LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಅಮ್ಮಾ..... ಬಾ... ಮಾ.. ಮನೆಗೆ ಹೋಗೋಣ...ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಗೌಡ ಮಗಳು

ಬೆಂಗಳೂರು ಜೂನ್ 21: ಕರುಳ ಬಳ್ಳಿ ಸಂಬಂಧ ಅಂದರೆ ಹಾಗೇ. ತನ್ನವರಿಗೆ ಏನಾದ್ರೂ ಆದರೆ ಅದು ಸಹಿಸುವುದೇ ಇಲ್ಲ. ಅದರಲ್ಲೂ ತಾಯಿ ಮಕ್ಕಳ ಸಂಬಂಧ ಎಲ್ಲಾ ಸಂಬಂಧಗಳಿಗಿಂತ ಮಿಗಿಲಾದದ್ದು. ಮಕ್ಕಳಿಗೆ ಏನಾದ್ರು ಆದರೆ ತಾಯಿ ಹೃದಯ ಹೇಗೆ ಚಡಿಪಡಿಸುತ್ತೋ ಹಾಗೇ ತಾಯಿಗೆ ಸಣ್ಣ ಬೇಸರವಾದರೂ ಮಕ್ಕಳ ಮನಸ್ಸು ತಳಮಳಗೊಳ್ಳುತ್ತೆ. ಜೈಲುಪಾಲಾಗುತ್ತಿರುವ ತಾಯಿಯನ್ನು ಕಂಡು ಮಗಳು ಬಿಕ್ಕಿ ಬಿಕ್ಕಿ ಅತ್ತ ಕರುಳು ಹಿಂಡುವ ದೃಶ್ಯ ಕಳೆದ ದಿನ ನ್ಯಾಯಾಲಯದ ಮುಂದೆ ನಡೆದಿದೆ.

ಹೌದು... ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಜೈಲು ಪಾಲಾಗುತ್ತಿರುವ ದೃಶ್ಯವನ್ನು ಕಂಡು ಮಗಳ ಮನಸ್ಸು ನೊಂದು ಹೋಯಿತು. ಅಮ್ಮಾ..... ಬಾ... ಮಾ.. ಮನೆಗೆ ಹೋಗೋಣ... ಅಂತ ಪವಿತ್ರಾ ಗೌಡ ಮಗಳು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಕಲ್ಲು ಮನಸ್ಸನ್ನೂ ಕರಗಿಸುವಂತಿತ್ತು.

ತನ್ನ ಅಜ್ಜಿಯೊಂದಿಗೆ ತಾಯಿ ಪವಿತ್ರಾ ಗೌಡ ಅವರನ್ನ ನೋಡಲು ಬಂದಿದ್ದ ಮಗಳು ಖುಷಿ, ತಾಯಿಯನ್ನು ಪೊಲೀಸ್ ವಾಹನದಲ್ಲಿ ಕೂರಿಸುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಅಮ್ಮಾ ಬಾ.. ಮಾ... ಅಂತ ಅಮ್ಮನನ್ನು ಕೈ ಚಾಚಿ ಕರೆದಿದ್ದಾಳೆ. ಈ ದೃಶ್ಯ ನಿಜಕ್ಕೂ ಅಲ್ಲಿದ್ದವರ ಕಣ್ಣಲ್ಲಿ ನೀರು ತರಿಸಿದೆ. ತಾಯಿ ಮಗಳ ನೋವನ್ನು ಕಂಡು ಸ್ಥಳದಲ್ಲಿವರ ಕಣ್ಣು ತುಂಬಿ ಬಂದಿವೆ.

ತಾಯಿ ಮಕ್ಕಳು ದೂರವಾಗುವ ಸನ್ನಿವೇಶ ನಿಜಕ್ಕೂ ಯಾರಿಗೂ ಬೇಡ. ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ಅವರನ್ನು ಗುರುವಾರ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಾದ ವಿವಾದಗಳನ್ನು ಆಲಿಸಿದ ಕೋರ್ಟ್ ದರ್ಶನ್ ಸಹಿತ 4 ಮಂದಿಯನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಿದರೆ, ಪವಿತ್ರಾ ಗೌಡ ಸಹಿತ 9 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

 

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್