ಮೂಡಲಗಿ : ಬಾಬಾಸಾಹೇಬರು ನಮ್ಮನ್ನು ದೈಹಿಕವಾಗಿ ಅಗಲಿದ್ದರೂ, ಅವರು ಕೊಟ್ಟ ಸಂವಿಧಾನ ಮತ್ತು ಅವರ ವಿಚಾರಗಳು ಇಂದಿಗೂ ನಮ್ಮನ್ನು ಮುನ್ನಡೆಸುತ್ತಿವೆ. ನಾವು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ ಹೇಳಿದರು
ಮಂಗಳವಾರದಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಅರಭಾವಿ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಏಪ್ರಿಲ್ ೧೪, ೧೮೯೧ ರಂದು ಮಧ್ಯಪ್ರದೇಶದ ಮಾಹೂ ಎಂಬಲ್ಲಿ ಜನಿಸಿದ ಅಂಬೇಡ್ಕರರವರು, ಬಾಲ್ಯದಲ್ಲಿ ಅನುಭವಿಸಿದ ಜಾತಿ ತಾರತಮ್ಯ ಮತ್ತು ಅವಮಾನಗಳು ಅವರನ್ನು ಕುಗ್ಗಿಸಲಿಲ್ಲ, ಬದಲಿಗೆ ಅವು ಅವರನ್ನು ಶಕ್ತಿಯುತವಾಗಿಸಿದವು. ಶಿಕ್ಷಣವೇ ಶಕ್ತಿ ಎಂದು ನಂಬಿದ ಮಹಾನುಭಾವ ಬಾಬಾಸಾಹೇಬರು ವಿದ್ಯೆಗೆ ನೀಡಿದ ಮಹತ್ವ ಅಸಾಮಾನ್ಯ. ಅರ್ಥಶಾಸ್ತ್ರ, ಕಾನೂನು, ರಾಜ್ಯಶಾಸ್ತ್ರ, ಸಮಾಜಶಾಸ್ತದಂತಹ ಹಲವು ವಿ?ಯಗಳಲ್ಲಿ ಪಾಂಡಿತ್ಯ ಪಡೆದ ಕೆಲವೇ ಕೆಲವು ಭಾರತೀಯರಲ್ಲಿ ಅವರು ಒಬ್ಬರು. “ಶಿಕ್ಷಣ ಪಡೆಯಿರಿ, ಸಂಘಟಿತರಾಗಿ ಹೋರಾಡಿ” ಎಂಬ ಅವರ ಮಂತ್ರ ಇಂದಿಗೂ ಲಕ್ಷಾಂತರ ಜನರಿಗೆ ದಾರಿದೀಪವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಕಲ್ಮೇಶ ಗೋಕಾಕ್, ಡಾ.ಬಸವರಾಜ ಪಾಲಬಾಂವಿ, ಪಾಂಡು ಮಹೇಂದ್ರಕರ, ಕೇದಾರಿ ಭಸ್ಮೆ, ಚಂದ್ರಶೇಖರ್ ಪತ್ತಾರ್, ಶ್ರೀಶೈಲ ಶೇಕ್ಕಿ, ಮಲ್ಲಿಕಾರ್ಜುನ ಬೆಳ್ಳೆಶಿ, ಪ್ರಭು ಹಡಪದ, ಚೇತನ್ ನಿಶಾನಿಮಠ, ಬಸವರಾಜ್ ಶೇಕ್ಕಿ, ಶಿವು ಗೋಕಾಕ್, ಅ?ದ ಡಾಂಗೆ, ಭೀಮಶಿ ಬಡಿಗೇರ ಸೇರಿದಂತೆ ಅನೇಕ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


