ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಜೂಡೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

Ravi Talawar
ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಜೂಡೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
WhatsApp Group Join Now
Telegram Group Join Now
ಜಮಖಂಡಿ: ಬಾಗಲಕೋಟೆಯಲ್ಲಿ ನಡೆದ ಜಿಲ್ಲಾಮಟ್ಟದ ವೈಯಕ್ತಿಕ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಭಾಗವಹಿಸಿ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
 ಕುಮಾರ್ ಕರೆಪ್ಪ ಹೆಗಡೆ 60 ಕೆಜಿ ಹಾಗೂ ಕುಮಾರಿ ನೀಲವ್ವ ಸೊನ್ನದ 52 ಕೆಜಿ ವಿಭಾಗದ ಜೂಡೋ  ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಶಾಲೆಯ ವತಿಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ, ದೈಹಿಕ ಶಿಕ್ಷಣ ಶಿಕ್ಷಕ ಬಾಹುಬಲಿ ಮತ್ತೂರ, ಶಿಕ್ಷಕರಾದ ಸಂಜೀವ ಝಾಂಬುರೆ, ಸಂಗಮೇಶ ಉಟಗಿ, ಚಂದ್ರಕಾಂತ ಪೊಲೀಸ್, ಶಾರದಾ ಮಠ, ಆಶಿಪಾ ಭಾನು ಮೋಮಿನ್, ಸವಿತಾ ಬೆನಕಟ್ಟಿ, ಶಕುಂತಲಾ ಬಿರಾದಾರ ಶುಭ ಹಾರೈಸಿದರು.
WhatsApp Group Join Now
Telegram Group Join Now
Share This Article