Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡೆಂಘೀ ಕಾಯಿಲೆ ತಡೆಗೆ ಶುಚಿತ್ವ, ಪರಿಸರ ಸ್ವಚ್ಛತೆ ಅತ್ಯಗತ್ಯ

ಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯ

ಹಸಿರು ಕ್ರಾಂತಿ ವರದಿ ಬೆಳಗಾವಿ
ಮಳೆಗಾಲದಲ್ಲಿ ಡೆಂಘೀ ಕಾಯಿಲೆಯಿಂದ ನಮ್ಮನ್ನು ಸಂರಕ್ಷಿಸಲು ಹಾಗೂ ಮುನ್ನೆಚ್ಚರಿಕಾ ಕ್ರಮ ವಹಿಸಲು 3ಸಿ ಗಳಾದ ಚೆಕ್‌, ಕ್ಲಿನ್‌, ಕವರ್‌ ಸೂತ್ರಗಳನ್ನು ಪಾಲಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜಗದೀಶ ಜಿಂಗಿ ಹೇಳಿದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರದ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ವಸತಿಯುತ ಶಾಲೆಯಲ್ಲಿ ಪರಿಸರ ದಿನಾಚರಣೆ ನಿಮಿತ್ತ ಮಳೆಗಾಲದಲ್ಲಿ ಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತೆ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು, ಸೊಳ್ಳೆ ಕಚ್ಚುವುದರಿಂದ ಹರಡುವ  ವೈರಲ್ ಕಾಯಿಲೆಯಾದ ಡೆಂಘೀಯಿಂದ ಸಂರಕ್ಷಿಸಲು ಸೊಳ್ಳೆಯ ಕುಳಿತುಕೊಳ್ಳುವ ನೀರಿನ ತೊಟ್ಟಿ ಹಾಗೂ ಸುತ್ತಲಿನ ನೀರು ಗುಂಡಿಗಳ ಸ್ಥಳಗಳನ್ನು ಚೆಕ್‌ ಮಾಡಬೇಕು, ಸೊಳ್ಳೆ ಕುಳಿತಿರುವ ಜಾಗವನ್ನು ಕ್ಲಿನ್‌ ಮಾಡಬೇಕು. ತದನಂತರದಲ್ಲಿ ಮತ್ತೆ ಅಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದೇ ಫುಲ್‌ ಕವರ್‌ ಮಾಡಬೇಕು ಎಂದು 3ಸಿ ಸೂತ್ರಗಳ ಬಗ್ಗೆ ವಿವರಿಸಿದರು.

ಸೋಂಕಿತ ಸೊಳ್ಳೆ ಕಚ್ಚಿದ ೪ ರಿಂದ ೧೦ ದಿನಗಳ ನಂತರ ಡೆಂಘೀ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತೀವ್ರ ಜ್ವರ ಕಾಣಿಸಿಕೊಂಡ ೨-೩ ದಿನಗಳಲ್ಲಿ ಚರ್ಮದ ಮೇಲೆ ಸಣ್ಣ ಕೆಂಪು ಕಲೆಗಳು ಅಥವಾ ದದ್ದುಗಳು ಕಾಣಿಸಿಕೊಳ್ಳುತ್ತವೆ. ತಲೆನೋವು ವಿಶೇಷವಾಗಿ ಕಣ್ಣುಗಳ ಹಿಂಭಾಗದಲ್ಲಿ ತೀವ್ರವಾದ ನೋವು ಕಾಣುವುದು, ಸ್ನಾಯುಗಳು, ಮೂಳೆಗಳು ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಊಟ ಸೇರದಿರುವುದು ಮತ್ತು ಆಗಾಗ್ಗೆ ವಾಂತಿಯಾಗುವುದಲ್ಲದೇ ವಿಪರೀತ ಆಯಾಸ ಮತ್ತು ಸುಸ್ತು ಡೆಂಘೀ ಸಾಮಾನ್ಯ ಲಕ್ಷಣಗಳಾಗಿದ್ದು, ಇದಕ್ಕೆ ಅಗತ್ಯ ಎಚ್ಚರಿಕೆ ಕ್ರಮವನ್ನು ವಹಿಸಲೇ ಬೇಕು ತಿಳಿಸಿದರು. 

ಡೆಂಘೀ ಕಾಯಿಲೆಯಿಂದ ದೂರ ಇರಬೇಕೆಂದರೇ ನಾವು ಹಾಗೂ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛತೆ ಅತ್ಯಂತ ಮುಖ್ಯವಾಗಿದೆ. ಮಳೆಗಾಲಕ್ಕೆ ಹುಲ್ಲು ಹೆಚ್ಚು ಬೆಳೆಯುವುದಲ್ಲದೇ ನೀರು ಅಲ್ಲಲ್ಲಿ ನಿಂತು ಸೊಳ್ಳೆ ತನ್ನ ಸಂತಾನೋತ್ಪತ್ತಿ ಮಾಡುತ್ತದೆ. ಹೀಗಾಗಿ ಸುತ್ತಲಿನ ಕಸ ಹಾಗೂ ನೀರಿನ ಸಂಗ್ರಹದ ತೊಟ್ಟಿಯಲ್ಲಿ ಓಪನ್‌ ಆಗಿ ಇಡದೇ ಅದನ್ನು ಪೂರ್ಣವಾಗಿ ಮುಚ್ಚಲ್ಪಡಬೇಕು ಎಂದು ಸಲಹೆ ನೀಡಿದರು. 

ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ಶಂಕರಗೌಡ ಪಾಟೀಲ ಡಾ.ಜಗದೀಶ ಜಿಂಗಿಯವರನ್ನು ಸನ್ಮಾನಿಸಿ ಮಾತನಾಡಿ, ಮಳೆಗಾಲದಲ್ಲಿ ಬರುವ ರೋಗಬಾಧೆಗಳಿಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದೆ. ಡಾ.ಜಿಂಗಿಯವರು ಹೇಳಿದಂತೆ ಯಾವುದಾರರೂ ರೋಗ ಲಕ್ಷಣಗಳು ಕಂಡು ಬಂದರೇ ವೈದ್ಯರ ಸಹಾಯ ಪಡೆದು ಚಿಕಿತ್ಸೆ ಕೊಡಿಸಲಾಗುವುದು ಎಂದು ತಿಳಿಸಿದರು.

ಅಂಶಕಾಲಿಕ ವಿಶೇಷ ಶಿಕ್ಷಕಿ ಸವಿತಾ ಹೊಳಿಯವರು ಡಾ.ಜಿಂಗಿಯವರು ಉಪನ್ಯಾಸವನ್ನು ಸನ್ನೆ ಭಾಷೆಯಲ್ಲಿ ತರ್ಜುಮೆ ಮಾಡಿ ಶ್ರವಣದೋಷವುಳ್ಳ ಮಕ್ಕಳಿಗೆ ಅರ್ಥವಾಗುವಂತೆ ಪ್ರಸ್ತುತಪಡಿಸಿದರು. ಅತಿಥಿಗಳ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಕನ್ನಡಭಾಷಾ ವಿಶೇಷ ಶಿಕ್ಷಕ ಮಹಾಂತೇಶ ಹುಲಗೂರ ಮಾಡಿದರು. ಶಾಲಾ ಸಿಬ್ಬಂದಿ ರಶ್ಮಿ ನವಲಕರ್‌ ಪರಿಸರ ಜಾಗೃತಿ ಕುರಿತು ಮಕ್ಕಳಿಂದ ನೃತ್ಯ ಪ್ರದರ್ಶನ ಮಾಡಿಸಿದರು. ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿಯವರಾದ ಮಾಲಾಶ್ರೀ ಕೊಲ್ಕಾರ, ಸುರೇಕಾ ಚಿನ್ನಪ್ಪಗೌಡರ, ದೀಪಾ ಕಳಸಣ್ಣವರ, ರತ್ನಾ ಅಂಬೇಗರ, ಶ್ರೀದೇವಿ ಕರಡಿಗುದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪರಿಸರ ಜಾಗೃತಿ, ಆರೋಗ್ಯ ಕಾಳಜಿಯ ಚಿತ್ರಕಲಾ ಪ್ರದರ್ಶನಕ್ಕೆ ಡಾ.ಜಿಂಗಿ ಮೆಚ್ಚುಗೆ

ಮಳೆಗಾಲದಲ್ಲಿ ಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತೆ ಕುರಿತು ಡಾ.ಜಗದೀಶ ಜಿಂಗಿ ಅವರು ನೀಡುವ ಉಪನ್ಯಾಸ ಆರಂಭವ ಮೊದಲೇ ಪರಿಸರ ಕುರಿತಾದ ಚಿತ್ರಗಳನ್ನು ಬಿಡಿಸಲು ಮಕ್ಕಳಿಗೆ ಶಿಕ್ಷಕ ಮಹಾಂತೇಶ ಹುಲಗೂರ ಮಾರ್ಗದರ್ಶನ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಮಕ್ಕಳು ಬಿಸಿ ನೀರು ಕುದಿಸಿ ಕುಡಿಯುವ, ಪ್ಲಾಸಿಕ್‌ ಕಡಿಮೆ ಬಳಕೆ, ಸೂರ್ಯನ ಬಿಸಿನ ಮಹತ್ವ, ಕೆಮ್ಮುವಾಗ ಕೈಗಳ ಬಳಕೆ, ಮಳೆಗೆ ಛತ್ರಿ ರಕ್ಷಣೆ, ಗಿಡ ನೆಡುವ, ಸೊಳ್ಳೆ ಪರದೆ ಬಳಕೆ, ನೀರು ಪೋಲಾಗುವುದು ತಡೆಯುವ, ಮರುಬಳಕೆಯ ಮಾಡುವ ಜಾಗೃತಿ ಸೇರಿದಂತೆ ವಿವಿಧ ಆಯಾಮದಲ್ಲಿ ಚಿತ್ರಗಳನ್ನು ಬಿಡಿಸಿ ಪರಿಸರ ಜಾಗೃತಿ ಹಾಗೂ ಆರೋಗ್ಯ ಕಾಳಜಿ ಕುರಿತು ಮಕ್ಕಳಲ್ಲಿರುವ ಕಲ್ಪನಾ ಲೋಕವನ್ನು ಚಿತ್ರಗಳಲ್ಲಿ ಹಿಡಿಟ್ಟಿರುವುದು ಡಾ.ಜಗದೀಶ ಜಿಂಗಿಯವರ ಮೆಚ್ಚುಗೆ ಪಾತ್ರವಾಯಿತು.

ಮಳೆಗಾಲದಲ್ಲಿ ಬಿಸಿಲಿನ ತಾಪ ಕಡಿಮೆ ಇರುವುದರಿಂದ ವೈರಸ್‌ಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ಕೈ, ಕಾಲು ಸೇರಿದಂತೆ ಬಟ್ಟೆಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಕೆಮ್ಮು, ಜ್ವರ, ನೆಗಡೆ ಹೊರತಾಗಿ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಬಹುದು. ಒಬ್ಬರು ಉಪಯೋಗಿಸಿ ಸೋಪನ್ನು ಬೇರೆಯವರು ಉಪಯೋಗಿಸದೇ ಪ್ರತ್ಯೇಕವಾಗಿ ಸಾಬೂನ್‌ ಇಟ್ಟುಕೊಳ್ಳಬೇಕು.
-ಡಾ.ಜಗದೀಶ ಜಿಂಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ