“ಉಚಿತ ಕಣ್ಣು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ”

Pratibha Boi
“ಉಚಿತ ಕಣ್ಣು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ”
Oplus_16908288
WhatsApp Group Join Now
Telegram Group Join Now

ಮೂಡಲಗಿ : ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ನೆರವಿನೊಂದಿಗೆ, ಎಕತಾ ಫೌಂಡೇಶನ್ ಗೋಕಾಕ ಹಾಗೂ ನದಾಫ್ ಹೈಟೆಕ್ ಕಣ್ಣಿನ ಆಸ್ಪತ್ರೆ ರಬಕವಿಯವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಮೂಡಲಗಿ ವಿದ್ಯಾನಗರದ ವಾರ್ಡ ನಂ.೧೪ ರಲ್ಲಿ ಉಚಿತ ಕಣ್ಣು ತಪಾಸಣೆ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಬಡ ಹಾಗೂ ವೃದ್ಧರ ನೆರವಿಗಾಗಿ ಅರಭಾವಿ ಕ್ಷೇತ್ರಾದ್ಯಂತ ಈಗಾಗಲೇ ಹಲವು ಉಚಿತ ಕಣ್ಣು ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತ ಬಂದಿದ್ದು, ಈಗ ಪಟ್ಟಣದ ವಾರ್ಡುಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಸಾಯಂಕಾಲದವರೆಗೂ ಸುಮಾರು ೫೦ ಕ್ಕೂ ಹೆಚ್ಚು ಜನ ಉಚಿತ ಕಣ್ಣು ತಪಾಸಣೆ ಮಾಡಿಸಿಕೊಂಡು ೧೫ ಜನ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹೆಸರು ನೋಂದಾಯಿಸಿಕೊಂಡರು.
ಶಿಬಿರದಲ್ಲಿ ಡಾ.ಸುಧೀರ ಸಾವರ್ಡೆ, ಸೈಯದ ಮುಜಾವರ, ಸಮದ ಅತ್ತಾರ ಸೇರಿದಂತೆ ಆಶಾ ಕಾರ್ಯಕರ್ತೆಯರಾದ ಸಂಗೀತಾ ಸಣ್ಣಕ್ಕಿ, ಮಂಜುಳಾ ಢವಳೇಶ್ವರ, ರೇಣುಕಾ ಅವರಾದಿ ಉಪಸ್ಥಿತರಿದ್ದರು.

 

 

 

WhatsApp Group Join Now
Telegram Group Join Now
Share This Article