ವೇದಿಕೆ ಮೇಲೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಹಾಜರಿ ಹಾಕಿದ್ದರು. ವೇದಿಕೆ ಏರಿದ ಐಶ್ವರ್ಯಾ ಅವರು ಪ್ರಧಾನಿ ಮೋದಿ ಬಳಿ ತೆರಳಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಮೋದಿ ಅವರು ಐಶ್ವರ್ಯಾ ತಲೆಮೇಲೆ ಕೈ ಇರಿಸಿ ಆಶೀರ್ವಾದ ಮಾಡಿದ್ದಾರೆ. ಐಶ್ವರ್ಯಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು.
ವೇದಿಕೆ ಮೇಲೆ ಐಶ್ವರ್ಯಾ ಅವರು ಮಾತನಾಡಿದರು. ‘ಜಗತ್ತಿನಲ್ಲಿ ಒಂದೇ ಜಾತಿ ಇರುವುದು, ಅದುವೇ ಮಾನವೀಯತೆ. ಒಂದೇ ಧರ್ಮ ಇರೋದು ಅದುವೇ ಪ್ರೀತಿ. ಒಂದೇ ಭಾಷೆ ಇರೋದು ಅದುವೆ ಹೃದಯದ ಭಾಷೆ. ದೇವ ಒಬ್ಬನೇ, ಅವನು ಸರ್ವವ್ಯಾಪಿ’ ಎಂದು ಐಶ್ವರ್ಯಾ ರೈ ಹೇಳಿದರು.
ಪ್ರಧಾನಿ ಮೋದಿ ಬಗ್ಗೆ ಅವರು ಸಂತೋಷ ಹೊರಹಾಕಿದರು. ‘ಈ ವಿಶೇಷ ಸಂದರ್ಭದಲ್ಲಿ ಇಂದು ನಮ್ಮೊಂದಿಗೆ ಇದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಸ್ಫೂರ್ತಿದಾಯಕ ಮಾತುಗಳನ್ನು ಕೇಳಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಐಶ್ವರ್ಯಾ ಹೇಳಿದರು.