ಬಳ್ಳಾರಿ 14..ನಗರದ ವಾಲ್ಮೀಕಿ ವೃತ್ತದ ಸಮೀಪದಲ್ಲಿರುವ ಶಾಸ್ತ್ರಿ ನಗರದ ಆಮ್ ಆದ್ಮಿ ರಾಷ್ಟ್ರೀಯ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವುದರ ಮೂಲಕ, 135 ನೇ ಜಯಂತಿಯನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜೆ.ವಿ.ಮಂಜುನಾಥ್, ಹಾಗೂ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಪರಾಜಿತ ಅಭ್ಯರ್ಥಿ ಹಾಗೂ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಕೊರಲಗುಂದಿ ವಿ ದೊಡ್ಡಕೇಶ್ವರ ರೆಡ್ಡಿ, ರವರು ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಅಂತಹ ಕಡುಬಡತನದಲ್ಲಿಯೂ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದು ಶೋಷಿತರ ಏಳಿಗೆಗಾಗಿ ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡು ಹೋರಾಟ ಮಾಡಿದರು, ಶಿಕ್ಷಣ ಸಂಘಟನೆ ಮತ್ತು ಹೋರಾಟ ಎಂಬುದು ಅವರ ಮುಖ್ಯ ಮಂತ್ರವಾಗಿತ್ತು, ನಾವೆಲ್ಲರೂ ಸಹ ಸಂವಿಧಾನವನ್ನು ಅರಿತುಕೊಳ್ಳುವುದರ ಜೊತೆಗೆ ಡಾಕ್ಟರ್ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಓದುವುದವರ ಮೂಲಕ ಅವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ, ನಗರ ಅಧ್ಯಕ್ಷರಾದ ಡಿ ಚಕ್ರವರ್ತಿ, ಜಿಲ್ಲಾ ಕಾರ್ಯದರ್ಶಿಯಾದ ನಾಗರಾಜ್ ಗೌಡ, ಶ್ರೀನಿವಾಸ ರೆಡ್ಡಿ, ಪ್ರಸಾದ್ ರೆಡ್ಡಿ, ಶ್ರೀನಿವಾಸ್,ಯುವ ಘಟಕದ ಉಪ್ಪಾರ್ ವೆಂಕಟೇಶ್, ಹಾಜಿ ವಲಿ, ಸಂಪತ್ ಕುಮಾರ್, ಹಾಗೂ ಪಕ್ಷದ ಸಕ್ರಿಯ ಕಾರ್ಯಕರ್ತರುಗಳಾದ, ದಾದಾಪೀರ್, ರಾಜು, ಹೋಟೆಲ್ ಸಂತೋಷ್, ಹರೀಶ್ ನಾಯಕ್, ಮುಂತಾದವರು ಇದ್ದರು.


