LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ - ಎ.ಎ.ಖಾಜಿ


ಯರಗಟ್ಟಿ: ಮಕ್ಕಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಕ್ರೀಡಾಕೂಟಗಳು ವೇದಿಕೆಯಾಗಿವೆ ಎಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ ಖಾಜಿ ಹೇಳಿದರು.
ಪಟ್ಟಣದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು‘ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮತೋಲನವಾಗಿ ನೋಡಬೇಕು. ಕ್ರೀಡೆಯಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ’ ಎಂದರು.
ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಮಾತನಾಡಿ, ಆಟೋಟಗಳು ಮಕ್ಕಳ ಸ್ನಾಯುಗಳನ್ನು ಬಲಪಡಿಸುತ್ತವೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಅವರನ್ನು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತವೆ. ಇದು ಇಂದಿನ ದಿನಗಳಲ್ಲಿ ಕಾಡುವ ಬಾರೀ ತೂಕ (ಬೊಜ್ಜು) ಮತ್ತು ಸೋಮಾರಿತನವನ್ನು ತಡೆಯುತ್ತದೆ ಆಟವಾಡುವಾಗ ಮಕ್ಕಳು ತಂತ್ರಗಳನ್ನು ರೂಪಿಸುತ್ತಾರೆ, ಸಮಸ್ಯೆಗಳನ್ನು ಪರಿಹರಿಸಲು ಕಲಿಯುತ್ತಾರೆ. ಇದು ಅವರ ಸೃಜನಶೀಲತೆ  ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. 
ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಲಕ್ಕಪ್ಪ ಜಗದಾರ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪ.ಪಂ ನಾಮನಿರ್ದೇಶಕ ಸದಸ್ಯ ನಿಖಿಲ ಪಾಟೀಲ, ಬಿಸಿ ಉಟ ಅಧಿಕಾರಿ ಮೈತ್ರಾದೇವಿ ವಸ್ತ್ರದ, ದೈಹಿಕ ಶಿಕ್ಷಣಾಧಿಕಾರಿ ಸಂತೋಷ ಬಿರಾಜನವರ, ಬಸವೇಶ್ವರ ಪ್ರೌಢಶಾಲೆ ಅಧ್ಯಕ್ಷ ರಮೇಶಗೌಡ ದೇವರಡ್ಡಿ, ಶಿಕ್ಷಣ ಸಂಯೋಜಕ ಎಂ.ಬಿ.ಕಡಕೋಳ, ಎ.ಬಿ.ಕಾಮಣ್ಣವರ, ಮುಖ್ಯ ಶಿಕ್ಷಕ ಬಿ.ಎಸ್.ಆಲದಕಟ್ಟಿ, ಎ.ಎ.ಮಕ್ತುಮನವರ, ಪಿಟಿಪಿಎಸ್ ಅಧ್ಯಕ್ಷ ಎಂ.ಸಿ.ಕುಂಬಾರ, ವಿಜಯ ಮೇಳವಂಕಿ, ಡಿ.ಎಸ್.ಭಜಂತ್ರಿ, ಎಸ್.ಬಿ.ಮಿಕಲಿ, ಸ್ವೇತಾ ನೈನಾರ, ಜಿ.ಎನ್.ಮಲಕನ್ನವರ, ಬಿ.ಎಸ್.ಸಿದ್ದಬಸನ್ನವರ, ವಸಂತ ಬಡಿಗೇರ, ಎಂ.ಎಂ.ಮಲಕನ್ನವರ, ಎಸ್.ಎಂ.ಪೂಜೇರ ಸೇರಿದಂತೆ ಯರಗಟ್ಟಿ ವಲಯ ದ್ಯಹಿಕ ಶಿಕ್ಷಕರು ಅನೇಕರಿದ್ದರು.
೧೭ ಯರಗಟ್ಟಿ ೦೧ 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ೧೦೦ ಮೀಟರ್ ಓಟದಲ್ಲಿ ದ್ವಿತೀಯ: ಜಿಲ್ಲಾ ಮಟ್ಟಕ್ಕೆ ಚೇತನ ನ್ಯಾಮಗೌಡಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹ