ನೇಸರಗಿ. ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ 135 ನೇ ಜಯಂತಿಯನ್ನು ನೇಸರಗಿ ಗ್ರಾಮದಲ್ಲಿ ಸಡಗರ, ಸಂಭ್ರಮದಿಂದ ಗ್ರಾಮದ ಬೀದಿಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಮಾಡಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ರಾಜ್ಯಾಧ್ಯಕ್ಷರಾದ ಸುರೇಶ ರಾಯಪ್ಪಗೋಳ ಮಾತನಾಡಿ ದೇಶಕಂಡ ಅಪರೂಪದ ನಾಯಕರಾಗಿ ಶ್ರದ್ದೆ, ಬುದ್ದಿ, ಜ್ಞಾನದಿಂದ ಮುಂದೆ ಬಂದು ಸಮಾನತೆ ಸಾರಿದ ಮಹಾನ ಪುರುಷರಾಗಿ ಬೆಳೆದು ಬಂದು ದೇಶದ ಅದ್ಬುತ ಸಂವಿಧಾನ ಬರೆದು ಭಾರತ ದೇಶದ ಮಹಾನ ನಾಯಕರಾಗಿದ್ದರು ಎಂದರು.
ಯುವ ಮುಖಂಡ ಸಚಿನ ಪಾಟೀಲ ಮಾತನಾಡಿ 12 ಶತಮಾನದಲ್ಲಿ ಅಣ್ಣ ಬಸವಣ್ಣನವರು ಸಮಾನತೆಗಾಗಿ ಹೋರಾಟ ಮಾಡಿ ಅಡಿಪಾಯ ಹಾಕಿದ್ದರು. ಸ್ವಾತಂತ್ರ್ಯ ನಂತರ ಅದ್ಬುತ ಭಾರತ ಸಂವಿಧಾನ ರಚಿಸಿ ದೇಶ ಮುಂದೆ ಸಾಗಲು ನಡೆದುಕೊಳ್ಳುವ ಕಾನೂನು, ಸಮಾನತೆ,ಶಿಸ್ತು, ನಿಯಮ ಪಾಲನೆ ಕುರಿತು ಸವಿಸ್ತಾರವಾಗಿ ಬರೆದಿದ್ದಾರೆ ಎಂದರು.
ಸಿಪಿಐ ಗಜಾನನ ನಾಯಕ ಮಾತನಾಡಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ನಡೆದು ಬಂದ ಹಾದಿಯಲ್ಲಿ ಇಂದಿನ ಯುವಕರು ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅಡಿವಪ್ಪ ಮಾಳನ್ನವರ,ನಿಂಗಪ್ಪ ಚಿಗರಿ, ಡಾ. ಪ್ರಕಾಶ ಹಳ್ಯಾಳ, ನಿಂಗಪ್ಪ ತಳವಾರ, ,ಶಿಕ್ಷಕ ಸಂತೋಷ ಪಾಟೀಲ,ಮಂಜು ಮದ್ದೇನ್ನವರ,ಮಲ್ಲಿಕಾರ್ಜುನ ಕಲ್ಲೋಳಿ,
ಸುರೇಶ ಲೆಂಕನಟ್ಟಿ , ಡಾ. ಆರಿಫ್ ಜಮಾದಾರ, ಡಾ. ಬಸವಣ್ಣೆಪ್ಪ ಕುಂದರನಾಡು, ನೇಸರಗಿ ಗ್ರಾಮದ ಹಿರಿಯರು, ಡಿ ಎಸ್ ಎಸ್ ಪಧಾಧಿಕಾರಿಗಳು, ಯುವಕರು ಉಪಸ್ಥಿತರಿದ್ದರು.


