ಬಿಸಿಎಂ ವ್ಯಾಪ್ತಿಯ ಪಿಯು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸಾಧನೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಿಸಿ, ಸಿಇಒ ಸನ್ಮಾನ 

Pratibha Boi
ಬಿಸಿಎಂ ವ್ಯಾಪ್ತಿಯ ಪಿಯು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸಾಧನೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಿಸಿ, ಸಿಇಒ ಸನ್ಮಾನ 
WhatsApp Group Join Now
Telegram Group Join Now
ಬಾಗಲಕೋಟೆ :  : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಸತಿ ಕಾಲೇಜು ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿ.ಪಂ ಸಿಇಓ ಶಶಿಧರ ಕುರೇರ ಸನ್ಮಾನಿಸಿದರು.
ವಿಜ್ಞಾನ ವಿಭಾಗದಲ್ಲಿ ಬಾಗಲಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ (ಬಾಲಕರ ವಿಭಾಗದಲ್ಲಿ) ಭೀಮಪ್ಪ ಬಿರ್ಲಿ ೬೦೦ಕ್ಕೆ ೫೯೦ ಅಂಕ (ಶೇ.೯೮.೩೩) ಪಡೆದರೆ, ಹರೀಶ ಬಾಲರಡ್ಡಿ ೬೦೦ಕ್ಕೆ ೫೮೩ ಅಂಕ (ಶೇ.೯೭.೧೭), ಸಂಗಮೇಶ ಪಟ್ಟಣದ ೬೦೦ಕ್ಕೆ ೫೮೦ ಅಂಕ (ಶೇ.೯೬.೬೭) ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ದೇವಮ್ಮ ಯಡಹಳ್ಳಿ ೬೦೦ಕ್ಕೆ ೫೯೪ ಅಂಕ  (ಶೇ.೯೯), ಶ್ವೇತಾ ಹೊರಕೇರಿ ೬೦೦ಕ್ಕೆ ೫೭೯ ಅಂಕ (ಶೇ.೯೬.೫೦), ವಾಣಿಜ್ಯ ವಿಭಾಗದಲ್ಲಿ ಸಂಗೀತಾ ಗಾಡದಾರ ೬೦೦ಕ್ಕೆ ೫೯೩ ಅಂಕ (ಶೇ.೯೮.೮೩), ಲಕ್ಷ್ಮೀ ಭೂಮಾರ ೬೦೦ಕ್ಕೆ ೫೮೭ ಅಂಕ (ಶೇ.೯೭.೮೩), ತೇಜಶ್ವಿನಿ ದೊರೆಗೊಳ ೬೦೦ಕ್ಕೆ ೫೭೭ ಅಂಕ (ಶೇ.೯೬.೧೭) ಅಂಕ ಪಡೆದುಕೊಂಡವರನ್ನು ಸನ್ಮಾನಿಸಲಾಯಿತು.
ನಂತರ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಸಂಗಪ್ಪ ಅವರು ವಿದ್ಯಾರ್ಥಿಗಳು ಸಾಧಿಸಿರುವ ಉತ್ತಮ ಫಲಿತಾಂಶ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಕಠಿಣ ಪರಿಶ್ರಮ ಹಾಗೂ ಶಿಸ್ತುಬದ್ದ ಅಧ್ಯಯನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದರು. ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಕಜ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ಎಂ, ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article