ಯರಗಟ್ಟಿ : ತಾಲೂಕ ಪಂಚಾಯತ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬಸವರಾಜ ಅಯ್ಯನಗೌಡರ ಅಧಿಕಾರಿ ವಹಿಸಿಕೊಂಡರು.
ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ಆದೇಶದಂತೆ ಯರಗಟ್ಟಿ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಪ್ರಭಾರವನ್ನು ಬಿ.ವಿ. ಅಯ್ಯನಗೌಡರ ಎಇಇ ಪಿಆರ್.ಇಡಿ ಸವದತ್ತಿ ಇವರು ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇಓ ಆನಂದ ಬಡಕುಂದ್ರಿ ಯರಗಟ್ಟಿ ತಾಲೂಕ ಪಂಚಾಯತ ಇಓ ಆಗಿ ಇಲ್ಲಿಯವರೆಗೆ ನನಗೆ ಸೇವೆ ಸಲ್ಲಿಸಲು ಸಹಕಾರ ನೀಡಿದ ಎಲ್ಲಾ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಈ ವೇಳೆ ತಾ. ಪಂ. ಮಾನ್ಯೇಜರ ಎಮ್. ಸಿ. ಕಂಬಿ, ಪಿಡಿಓಗಳಾದ ಜಯಗೌಡ ಪಾಟೀಲ, ಎ. ಬಿ ಬಂಗಾರಿ, ಈರಪ್ಪ ಹವಳಪ್ಪನವರ, ಹನಮವ್ವ ಚೌವರೆಡ್ಡಿ, ವಹೀಧಾ ಮುಲ್ಲಾ, ರವಿ ಮೆಟಲಕೋಡ, ಯಲ್ಲಪ್ಪ ಮೂಡಲಗಿ, ಆರ್. ಎಸ್. ಚಿಪ್ಪಕಟ್ಟಿ, ತಾ. ಪo. ಸಿಬ್ಬಂದಿ ನಾಗರಾಜ ಬೆಹರೆ , ವ್ಹಿ. ಎಂ. ಕೊಳವಿ, ಜಿ.ಕೆ. ಸುಂಕದ, ಲಕ್ಷ್ಮಣ ಮಾದರ, ವಿಠ್ಠಲ ದಳವಾಯಿ ಸೇರಿದಂತೆ ಅನೇಕರು ಇದ್ದರು.