Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

         ಪ್ರಶಸ್ತಿ ವಿಜೇತ ಕೃಷಿ ಅಧಿಕಾರಿ ಕುಂಬಾರರಿಗೆ ನಾಗರಿಕರಿಂದ ಸನ್ಮಾನ


  ಬೈಲಹೊಂಗಲ-ತಾಲೂಕಿನ ನೇಸರಗಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಬಸವ ನಗರದ ನಿವಾಸಿ ರುದ್ರಪ್ಪ ಕುಂಬಾರ ಇವರಿಗೆ ಇಲಾಖೆಯು ಉತ್ತಮ ಸೇವಕ ಎಂದು ೨೦೨೫-೨೬ ನೇ ಸಾಲಿನ ಪ್ರಶಂಸನಾ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಸ್ಮರಿಸಿ ಬಡಾವಣೆಯ ನಿವಾಸಿಗಳು ರವಿವಾರ ಯೋಗ ಧ್ಯಾನ ಮಂದಿರದಲ್ಲಿ ಸತ್ಕರಿಸಿದರು. 
   ರುದ್ರಪ್ಪ ಕುಂಬಾರ ಅವರು ಸತ್ಕಾರ ಸ್ವೀಕರಿಸಿ ಮಾತನಾಡಿ, ಭಗವಂತ ರೈತರ ಸೇವೆ ಮಾಡುವ ಸದಾವಕಾಶ ಕೊಟ್ಟಾಗ ಬದ್ದತೆಯಿಂದ ಸಾರ್ವಜನಿಕ ವಲಯದಲ್ಲಿ ನಿರ್ವಹಿಸಿ ಜನರ, ಅಧಿಕಾರಿಗಳ ಪ್ರೀತಿಗೆ ಪಾತ್ರರಾಗಬೇಕು. ಬಡ ರೈತರಿಗಾಗಿ ಅನುಷ್ಠಾನಗೊಂಡ ಯೋಜನೆಗಳನ್ನು ನಿಯಮಿತವಾಗಿ ತಲುಪಿಸಿದಾಗ ಕರ್ತವ್ಯಕ್ಕೆ ಮೆರಗು ಬರುತ್ತದೆ ಎಂದರು.
   ಉದ್ಯಮಿ ನಾಗರಾಜ ಗುಂಡ್ಲೂರ ಮಾತನಾಡಿ, ಅನೇಕ ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುಂಬಾರ ಅವರು ನಿಷ್ಠೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರ ಪ್ರಯುಕ್ತ ಪ್ರಶಸ್ತಿಗೆ ಭಾಜನರಾಗಿರುವದು ಹೆಮ್ಮೆಯಾಗಿದೆ ಎಂದರು. 
    ಅಶೋಕ ಮಳೆಪ್ಪನವರ, ಮತ್ತಪ್ಪ ಗಾಣಿಗೇರ, ಆರ್.ಬಿ.ಹಂಚಿನಮನಿ, ವ್ಹಿ.ಎ.ಕಡಕೊಳ, ಚಂದರಶೇಖರ ಹುದ್ದಾರ, ಪೂರ್ಣಿಮಾ ಯಲಿಗಾರ, ವೀರಣ್ಣ ಕಡಕೋಳ, ಅಕ್ಕಮಹಾದೇವಿ ಕುಂಬಾರ, ಅನ್ನಪೂರ್ಣ ಕುಂಬಾರ, ಕಾವ್ಯಾ ಗುಂಡ್ಲೂರ, ರೂಪಾ ಕುಂಬಾರ, ಮಹಾಂತೇಶ ರಾಜಗೋಳಿ ಉಪಸ್ಥಿತರಿದ್ದರು. ಕಾವ್ಯಾ ಗುಂಡ್ಲೂರ ಸ್ವಾಗತಿಸಿ, ನಿರೂಪಿಸಿದರು. 
  ಪೋಟೋ ಶೀರ್ಷಿಕೆ-ಬೈಲಹೊಂಗಲದ ಬಸವ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ, ಪ್ರಶಸ್ತಿ ವಿಜೇತ ರುದ್ರಪ್ಪ ಕುಂಬಾರ ಅವರನ್ನು ನಾಗರಿಕರು ಸತ್ಕರಿಸಿದರು. 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST