LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ರಾಂಗ್ ವರ್ಡ್ಸ್ ವಿಡಿಯೋ ಹಾಡು ಸಾರ್ವಜನಿಕರಿಗಾಗಿ...









       ಸರ್ಕಾರವು ಹೊರತರುತ್ತಿರುವ ಹೊಸ ಮಸೂದೆಯ ಕುರಿತು ಅರಿವು ಮೂಡಿಸುವ ’ರಾಂಗ್ ವರ್ಡ್ಸ್’ ವಿಡಿಯೋ ಆಲ್ಬಂ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.

     ರ‍್ಯಾಡಿಕಲ್ ಕಾನ್ಸೆಪ್ಟ್ ಸ್ಟುಡಿಯೋ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಬೆಂಗಳೂರು ಮೂಲದ ಯುವ ಪ್ರತಿಭೆ  ನಹೇಶ್ ಪೂಲ್ ವೃತ್ತಿಯಲ್ಲಿ  ಆಟೋಮೊಬೈಲ್ ಇಂಜಿನಿಯರ್. ಪ್ರವೃತ್ತಿ ಫಿಲಂ ಮೇಕರ್.  ಇದರಿಂದಲೇ ಸದರಿ ಗೀತೆಗೆ ಸಾಹಿತ್ಯ, ಸಂಗೀತ, ನಿರ್ದೇಶನ ಜತೆಗೆ ಐದು ನಿಮಿಷದ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

     ಈ ಸಂದರ್ಭದಲ್ಲಿ ಮಾತನಾಡಿದ ನಹೇಶ್ ಪೂಲ್ "ಕಳೆದ ತಿಂಗಳು ’ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಅಥವಾ ಸಮುದಾಯದ ವಿರುದ್ದ ಯಾವುದೇ ವ್ಯಕ್ತಿ ಮಾತನಾಡಿದರೆ ಅಪರಾಧ ಎಂದು ಐವತ್ತು ಸಾವಿರ ದಂಡ, ಏಳು ವರ್ಷ ಜೈಲು ಶಿಕ್ಷೆ ಎಂಬುದರ ಬಗ್ಗೆ ಮಸೂದೆ ಹೊರಡಿಸಿದೆ. ಆದರೆ ಇಲ್ಲಿಯವರೆಗೂ ರಾಜ್ಯಪಾಲರಿಂದ ಹಸಿರು ನಿಶಾನೆ ಸಿಕ್ಕಿಲ್ಲ. ಇಂತಹ ಮಸೂದೆ ಸಾರ್ವಜನಿಕರಿಗೆ ಮಾಹಿತಿ ತಿಳಿದಿರುವುದಿಲ್ಲ. ಅದಕ್ಕಾಗಿ ಹಾಡಿನ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇನೆ".

     "ನಾನು ತಪ್ಪಾದ ಪದಗಳನ್ನು ಬಳಸಲು ಸಾಧ್ಯವಿಲ್ಲ. ಅವುಗಳನ್ನು ಬಳಸಿದರೆ ನನ್ನನ್ನು ಬಂಧಿಸುತ್ತಾರೆ. ನನಗೆ ಬೇರೆ ಯಾವುದೇ ಪದಗಳಿಲ್ಲ. ಜತೆಗೆ ನಾವು ಜನರಿಗೆ ಮರಳಿ ಕೊಡುವಂತಹ ಒಂದು ಮಾದರಿ ರಸ್ತೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ. ವಿಧಾನಸೌದ ಮೆಟ್ಟಲುಗಳ ಬಳಿಯಿಂದ ಪ್ರತಿಯೊಂದು ಹಂತವನ್ನು ನೇರ ಪ್ರಸಾರವಾಗಿ ತೋರಿಸಿ, ಪಾರದರ್ಶಕತೆಯೊಂದಿಗೆ ರಸ್ತೆಯನ್ನು ನಿರ್ಮಿಸುವುದು ನನ್ನ ಗುರಿಯಾಗಿದೆ. ಇದನ್ನು  ನಿರ್ಮಿಸಲು ನನಗೆ ಸಹಾಯ ಮಾಡಿ ಎನ್ನುವಂತಹ ಅಂಶಗಳು ಇರಲಿದೆ. ವಿಧಾನಸೌದ ಮುಂಬಾಗ ಒಂದು ದಿನ ಚಿತ್ರೀಕರಣ ನಡೆಸಲಾಗಿದೆ" ಎಂದ ಅವರು  ಗಿಟಾರ್ ನುಡಿಸಿ ಮಾಧ್ಯಮ ಮಿತ್ರರನ್ನು ರಂಜಿಸಿದರು.

     ಕ್ರಿಯೇಟೀವ್ ಮುಖ್ಯಸ್ಥೆ ಅಕ್ಷರಸುರೇಶ್, ಛಾಯಾಗ್ರಹಣ-ಸಂಕಲನ ಸಾಗರ್ ಅವರದಾಗಿದೆ.































Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್