LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕಿತ್ತೂರು ಬಸ್ ನಿಲ್ದಾಣಕ್ಕೆ ಟ್ರ್ಯಾಕ್ಟರ್ ಅಡ್ಡಹಾಕಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆ

ಬಚ್ಚನಕೇರಿಗೆ ಬಸ್ ಬರದಿದ್ದಕ್ಕೆ ಆಕ್ರೋಶ



ಚನ್ನಮ್ಮನ ಕಿತ್ತೂರು: ಬಚ್ಚನಕೇರಿ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸಂಚಾರ ಕಲ್ಪಿಸದಿರುವುದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮಂಗಳವಾರ ಚನ್ನಮ್ಮನ ಕಿತ್ತೂರು ಕೇಂದ್ರ ಬಸ್ ನಿಲ್ದಾಣದ ಎರಡು ಗೇಟ್‌ಗಳಿಗೆ ಟ್ರ್ಯಾಕ್ಟರ್‌ಗಳನ್ನು ಅಡ್ಡಹಾಕಿ ಪ್ರತಿಭಟನೆ ನಡೆಸಿದರು. ಇದರಿಂದ ಬೆಳಗಾವಿ ಹಾಗೂ ಧಾರವಾಡ ಕಡೆಗೆ ತೆರಳಬೇಕಿದ್ದ ಹಲವು ಬಸ್‌ಗಳು ನಿಲ್ದಾಣದ ಒಳಗೆ ಸಿಲುಕಿಕೊಂಡು ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಬಚ್ಚನಕೇರಿ ಗ್ರಾಮದ ವಿದ್ಯಾರ್ಥಿಗಳು ಪ್ರತಿದಿನ ಶಾಲಾ-ಕಾಲೇಜುಗಳಿಗೆ ತೆರಳಲು ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ನಿಗದಿತ ಸಮಯಕ್ಕೆ ಬಸ್ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಿನ್ನೆ ಸಂಜೆ ನಡೆದ ಘಟನೆ
ನಿನ್ನೆ ಸಂಜೆ ಸುಮಾರು ೪ ಗಂಟೆಗೆ ಬಚ್ಚನಕೇರಿಗೆ ಬಸ್ ತೆರಳಬೇಕಾಗಿತ್ತು. ಆದರೆ ೫ ಗಂಟೆಯಾದರೂ ಬಸ್ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಕಂಟ್ರೋಲರ್ ಅವರನ್ನು ಪ್ರಶ್ನಿಸಿದರು. ಈ ವೇಳೆ, “ಬಸ್ ಬರುತ್ತಿದೆ” ಎಂದು ಕಂಟ್ರೋಲರ್ ತಿಳಿಸಿದ್ದಾರೆ. ಆದರೆ ಮತ್ತೊಂದು ಗಂಟೆ ಕಳೆದರೂ ಬಸ್ ಬಾರದಿದ್ದರಿಂದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಂಟ್ರೋಲರ್ ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಕಂಟ್ರೋಲರ್, ಬಸ್ ಡಿಪೋಗೆ ತೆರಳಿ ವಿಚಾರಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಡಿಪೋಗೆ ತೆರಳಿ ನಿಲ್ದಾಣದಲ್ಲಿ ನಡೆದ ಘಟನೆಯ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಸಂಜೆ ಸುಮಾರು ೭ ಗಂಟೆಗೆ ಬಚ್ಚನಕೇರಿಗೆ ಬಸ್ ಬಿಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಕ್ಕಳಿಗಾಗಿ ಕಾದು ಕುಳಿತ ಪೋಷಕರು
ಇತ್ತ ಬೆಳಗ್ಗೆ ಶಾಲೆಗೆ ತೆರಳಿದ್ದ ಮಕ್ಕಳು ಮಧ್ಯಾಹ್ನವಾದರೂ ಮನೆಗೆ ಮರಳದಿದ್ದರಿಂದ ಪೋಷಕರು ಆತಂಕಗೊಂಡು ದಾರಿ ನೋಡುತ್ತಾ ಕುಳಿತಿದ್ದರು. ಹೊತ್ತು ಮುಳುಗಿದ ಬಳಿಕ ಮಕ್ಕಳು ಮನೆಗೆ ತಲುಪಿದ್ದು, ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. 
ಮುಂಜಾನೆ ಶಾಲೆ-ಕಾಲೇಜುಗಳಿಗೆ ತೆರಳಿದ್ದ ಮಕ್ಕಳು ಮಧ್ಯಾಹ್ನದ ವೇಳೆಗೆ ಮನೆಗೆ ಬರಬೇಕಿತ್ತು. ಆದರೆ, ಸಂಜೆ ಹೊತ್ತು ಮುಳುಗಿದರೂ ಮಕ್ಕಳು ಮನೆಗೆ ಬಾರದಿದ್ದಾಗ ಪೋಷಕರು ಜಾತಕ ಪಕ್ಷಿಯಂತೆ ದಾರಿ ಕಾಯುವಂತಾಯಿತು. ತಡರಾತ್ರಿ ಹಸಿವು, ಆಯಾಸದಿಂದ ಮಕ್ಕಳು ಮನೆಗೆ ತಲುಪಿದ್ದನ್ನು ಕಂಡು ಆಕ್ರೋಶಗೊಂಡ ಗ್ರಾಮಸ್ಥರು, ಇಂದು ಬೆಳಿಗ್ಗೆ ಬಚ್ಚನಕೇರಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಒಗ್ಗೂಡಿ ಚನ್ನಮ್ಮನ ಕಿತ್ತೂರು ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿ, ನಿಲ್ದಾಣದ ಒಳಗೆ ಮತ್ತು ಹೊರಗೆ ಇರುವ ಎರಡೂ ಗೇಟ್‌ಗಳಿಗೆ ಟ್ರ್ಯಾಕ್ಟರ್‌ಗಳನ್ನು ಅಡ್ಡಹಾಕಿ ಪ್ರತಿಭಟನೆ ನಡೆಸಿದರು. ಬಚ್ಚನಕೇರಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಓಡಿಸಬೇಕು. ವಿದ್ಯಾರ್ಥಿಗಳ ಶಾಲಾ ಸಮಯಕ್ಕೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡಬೇಕು. ಗ್ರಾಮಕ್ಕೆ ನಿಗದಿತ ಸಮಯದಲ್ಲಿ ಬಸ್ ಸಂಚಾರ ಖಚಿತಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಿಂದ ಬಸ್ ನಿಲ್ದಾಣದೊಳಗೆ ಬೆಳಗಾವಿ ಹಾಗೂ ಧಾರವಾಡ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬಸ್‌ಗಳು ಸಿಲುಕಿಕೊಂಡಿದ್ದರಿಂದ ಕೆಲಕಾಲ ನಿಲ್ದಾಣದಲ್ಲಿ ಹೈಡ್ರಾಮಾ ವಾತಾವರಣ ನಿರ್ಮಾಣವಾಯಿತು. ಪ್ರಯಾಣಿಕರು ಪರದಾಡುವಂತಾಯಿತು.
“ಮಕ್ಕಳು ಸಂಜೆಯವರೆಗೆ ರಸ್ತೆಯಲ್ಲಿ ಕಾಯುವ ಪರಿಸ್ಥಿತಿ ಬರಬಾರದು”
“ಬಚ್ಚನಕೇರಿಯ ವಿದ್ಯಾರ್ಥಿಗಳು ಪ್ರತಿದಿನ ಬಸ್‌ಅವಲಂಬಿಸಿ ಶಾಲೆಗೆ ಹೋಗುತ್ತಾರೆ. ಬೆಳಗ್ಗೆ ಹೋಗಿ ಮಧ್ಯಾಹ್ನ ಮನೆಗೆ ಬರಬೇಕಾದ ಮಕ್ಕಳು ಬಸ್‌ಸಿಗದೆ ಸಂಜೆಯವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರು ಮಕ್ಕಳಿಗಾಗಿ ಆತಂಕದಿಂದ ಕಾಯಬೇಕಾಗಿದೆ. ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಚ್ಚನಕೇರಿಗೆ ಸಮರ್ಪಕ ಹಾಗೂ ಸಮಯಪಾಲನೆಯ ಬಸ್ ವ್ಯವಸ್ಥೆ ಕಲ್ಪಿಸಬೇಕು” ಎಂದು ಗ್ರಾಮಸ್ಥ ಕರೆಪ್ಪ ಮಂಚಿನಮನಿ ಆಗ್ರಹಿಸಿದರು.
ಬಾಕ್ಸ ಐಟಮ್-೧
 “ಬಚ್ಚನಕೇರಿಯ ವಿದ್ಯಾರ್ಥಿಗಳು ಪ್ರತಿದಿನ ಬಸ್‌ಅವಲಂಬಿಸಿ ಶಾಲೆಗೆ ಹೋಗುತ್ತಾರೆ. ಬೆಳಗ್ಗೆ ಹೋಗಿ ಮಧ್ಯಾಹ್ನ ಮನೆಗೆ ಬರಬೇಕಾದ ಮಕ್ಕಳು ಬಸ್ಸಿಗದೆ ಸಂಜೆಯವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರು ಮಕ್ಕಳಿಗಾಗಿ ಆತಂಕದಿಂದ ಕಾಯಬೇಕಾಗಿದೆ. ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಚ್ಚನಕೇರಿಗೆ ಸಮರ್ಪಕ ಹಾಗೂ ಸಮಯಪಾಲನೆಯ ಬಸ್ ವ್ಯವಸ್ಥೆ ಕಲ್ಪಿಸಬೇಕು” ಕರೆಪ್ಪ ಮಂಚಿನಮನಿ ಬಚ್ಚನಕೇರಿಗ್ರಾಮಸ್ಥ

ಬಸ್ ಸಂಚಾರದ ಸಮಸ್ಯೆ ಶಾಶ್ವತವಾಗಿ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಈ ವೇಳೆ ಕರೆಪ್ಪ ಹಂಚಿನಮನಿ, ನಿಂಗಪ್ಪ ಕೂಗಟಿ, ಶಂಕರ ಚನ್ನಂಗಿ, ದುಂಡಪ್ಪ ಗೋಣಿ, ರಾಜಪ್ಪ ಗಿಡ್ಡಣ್ಣವರ, ಮುರಗೆಪ್ಪ ಸಿದ್ದಗಿರಿ, ಬಾಳಪ್ಪ ದುರಗದ, ನಾಗರಾಜ ದುರ್ಗದ ಸೇರಿದಂತೆ ಇತರರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಂಕರಗೌಡ ಪಾಟೀಲಗೆ ಶಿಕ್ಷಣ ಸೇವಾರತ್ನ ಪ್ರಶಸ್ತಿ ಪ್ರದಾನಹತಾಷಭಾವನೆಯಿಂದ ನಡಹಳ್ಳಿ ಹೋರಾಟ-ಪ್ರಭುಗೌಡಕಂಟೆಪ್ಪಗೌಡ ಪಾಟೀಲ ನಿಧನವಿದ್ಯಾರ್ಥಿಗಳು ಕಲಿಕಾ ಮಟ್ಟ ಸುಧಾರಿಸಿಕೊಳ್ಳಬೇಕು: ಜಮಗೊಂಡಿಕೃಷಿ ಸಖಿ ಮಾಡ್ಯೂಲ್-ಗಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ*27 ದಿನಗಳಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ; ಎಐಸಿಸಿ ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ಸಕ್ರಿಯ ಭಾಗಿ*ಕಾಗವಾಡ ಬರಪೀಡಿತ ಪಟ್ಟಿಯಿಂದ ಹೊರಕ್ಕೆ: ನಿರಂತರ ವಿದ್ಯುತ್ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ಬೃಹತ್ ರಸ್ತೆ ತಡೆ ಪ್ರತಿಭಟನೆಗುಡದಳ್ಳಿ ಗ್ರಾಮದಲ್ಲಿ ಅಂತರಾಷ್ಟಿçÃಯ ಹಾವು ಕಡಿತ ಜಾಗೃತಿ ದಿನ ಕಾರ್ಯಕ್ರಮಕಿತ್ತೂರು ಬಸ್ ನಿಲ್ದಾಣಕ್ಕೆ ಟ್ರ್ಯಾಕ್ಟರ್ ಅಡ್ಡಹಾಕಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆರಾಮದುರ್ಗವನ್ನು ಸಂಪೂರ್ಣ ಬರಪೀಡಿತ ತಾಲೂಕು ಎಂದು ಘೋಷಿಸಲು ಸರ್ಕಾರಕ್ಕೆ ಮನವಿ