LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಹೆತ್ತವರು ಹೆಮ್ಮೆ ಪಡುವಂತಹ ಸಾಧನೆ ಮಾಡಿ-ಪೋತದಾರ



ತಾಳಿಕೋಟೆ,   ವಿದ್ಯಾರ್ಥಿಗಳು ಯಾವುದೇ ರೀತಿಯ ವ್ಯಸನಗಳಿಗೆ ಒಳಗಾಗದೆ, ಉತ್ತಮ ಸಂಸ್ಕಾರ ಹಾಗೂ ಶಿಸ್ತು ಬೆಳೆಸಿಕೊಂಡು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಬೇಕು. ತಾವು ಕಲಿತ ಶಿಕ್ಷಣ ಸಂಸ್ಥೆ ಹಾಗೂ ಹೆತ್ತವರು ಹೆಮ್ಮೆ ಪಡುವಂತಹ ಕಾರ್ಯಗಳನ್ನು ಮಾಡಿ ಕೀರ್ತಿ ತರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.
       ಬುಧವಾರರಂದು ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ.) ವತಿಯಿಂದ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದ ಮೊದಲ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಬಿ.ಇಡಿ. ಪ್ರಶಿಕ್ಷಣಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮುಂದೆ ಶಿಕ್ಷಕರಾಗಿ ಸಮಾಜ ನಿರ್ಮಾಣದ ಮಹತ್ವದ ಹೊಣೆಗಾರಿಕೆಯನ್ನು ನಿರ್ವಹಿಸಬೇಕಿರುವುದರಿಂದ, ವಿದ್ಯಾರ್ಥಿಗಳು ಮೊದಲು ತಮ್ಮ ಬದುಕಿನಲ್ಲಿ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು. ಜೀವನದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಹೆತ್ತವರು ಮಕ್ಕಳಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಅವರ ನಿರೀಕ್ಷೆಗಳನ್ನು ಹುಸಿಗೊಳಿಸದೆ, ಹೆತ್ತವರು ತಲೆತಗ್ಗಿಸುವಂತಹ ಯಾವುದೇ ಕೆಲಸ ಮಾಡಬಾರದು. ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಆದರೆ ಉತ್ತಮ ವ್ಯಕ್ತಿತ್ವದೊಂದಿಗೆ ಸಂಸ್ಕಾರದೊಂದಿಗೆ ಬದುಕುವುದು ಮುಖ್ಯ ಎಂದು ಸಲಹೆ ನೀಡಿದರು. ಮೊಬೈಲ್ ಬಳಕೆಯ ಗೀಳಿನಿಂದ ವಿದ್ಯಾರ್ಥಿಗಳು ಆದಷ್ಟು ದೂರವಿರಬೇಕು. ಮೊಬೈಲ್ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು ಹೊರತು ಅದು ಜೀವನದ ಅವಿಭಾಜ್ಯ ಭಾಗವಾಗಬಾರದು. ಇಂತಹ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ವಿದ್ಯಾರ್ಥಿಗಳ ಸೌಭಾಗ್ಯವಾಗಿದೆ ಎಂದು ಹೇಳಿದರು.
       ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಕಲಿಕೇರಿಯ ಶ್ರೀ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ವಿದ್ಯಾರ್ಥಿ ಜೀವನ ಬಂಗಾರದಂತಾಗಬೇಕಾದರೆ ಶಿಸ್ತು, ಸಂಸ್ಕಾರ ಹಾಗೂ ಉತ್ತಮ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಶಿಕ್ಷಣದಿಂದ ವ್ಯಕ್ತಿಯ ಸರ್ವಾಂಗೀಣ ಪ್ರಗತಿ ಸಾಧ್ಯ. ಶಿಕ್ಷಕನು ಸಮಾಜವೆಂಬ ಕಟ್ಟಡಕ್ಕೆ ಭದ್ರ ಬುನಾದಿ ಹಾಕುವ ಜವಾಬ್ದಾರಿ ಹೊಂದಿರುತ್ತಾನೆ. ಬುನಾದಿ ಗಟ್ಟಿಯಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಮೊದಲು ತಮ್ಮ ಬದುಕನ್ನು ಆದರ್ಶಪ್ರಾಯವಾಗಿಸಿಕೊಂಡು ಉತ್ತಮ ಆಚಾರ-ವಿಚಾರಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
       ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಂ. ಬಂಟನೂರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಯು.ಎನ್. ಮಂಗೊಂಡ ವಾರ್ಷಿಕ ವರದಿ ವಾಚಿಸಿದರು. ಸುರೇಶ ಬಡಿಗೇರ ಅತಿಥಿ ಪರಿಚಯ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಉಪನಿರ್ದೇಶಕ ಮಹೇಶ ಪೋತದಾರ ಹಾಗೂ ತಾಲೂಕು ಸಹಾಯಕ ನಿರ್ದೇಶಕಿ ಶ್ರೀಮತಿ ಬಸಂತಿ ಮಠ ಅವರನ್ನು ಸನ್ಮಾನಿಸಲಾಯಿತು.
      ಈ ಸಮಯದಲ್ಲಿ ವೀ.ವಿ. ಸಂಘದ ಅದ್ಯಕ್ಷರಾದ ವ್ಹಿ.ಸಿ. ಹಿರೇಮಠ, ಕಾರ್ಯದರ್ಶಿ ಕೆ.ಎಸ್. ಮುರಾಳ, ಎಂ.ಎಸ್. ಸರಶಟ್ಟಿ, ಐ.ಬಿ. ಬಿಳೇಭಾವಿ, ಆರ್.ಸಿ. ಪಾಟೀಲ, ಕೆ.ಸಿ. ಸಜ್ಜನ, ಪ್ರಭುಗೌಡ ಮದರಕಲ್, ಜಿ.ಎಂ. ಪಾಟೀಲ, ಎಸ್.ಬಿ. ಹಿಪ್ಪರಗಿ, ಮಹಾಂತೇಶ ವಾಲಿ, ಬಿ.ಎಸ್. ಬಿರಾದಾರ, ವಿದ್ಯಾರ್ಥಿ ಒಕ್ಕೂಟದ ಪ್ರ.ಕಾ. ಪಾರ್ವತಿ ಕಟ್ಟಿಮನಿ, ಶಿವರಾಜ ಉಪ್ಪಾರ, ಪ್ರಥಮ ವರ್ಷದ ಪ್ರತಿನಿಧಿಗಳಾದ ಯಮನಪ್ಪ ತಾಳಿಕೋಟಿ, ಶ್ರೀಮತಿ ಮಧು ನಾಡಗೌಡ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
     ದೇವರಾಜ ಗೋಪಾಲಯ್ಯ ಪ್ರಾರ್ಥಿಸಿದರು. ಉಪನ್ಯಾಸಕ ಗಂಗನಗೌಡರ ಸ್ವಾಗತಿಸಿದರು. ಐ.ಕ್ಯೂ.ಎ.ಸಿ. ಸಂಯೋಜಕ ಯು.ಎನ್. ಮಂಗೊಂಡ ನಿರೂಪಿಸಿ ವಂದಿಸಿದರು.
ವಿದ್ಯಾರ್ಥಿಯಾದವರು ಸಂಸ್ಕಾರವನ್ನು ಕಲಿತುಕೊಳ್ಳಬೇಕು ಜೀವನದ ಮೌಲ್ಯದೊಂದಿಗೆ ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು ಹೆತ್ತ ತಂದೆ ತಾಯಿಯ ಋಣ ಯಾರಿಂದಲೂ ತಿರಸಲು ಸಾದ್ಯವಿಲ್ಲಾ ಅವರ ಕಂಡು ಕನಸ್ಸು ಸಾಕಾರಗೊಳಿಸುವತ್ತ ನಿಮ್ಮ ಶಿಕ್ಷಣದ ಹೆಜ್ಜೆ ಇಡುವದರ ಕಡೆಗೆ ಗಮನ ಕೊಡಬೇಕು.
                                           

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಂತ್ರಜ್ಞಾನ ಬೆಳೆಯಲು ಇಂಜಿನೀಯರ ಕಾರಣ :ಶ್ರೀಧರ ಕೋರಿ*ಮಂಡೋಳಿಯಲ್ಲಿ ₹2 ಕೋಟಿ ವೆಚ್ಚದ ದೇವಾಲಯಗಳ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಲಕ್ಷ್ಮೀ ಹೆಬ್ಬಾಳಕರ್* ವಿಮಲಾ ಗುರುಪುತ್ರಪ್ಪ ಬಡಿಗೇರ ನಿಧನಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ: ಮೈತ್ರಾ ಹೊಂಗಲಕುಂಚದೊಂದಿಗೆ ಹೊಸ ಪಯಣ: ಚಿತ್ರ ಕಲಾವಿದರ ಸಂಘಟನೆಗೆ ಕರೆಇಂಡಿ: ಕರ್ನಾಟಕ ರಾಜ್ಯ (೬-೮) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಪದಾಧಿಕಾರಿಗಳ ಅವಿರೋಧ ಆಯ್ಕೆ25 ವರ್ಷಗಳ ಸುದೀರ್ಘ ಸೇವೆಗೆ ಪ್ರತಿಷ್ಠಿತ ಗೌರವ: ಡಾ. ದೀಪಾ ಮೆಟಗುಡ್ಡ ಅವರಿಗೆ ಐಎಪಿ ಫೆಲೋಶಿಪ್ ಪ್ರಶಸ್ತಿಕಾಗವಾಡದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆದುಪಧಾಳ ಜಲಾಶಯದ ನಿರೀಕ್ಷಣಾ ಮಂದಿರ ಅಭಿವೃದ್ಧಿ ಪಡಿಸುವಂತೆ ಕನ್ನಡ ಸೇನೆ  ಮನವಿಶಿವಯೋಗಿ ನಗರದಲ್ಲಿ ನೀರಿಗಾಗಿ ಪರದಾಟ; ಪಂಚಾಯಿತಿ ವಿರುದ್ಧ ನಿವಾಸಿಗಳು, ಶಾಲಾ ಮಕ್ಕಳ ಆಕ್ರೋಶ