಳಿ, ಏಪ್ರಿಲ್ 12 : ದಾವಣಗೆರೆ ಸಮೀಪ ರೈಲು ಕಾಮಗಾರಿ ಹಿನ್ನೆಲೆ ಪ್ರಮುಖ ರೈಲುಗಳು ಮಾರ್ಗ ಬದಲಾವಣೆ ಮಾಡಲಾಗಿದೆ. ವಿಜಯಪುರ ಮಂಗಳೂರು, ಮೈಸೂರು ಪಂಢರಾಪುರ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ರಾಣಿಚೆನ್ನಮ್ಮ ಸೇರಿ ವಿವಿಧ ರೈಲುಗಳು ತಡವಾಗಿ ಸಂಚರಿಸಲಿವೆ. ಅವುಗಳ ವಿವರ ಇಂತಿದೆ.


ಮಂಗಳೂರು - ವಿಜಯಪುರ, ಮೈಸೂರು ಪಂಢರಾಪುರ ಎಕ್ಸ್‌ಪ್ರೆಸ್‌ ಸೇರಿ ಹುಬ್ಬಳ್ಳಿ ಮಾರ್ಗದ ಪ್ರಮುಖ 3 ರೈಲುಗಳ ರೈಲುಗಳ ಮಾರ್ಗ ಬದಲಾವಣೆಯಾಗಿದ್ದು, 2 ರೈಲು ರದ್ದಾಗಿದೆ. 10 ರೈಲುಗಳು ತಡವಾಗಿ ಸಂಚಾರ ಮಾಡಲಿವೆ.

ಏಪ್ರಿಲ್‌ 12 ರಂದು ಮೈಸೂರಿನಿಂದ ಪಂಢರಾಪುರಕ್ಕೆ ತೆರಳುವ ರೈಲು (ರೈಲು ಗಾಡಿ ಸಂಖ್ಯೆ 16535) ಹಾಗೂ ಮಂಗಳೂರಿನಿಂದ ವಿಜಯಪುರಕ್ಕೆ ತೆರಳುವ ರೈಲು (ರೈಲು ಗಾಡಿ ಸಂಖ್ಯೆ 07378 ) ಚಿಕ್ಕಜಾಜೂರು, ರಾಯದುರ್ಗ, ಗದಗ ಮಾರ್ಗದಲ್ಲಿ ಸಂಚರಿಸಲಿದೆ. ದಾವಣಗೆರೆ, ಹರಿಹರ, ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ, ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಈ ಪ್ರಯಾಣಿಕರು ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ.

06245 ಹರಿಹರ ಹೊಸಪೇಟೆ ಡೆಮೊ ರೈಲು ಕೂಡ ದಾವಣಗೆರೆ ನಿಲ್ದಾಣಕ್ಕೆ ಆಗಮಿಸುವುದಿಲ್ಲ. ಬದಲಾವಣೆ ಹರಿಹರದಿಂದ ನೇರವಾಗಿ ತೆಲಗಿ, ಹರಪನಹಳ್ಳಿ ಕಡೆ ತೆರಳಲಿದೆ.

ಯಾವ ರೈಲುಗಳು ರದ್ದು? :




  • ಏಪ್ರಿಲ್‌ 13 ರಂದು ರೈಲು ಸಂಖ್ಯೆ 16214 ಹುಬ್ಬಳ್ಳಿ - ಅರಸಿಕೆರೆ ಎಕ್ಸ್‌ಪ್ರೆಸ್‌, ಏಪ್ರಿಲ್‌ 14 ರಂದು ರೈಲು ಗಾಡಿ ಸಂಖ್ಯೆ 16213 ಅರಸೀಕೆರೆ- ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲನ್ನು ರದ್ದುಗೊಳಿಸಲಾಗಿದೆ.


  • ಏಪ್ರಿಲ್‌ 12 ಕ್ಕೆ ವಿವಿಧ ರೈಲುಗಳು ತಡವಾಗಿ ಸಂಚಾರ: ಕೆಎಸ್‌ಆರ್‌ ಬೆಂಗಳೂರು - ಬೆಳಗಾವಿ ಸೂಪರ್‌ ಪಾಸ್ಟ್‌ರೈಲು ಮಾರ್ಗದಲ್ಲಿ 110 ನಿಮಿಷಗಳು ತಡವಾಗಿ ಸಂಚರಿಸಲಿದೆ.

  • ಯಶವಂತಪುರ-ವಿಜಯಪುರ, ಮೈಸೂರು-ಬೆಳಗಾವಿ, ಮೈಸೂರು-ಹಜರತ್ ನಿಜಾಮುದ್ದೀನ್ , ಕೆಎಸ್ಆರ್ ಬೆಂಗಳೂರು-ಸಾಂಗ್ಲಿ ರಾಣಿಚೆನ್ನಮ್ಮ ಎಕ್ಸ್‌ಪ್ರೆಸ್‌, ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್‌, ಹುಬ್ಬಳ್ಳಿ-ಡಾ. ಚೆನ್ನೈ ಸೆಂಟ್ರಲ್ ರೈಲು, ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್‌, ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್‌ ರೈಲುಗಳು ಕೂಡ 30 ರಿಂದ 90 ನಿಮಿಷದವರೆಗೂ ತಡವಾಗಿ ಸಂಚರಿಸಲಿವೆ.


ರೈಲುಗಳ ಮಾರ್ಗ ಬದಲಾವಣೆ : ತಿರುಪತಿ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವುದರಿಂದ ಈ ಕೆಳಗಿನ ರೈಲುಗಳು ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.

Advertisement



  • ಏಪ್ರಿಲ್ 22 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12890 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಟಾಟಾನಗರ ಎಕ್ಸ್ ಪ್ರೆಸ್ ರೈಲು ಕಟಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ತಿರುಪತಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

  • ಏಪ್ರಿಲ್ 16, 18 ಮತ್ತು 23 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12836 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಹಟಿಯಾ ಎಕ್ಸ್ ಪ್ರೆಸ್ ರೈಲು ಕಟಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಚಿತ್ತೂರು ಮತ್ತು ತಿರುಪತಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.


ರೈಲುಗಳು ನಿಯಂತ್ರಣ : ಏಪ್ರಿಲ್ 10 ರಿಂದ 16 ರವರೆಗೆ ಜಲಗಾಂವ್-ಮನ್ಮಾಡ್ ಭಾಗದ ನಡುವಿನ 3ನೇ ಮಾರ್ಗಕ್ಕೆ ಸಂಬಂಧಿಸಿದಂತೆ ಚಾಲಿಸಗಾಂವ್ ಯಾರ್ಡ್ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ ಎಂದು ಮಧ್ಯ ರೈಲ್ವೆಯು ಸೂಚಿಸಿದೆ.




  • ಏಪ್ರಿಲ್ 15 ರಂದು ವಾಸ್ಕೋ ಡ ಗಾಮಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12779 ವಾಸ್ಕೋ ಡ ಗಾಮಾ - ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

  • ಏಪ್ರಿಲ್ 15 ರಂದು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್-ವಾಸ್ಕೋ ಡ ಗಾಮಾ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 145 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*