ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ

MK HasiruKranti
ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ
WhatsApp Group Join Now
Telegram Group Join Now

ಸಂಕೇಶ್ವರ : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಪುರಸಭೆ ಕಾರ್ಯಾಲಯ ಸೇರಿದಂತೆ ಪಟ್ಟಣದವಿವಿಧೆಡೆ ಆಚರಿಸಲಾಯಿತು.

ಪಟ್ಟಣದ ಭೀಮನಗರದಲ್ಲಿನ ಡಾ. ಅಂಬೇಡ್ಕರ್ ಪ್ರತಿಮೆಗೆ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ ಹಾಗೂ ಗಣ್ಯರಿಂದ ಮಾಲಾರ್ಪಣೆ ಮಾಡಲಾಯಿತು.

ವಿವಿಧ ಸಂಸ್ಕೃತಿ, ಧರ್ಮದವರು ನೆಲೆಸಿರುವ ಭಾರತ ದೇಶಕ್ಕೆ ಸಮರ್ಥವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ ಅಂಬೇಡ್ಕರ್ ದೇಶದ ಆಸ್ತಿ. ಅವರ ಮಾದರಿ ಬದುಕು, ತತ್ವ, ಚಿಂತನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಈ ಸಂಧರ್ಭದಲ್ಲಿ ಮುಖಂಡರಾದ ಸಂತೋಷ ಮಡಶಿ, ಡಾ! ಜಯಪ್ರಕಾಶ ಕರಜಗಿ, ವಿಕ್ರಮ ಕರನಿಂಗ, ಪ್ರಮೋದ ಹೊಸಮನಿ, ಗಂಗಾರಾಮ ಭೂಸಗೋಳ, ದೀಲಿಪ ಹೊಸಮನಿ, ವಿನೋದ ನಾಯಿಕ, ಅವಿನಾಶ ನಲವಡೆ, ಮಹೇಶ ಹಟ್ಟಿವಳಿ, ಪಿಂಟು ಸುರ್ಯವಂಶಿ,  ಸಂತೋಷ ಸತ್ಯನಾಯಿಕ, ಶಿವಶಂಕರ ಭೋಸಲೆ, ಗಣೇಶ ಪಾಟೀಲ ಸೇರಿದಂತೆ ಅನೇಕರು ಹಾಜರಿದ್ದರು.

WhatsApp Group Join Now
Telegram Group Join Now
Share This Article