ರಿಚ್ಚಿಗೆ ಸೋನು ನಿಗಮ್ ಹಾಡು

Ravi Talawar
ರಿಚ್ಚಿಗೆ ಸೋನು ನಿಗಮ್ ಹಾಡು
WhatsApp Group Join Now
Telegram Group Join Now
     ರಿಚ್ಚಿ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘ರಿಚ್ಚಿ’ ಚಿತ್ರದ “ಸನಿಹ ನೀ ಇರುವಾಗ” ಎಂಬ ಹಾಡನ್ನು ಖ್ಯಾತ ಗಾಯಕ ಸೋನು ನಿಗಮ್ ಹಾಡಿದ್ದಾರೆ.
     ಅಗಸ್ತ್ಯ ಅವರು ಸಂಗೀತ ಸಂಯೋಜಿಸಿರುವ ಈ ಹಾಡು ಸದ್ಯದಲ್ಲೇ A2 ಮ್ಯೂಸಿಕ್ ನಲ್ಲಿ ಬಿಡುಗಡೆ ಯಾಗಲಿದೆ. ಮಾರುತಿ ಮೂವೀ ಮೇಕರ್ಸ್  ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ವೆಂಕಟಾಚಲಯ್ಯ ಹಾಗೂ ರಾಕೇಶ್ ರಾವ್ ಅವರ ಸಹ ನಿರ್ಮಾಣವಿರುವ ‘ರಿಚ್ಚಿ’ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ.   ಅಜಿತ್ ಕುಮಾರ್ ಛಾಯಾಗ್ರಹಣವಿದ್ದು, ‘ರಿಚ್ಚಿ’ಯಲ್ಲಿ  ಟಗರು ಖ್ಯಾತಿಯ ಮಾನ್ವಿತ ಕಾಮತ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
WhatsApp Group Join Now
Telegram Group Join Now
Share This Article