LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮಲೆನಾಡಲ್ಲೇ 40 ಡಿಗ್ರಿ ತಾಪಮಾನ; ಪಕ್ಷಿಪ್ರೇಮಿಗಳಿಂದ ಹಕ್ಕಿಗಳಿಗೆ ನೀರು, ಆಹಾರ

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ಈ ಭಾರಿ ತಾಪಮಾನ 40 ಡಿಗ್ರಿ ತಲುಪಿದೆ. ಜನರಷ್ಟೆ ಅಲ್ಲದೆ, ಪಕ್ಷಿಗಳೂ ಸಹ ಬಿಸಿಲಿನ ಧಗೆ ತಾಳಲಾಗದೆ ಪರದಾಡುತ್ತಿವೆ. ಇದನ್ನು ಮನಗಂಡ ಶಿವಮೊಗ್ಗದ ಪಕ್ಷಿ ಪ್ರೇಮಿಗಳು ಪಕ್ಷಿಗಳಿಗೆ ನೀರು ಹಾಗೂ ಆಹಾರ (ಕಾಳು) ಇಡುವ ಮೂಲಕ ತಮ್ಮ ಪರಿಸರಪ್ರೇಮ ಮೆರೆದಿದ್ದಾರೆ.


ಶಿವಮೊಗ್ಗದ ಡಿ.ಕೆ. ಶಿವಕುಮಾರ್​​​ ಬ್ರಿಗೇಡ್​​ ವಿವಿಧ ಸಂಘಟನೆಗಳ ಜೊತೆ ಸೇರಿ ಪಕ್ಷಿಗಳಿಗೆ ನೀರು ಆಹಾರ ಇಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಮೂಲಗಳು ಬತ್ತುತ್ತವೆ. ಮನುಷ್ಯರಾದರೆ ಕುಡಿಯಲು ನೀರು ಕೇಳಿ ಪಡೆಯುತ್ತಾರೆ.‌ ಆದರೆ, ಪಕ್ಷಿಗಳು ಹಾಗೆ ಮಾಡಲು ಸಾಧ್ಯವಿಲ್ಲ.‌ ಇದರಿಂದ ಪಕ್ಷಿಗಳಿಗೆ ಕುಡಿಯಲು ನೀರು ಹಾಗೂ ಆಹಾರವನ್ನು ಇಡಲಾಗುತ್ತಿದೆ. ಬ್ರಿಗೇಡ್​ನ ಸದಸ್ಯರು ನಗರದ ಪ್ರವಾಸಿ ಮಂದಿರದ ಆವರಣದಲ್ಲಿನ ಮರಗಳಿಗೆ ನೀರು ಹಾಗೂ ಆಹಾರವನ್ನು ನೇತು ಹಾಕಿದರು. ಇದನ್ನು ಎರಡು ದಿನಕ್ಕೊಮ್ಮೆ ನೋಡಿಕೊಂಡು ಅದರಲ್ಲಿ ನೀರು ಕಡಿಮೆಯಾದರೆ, ಕಾಳು ಖಾಲಿಯಾದರೆ ಹಾಕುವ ಕೆಲಸ ಮಾಡುತ್ತಿದ್ದಾರೆ.


ಬಿಸಾಡುವ ಬಾಟಲಿ, ತಟ್ಟೆ ಬಳಕೆ: ಪಕ್ಷಿಗಳಿಗೆ ನೀರು ಹಾಗೂ ಆಹಾರ ನೀಡಲು ಎರಡು ಲೀಟರ್​ ಜ್ಯೂಸ್​​ನ ಖಾಲಿ ಬಾಟಲಿ ತೆಗೆದುಕೊಂಡು, ಅದರಲ್ಲಿ ಅರ್ಧದಷ್ಟು ಕಾಳನ್ನು ಹಾಕಿ, ಬಾಟಲಿಗೆ ಮೂಕ್ಕಾಲು ಭಾಗದಷ್ಟು ನೀರನ್ನು ಹಾಕಿಡಲಾಗುತ್ತಿದೆ. ಬಾಟಲಿ ಕೆಳಗೆ ಪ್ಲಾಸ್ಟಿಕ್ ತಟ್ಟೆ ಹಾಕಿ ಬಾಟಲಿಗೆ ತಂತಿಯಿಂದ ಮೇಲಕ್ಕೆ ಕಟ್ಟಿ, ಅದಕ್ಕೆ ಉದ್ದದಾದ ದಾರದಿಂದ ಮರಕ್ಕೆ ಕಟ್ಟಲಾಗುತ್ತಿದೆ. ಪಕ್ಷಿಗಳು ಬೆಳಗ್ಗೆ ಸಂಜೆ ಈ ಭಾಗದಲ್ಲಿ ಹೆಚ್ಚು ಹಾರಾಟ ನಡೆಸುವುದರಿಂದ ಅವುಗಳಿಗೆ ಅನುಕೂಲವಾಗಲಿದೆ.‌ ಮರದಲ್ಲಿಯೇ ಅದನ್ನು‌ ಕಟ್ಟುತ್ತಿರುವುದರಿಂದ ಪಕ್ಷಿಗಳಿಗೆ ನೈಸರ್ಗಿಕವಾಗಿ ಆಹಾರ ದೂರೆದಂತಾತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್