ಗದಗ :15 ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ರವರು ನೀಡುವ 2025 ನೇ ಸಾಲಿನ ಪುಸ್ತಕ ಸೊಗಸು ವಾರ್ಷಿಕ ಪ್ರಶಸ್ತಿಗೆ ಬಯಲ ಬೆಳಕಿನ ಕವಿ ಎ.ಎಸ್. ಮಕಾನದಾರರವರ ಮಹತ್ವದ ಕವನ ಸಂಕಲನ ದರ್ವೇಶಿ ಪದ್ಯಕವನ ಸಂಕಲನ ಆಯ್ಕೆಯಾಗಿದೆoದು ಕನ್ನಡ ಪಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸಅವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ. ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಪುಸ್ತಕ ಪ್ರಾಧಿಕಾರ ಇವರ ಆಶ್ರಯದಲ್ಲಿ ಜರುಗುವ ವಿವಿಧ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ವಿತರಣಾ ಸಮಾರಂಭವು ದಿನಾಂಕ 17ರಂದು ಬೆಳಿಗ್ಗೆ ಮೈಸೂರಿನಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಸಾಂಸ್ಕೃತಿಕ ವೇದಿಕೆ ಮೈಸೂರ್ ದಸರಾ ಪುಸ್ತಕ ಮೇಳದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್. ತಂಗಡಗಿ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ. ಕೆ ಮರಳುಸಿದ್ದಪ್ಪ ಪ್ರಶಸ್ತಿ ಪ್ರದಾನ ಮಾಡುವರು. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ. ರಾಜಪ್ಪ ದಳವಾಯಿಯವರು ಹೊನ್ನ ಕಳಸ ಕಿರುಹೊತ್ತಿಗೆ ಲೋಕಾರ್ಪಣೆ ಮಾಡುವವರು. ಸಮಾರಂಭದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರು ಅಧ್ಯಕ್ಷತೆ ವಹಿಸಿಕೊಳ್ಳುವರು.ಪುಸ್ತಕ ಸೊಗಸು ವಿಭಾಗದಲ್ಲಿ ಎ.ಎಸ್.ಮಕಾನದಾರಅವರ ಕವನ ಸಂಕಲನ ದರ್ವೇಶಿ ಪದ್ಯದ ಮುಖಪುಟ ವಿನ್ಯಾಸ ಗೊಳಿಸಿದ ಕಲಾವಿದ ಈಶ್ವರ್ ಬಡಿಗೇರ ಹಾಗೂ ಅಪ್ಪುಗೆರೆ ತಿಮ್ಮರಾಜು ಅವರ ಗ್ರಾಮ ಗೀತೆಗಳ ಸಂಕಲನದ ಚಿತ್ರ ಕಲಾವಿದರಾದ ಶ್ರೀ ಶ್ರೀಪಾದ್ ಅವರಿಗೆ ತಲಾ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ಪ್ರಶಸ್ತಿ ಫಲಕ ಹಾಗೂ ಫಲ ತಾಂಬೂಲದೊಂದಿಗೆ ಬಹುಮಾನ ವಿತರಿಸುವರು. ನಿರಂತರ ಪ್ರಕಾಶನ ಸಂಸ್ಥೆ ಕಳೆದ 22 ವರ್ಷಗಳಲ್ಲಿ ನೂರಕ್ಕೂ ಮಿಗಿಲು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪುಸ್ತಕ ಪ್ರಕಟಣೆ ಮಾಡಿದ್ದರ ಜೊತೆಗೆ ಯುವ ಬರಹಗಾರರಿಗೆ ಮುಕ್ತ ವೇದಿಕೆ ಕಲ್ಪಿಸಿ ಕೊಟ್ಟ ಹಿರಿಮೆ ಪ್ರಕಾಶಕ, ಹಿರಿಯ ಸಾಹಿತಿ ಎ.ಎಸ್ ಮಕಾನದಾರ ಅವರಿಗೆ ಸಲ್ಲುತ್ತದೆ.ಗದಗ್ ಪರಿಸರದ ಸಾಹಿತ್ಯ ಪ್ರೇಮಿ, ಶಿಕ್ಷಣ ಪ್ರೇಮಿಗಳಾದ ಹಾಸಿಂಸಾಬ ತಹಸೀಲ್ದಾರ್, ಎ.ಆರ್. ಸುಣಗಾರ್,ಶಿಕ್ಷಕ ಗಾಡುಗೋಳಿ ಬಸವರಾಜ್.ಬಡಿಗೇರ್. ಕಾಂತೇಶ್ ಖಂಡಿ ಬಾಗಿಲ, ಸಾಹಿತಿ ಅಮೀರ್ ನಾಯಕ್ , ಮರುಳ ಸಿದ್ದಪ್ಪ ದೊಡ್ಡಮನಿ. ಶಿರಸ್ತೇ ದಾರ ಕೆ.ಎಂ. ನದಾಫ್ ಬಸವ ರಾಜ್ ಕುಕನೂರ, ಡಾ. ವಿ.ಎಸ್. ಸಪ್ಲಾಳಕರ ಮುಂತಾದವರು ಮಕಾನದಾರರಿಗೆ ಅಭಿನಂದಿಸಿದ್ದಾರೆ