ಬೆಂಗಳೂರು,
ರಾಜ್ಯದ ಹಲವೆಡೆ ಬಿಸಿಲಿನ ಅಬ್ಬರದ ನಡುವೆಯೂ ಕರಾವಳಿ ಸೇರಿ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದ್ದು, ಮೇ 11ರ ವರೆಗೂ ಕೆಲವೆಡೆ ಗುಡುಗು ಸಹಿತ ಮಳೆಯನ್ನು ಅಂದಾಜಿಸಲಾಗಿದೆ. ಅದಾಗಿಯೂ ಕರಾವಳಿ ಸೇರಿ ಉತ್ತರ ಒಳನಾಡು ಭಾಗದ ಜಿಲ್ಲೆಗಳಲ್ಲಿ ತೀವ್ರ ತಾಪಮಾನ ಕಂಡುಬರಲಿದೆ ಎನ್ನಲಾಗಿದೆ.