ಬಳ್ಳಾರಿ, ಏ.15” ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ವತಿಯಿಂದ ಹಾವಂಬಾವಿ ವಿರಾಟ ನಗರದ ಗಾನಯೋಗಿ ಕೇಂದ್ರದಲ್ಲಿ 63ನೇ ರಾಗ ರಂಗ್ ಮಾಸಿಕ ಕಾರ್ಯಕ್ರಮ ನಡೆಯಿತು ಮಾರುತಿ ಕ್ಯಾಂಪಿನ ಅಂಬಾಮಠದ ಧರ್ಮ ಕರ್ತರಾದ ಶಿವಪ್ಪನವರು ತಬಲ ನುಡಿಸುವುದರ ಮೂಲಕ ಉದ್ಘಾಟಿಸಿ ನಮ್ಮ ನಾಡಿನ ನಡೆದಾಡುವ ದೇವರು ಪರಮಪೂಜ್ಯ ಪುಟ್ಟರಾಜ ಗುರುಗಳು ಸತ್ತವರಿಗೆ ಜೀವವನ್ನು ಕೊಟ್ಟಂತಹ ಮಹಾತ್ಮರು ಕಣ್ಣು ಇಲ್ಲದಿದ್ದರೂ ಕಣ್ಣು ಇದ್ದವರಿಗೆ ಕಣ್ಣನ್ನು ಕೊಟ್ಟ ಮಹಾ ಪುಣ್ಯಾತ್ಮರು ಅವರು ತೋರಿದ ಸಂಸ್ಕಾರ ಮಾರ್ಗದರ್ಶನದಲ್ಲಿ ಅವರನ್ನು ಸ್ಮರಿಸುವುದರ ಮೂಲಕ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕಾಗುತ್ತದೆ ಇಂತಹ ಕಾರ್ಯಕ್ರಮದ ಮೂಲಕ ಅವರನ್ನು ಧ್ಯಾನಿಸುತ್ತಾ ನಾವು ನೀವು ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದು ಎಲ್ಲರಿಗೆ ಪುಟ್ಟರಾಜ ಗುರುಗಳ ಮಹಾತ್ಮೆಯನ್ನು ತಿಳಿಸಿದರು ಅತಿಥಿಗಳಾಗಿ ಬಯಲಾಟ ನಿರ್ದೇಶಕರಾದ ಸಿದ್ದಲಿಂಗಸ್ವಾಮಿ ಕಲಾವಿದರಾದ ಶಿವಕುಮಾರ್ ಯೋಗೀಶ್ ದೊಡ್ಡ ಬಸವ ಗವಾಯಿ ರಮೇಶ ಅವರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಸರಸ್ವತಿ ಗೌರಿ ಮೇಘನಾ ಮತ್ತು ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು


