ರಾಮದುರ್ಗ: ನದಿಯಲ್ಲಿ ಸ್ನಾನ ಮಾಡಲು ಹೋದ ಬಾಲಕನೋರ್ವ ಈಜು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ರಾಮದುರ್ಗ ತಾಲೂಕಿನ ಹಿರೇತಡಿಸಿ ಗ್ರಾಮದ ಹತ್ತಿರದ ಮಲಪ್ರಭಾ ನದಿಯಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ತಾಲೂಕಿನ ಹಿರೇತಡಸಿ ಗ್ರಾಮದ ಪಾಂಡು ಮಂಜುನಾಥ ಜಾಧವ (೧೪) ಮೃತ ದುರ್ದೈವಿಯಾಗಿದ್ದು, ಗ್ರಾಮದಲ್ಲಿ ದೇವರಿಗಾಗಿ ವಾರ ಬಿಟ್ಟಿದ್ದು, ಮಂಗಳವಾರ ದೇವಸ್ಥಾನಗಳಿಗೆ ಹೋಗಿ ನೀರು ಹಣಿಸಲು ಹೋಗಿದ್ದಾನೆ. ದೇವರಿಗೆ ನೀರು ಹಣಿಸಿ, ನಂತರ ಮಲಪ್ರಭಾ ನದಿಗೆ ಸ್ನಾನ ಮಾಡಲು ಹೋಗಿ ನೀರಿಗೆ ಧುಮಿಕಿದ್ದಾನೆ. ಈಜು ಬಾರದೆ ನೀರಿನಲ್ಲಿ ಮುಳಿಗಿದ್ದು, ಪಾಲಕರು ಹಾಗೂ ಸ್ಥಳೀಯರು ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಮಂಗಳವಾರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಶೋಧ ಕಾರ್ಯ ಮಾಡಿದರೂ ಮೃತ ದೇಹ ಪತ್ತೆಯಾಗಿರಲಿಲ್ಲ. ಬುಧವಾರ ಮುಂಜಾನೆ ಸಂಗಳ ಗ್ರಾಮದ ಹದ್ದಿನಲ್ಲಿರುವ ಮಲಪ್ರಭಾ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಸುರೇಬಾನ ಪಿಎಸ್‌ಐ ಗುರುರಾಜ ಕಲಬುರ್ಗಿ, ಸಿಬ್ಬಂದಿ ವಿ.ಆರ್. ಖಜ್ಜಿಡೋಣಿ, ಆರ್.ಕೆ. ಪೂಜೇರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸುರೇಬಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನದಿಯಲ್ಲಿ ಮುಳುಗಿ ಬಾಲಕ ಸಾವು


