ಗದಗ: ತಾಲೂಕಿನ ಹೊಸಹಳ್ಳಿ ಗ್ರಾಮದ ಬೂದಿಶ್ವರ ವಿದ್ಯಾಪೀಠದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ ಈರಪ್ಪ ಕುಲಕರ್ಣಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಿದ್ಯಾರ್ಥಿನಿಗೆ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಮಡಿವಾಳರ, ಸದಸ್ಯರು, ಮುಖ್ಯಾಧ್ಯಾಪಕಿ ಎಸ್.ಎಂ. ಆದಿ, ಶಿಕ್ಷರಾದ ಡಿ.ಎಸ್. ತಳವಾರ, ಎನ್.ಆರ್.ಕಮತ, ಕೆ.ವೈ.ಕಣಕಿಕೊಪ್ಪ, ರೇಷ್ಮಾ ಉಳಾಗಡ್ಡಿ, ಗ್ರಾಮದ ಹಿರಿಯರು ಅಭಿನಂದಿಸಿದ್ದಾರೆ.