Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಹೆಲ್ಮೆಟ್ ಧರಿಸಿ, ಜೀವ ರಕ್ಷಿಸಿಕೊಳ್ಳಿ: ಪಿಎಸ್‌ಐ ಶಾಂತಕುಮಾರ್

ಬಳ್ಳಾರಿ, ನ.05:  ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಬೇಡಿ. ಹೆಲ್ಮೆಟ್ ನಿಮ್ಮ ಜೀವವನ್ನು ರಕ್ಷಿಸುತ್ತದೆ. ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನಗಳಿಗೆ ಡಿಎಲ್ (ಚಾಲನಾ ಪರವಾನಗಿ) ಮತ್ತು ವಿಮೆ ಮಾಡಿಸಿಕೊಳ್ಳುವುದರಿಂದ ಅಪಘಾತದ ಸಂದರ್ಭದಲ್ಲಿ ನಿಮಗೂ ನಿಮ್ಮ ಕುಟುಂಬಕ್ಕೂ ಆರ್ಥಿಕ ಭದ್ರತೆ ದೊರೆಯುತ್ತದೆ ಎಂದು ಪಿಡಿ ಹಳ್ಳಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶಾಂತಕುಮಾರ್ ಹೇಳಿದರು.
ಬಳ್ಳಾರಿ ತಾಲೂಕಿನ ಕೆ. ವೀರಾಪುರ ಗ್ರಾಮದಲ್ಲಿ ಮಂಗಳವಾರದಂದು  ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ  ಮಾತನಾಡಿ, 
ಯುವಕರು ಮೊಬೈಲ್‌ಗಳಲ್ಲಿ ಅಪರಿಚಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು. ಅಪರಿಚಿತ ಆ್ಯಪ್‌ಗಳ ಮೂಲಕ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಇಂತಹ ಆ್ಯಪ್‌ಗಳಿಂದ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಹಣ ಕಳೆದುಕೊಳ್ಳುವ ಅಪಾಯವಿದೆ ಮತ್ತು ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನವನ್ನು ಚಲಾಯಿಸಬೇಡಿ ಇದರಿಂದ ಅಪಘಾತಗಳಾಗಿ ಜೀವ ಕಳೆದುಕೊಳ್ಳುವ ಅಪಾಯವಿದೆ ಎಂದು ಯುವಕರನ್ನು  ಎಚ್ಚರಿಸಿದರು.
ರೈತರು ವ್ಯಾಪಾರ-ವಹಿವಾಟು ಮಾಡುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು. ಕಡಿಮೆ ಬೆಲೆಗೆ ವಸ್ತುಗಳು ದೊರೆಯುತ್ತವೆ ಎಂಬ ಕಾರಣಕ್ಕೆ ಅಪರಿಚಿತರೊಂದಿಗೆ ವ್ಯವಹಾರ ಮಾಡಬಾರದು. ಯಾವುದೇ ವ್ಯವಹಾರ ಮಾಡುವ ಮೊದಲು ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ಖಚಿತಪಡಿಸಿಕೊಂಡ ನಂತರವೇ ವ್ಯವಹಾರ ನಡೆಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಸೈಬರ್ ಅಪರಾಧ ಹಾಗೂ ಆರ್ಥಿಕ ವಂಚನೆಗಳ ಕುರಿತು ಜಾಗೃತಿ ಮೂಡಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೫೦ ಸಾವಿರ ನಗದು ಬಹುಮಾನದೊಂದಿಗೆ ಗೌರವ *ಇಲಾಖೆಯ ಹಿರಿಯ ಅಧಿಕಾರಿಗಳಿಂದ ಸನ್ಮಾನಹುರಕಡ್ಲಿ ಫೌಂಡೇಶನ್‌ನಿಂದ ಉಚಿತ ಕೃತಕ ಕೈ-ಕಾಲು ಅಳತೆ ಶಿಬಿರ; ೫೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ನೆರವುಇಂದು ಬಳ್ಳಾರಿಗೆ ಲೋಕಾಯುಕ್ತರ ಭೇಟಿ ವಿವಿಧ ಇಲಾಖೆಗಳ ಮೇಲೆ ದಾಳಿ ಮಂತ್ರಾಲಯದಲ್ಲಿ ಗೋವು-ಮೇವು ದಾನ; ಅನಾಥ ಮಕ್ಕಳಿಗೆ ದಾಸೋಹ ಸೇವೆಪ್ರಮುಖರೊಂದಿಗೆ ಹೋಗಿ ಜಿ.ಸಿ.ಕೋಟಗಿಯವರಿಗೆ ಅಧಿಕೃತ ಆಹ್ವಾನ: ಡಾ.ಎಸ್.ಬಿ.ದಳವಾಯಿದೇಶದ ಅಭಿವೃದ್ಧಿಯಲ್ಲಿ ಯುವಕರ ಸಹಭಾಗಿತ್ವ ಅತ್ಯಂತ ಮುಖ್ಯ: ಡಾ. ಸುನಿಲ್ ಎಸ್. ಜಾಲಾಪುರೆಅಂಚೆಗೆ ಹೋಗದ ಪತ್ರ ಚಲನಚಿತ್ರ ಶೀಘ್ರದಲ್ಲಿ ತೆರೆಗೆ.ಚುನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಬಂಧನ ಖಂಡಿಸಿ ನಾಲ್ಕು ಗಂಟೆಗೂ ಅಧಿಕ ಪ್ರತಿಭಟನೆ; ವಾಹನ ಸಂಚಾರ ಅಸ್ತವ್ಯಸ್ತರಾಮದುರ್ಗದಲ್ಲಿ ಉದ್ವಿಗ್ನತೆ: ರೈತ ಮುಖಂಡರ ಬಂಧನ ಖಂಡಿಸಿ ರಸ್ತೆ ತಡೆ, ಪೊಲೀಸರಿಂದ ಪ್ರತಿಭಟನಾಕಾರರ ವಶಡಾ.ಸ್ಮಿತಾ ಸುರೇಬಾನಕರ್‌ಗೆ ಇತಿಹಾಸ ಸಾಂಸ್ಕೃತಿಕ ಶ್ರೀ ಪ್ರಶಸ್ತಿ