LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಹತಾಷಭಾವನೆಯಿಂದ ನಡಹಳ್ಳಿ ಹೋರಾಟ-ಪ್ರಭುಗೌಡ

ಶಾಸಕ ನಾಡಗೌಡರ ಪ್ರಯತ್ನದಿಂದ ತಾಳಿಕೋಟೆ ತಾಲೂಕು ಬರಪಟ್ಟಿಗೆ ಸೇರ್ಪಡೆ

ತಾಳಿಕೋಟೆ,   ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಯಾವುದೇ ವಿಷಯದ ಕುರಿತು ಮಾಹಿತಿ ಪಡೆಯುವುದು ಸುಲಭವಿದೆ ಇದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರಿಗೆ ಗೊತ್ತಿದ್ದರೂ ರೈತರ ವಿಷಯದಲ್ಲಿ ರಾಜಕಾರಣ ಮಾಡಲು ಮುಂದಾಗಿದುದ್ದು ಸರಿಯಲ್ಲಾವೆಂದು ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಅವರು ಹೇಳಿದರು.
       ಮಂಗಳವಾರರಂದು ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸದಾ ೧೫ ವರ್ಷಗಳಿಂದ ಅಧಿಕಾರದ ಮದದಲ್ಲಿದ್ದ ಎ.ಎಸ್.ಪಾಟೀಲ(ನಡಹಳ್ಳಿ) ಅವರು ನಾಡಗೌಡರ ವಿರೂದ್ದ ಸೋಲುಂಡ ಮೇಲೆ ಮಾನಸಿಕ ಸ್ಥಿತಿಮಿತಿಯನ್ನು ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ ಯಾವಾಗಲು ಶಾಸಕ ನಾಡಗೌಡರ ವಿರೂದ್ದ ಏರ ಧ್ವನಿಯಲ್ಲಿ ನಾಲಿಗೆ ಮೇಲೆ ಹಿಡಿತವಿಲ್ಲದೇ ಮಾತನಾಡುವದನ್ನು ರೂಡಿಸಿಕೊಂಡಿದ್ದಾರೆ ಅವರ ಅಧಿಕಾರ ಕಳೆದುಕೊಂಡು ಹತಾಷರಾಗಿ ಮಾತನಾಡುತ್ತಿದ್ದಾರೆ ಇಂತಹ ದುರ್ವರ್ತನೆಯನ್ನು ಕೂಡಲೇ ನಿಲ್ಲಿಸಬೇಕೆಂದು ಹೇಳಿದ ಪ್ರಭುಗೌಡ ಮದರಕಲ್ಲ ಅವರು ಜನರನ್ನು ತಪ್ಪು ದಾರಿಗೆ ಕರೆದೊಯ್ಯುವ ಪ್ರಯತ್ನ ಯಾರಿಂದಲೂ ಆಗಬಾರದು ಬರಗಾಲ ಘೋಷಣೆಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ನಿಯಮಗಳು ಹಾಗೂ ಬರ ನಿರ್ವಹಣಾ ಕ್ರಮಗಳ ಬಗ್ಗೆ ಅರಿವು ಇಲ್ಲದ ಅವರು ರೈತರ ಹೆಸರಿನ ಮೇಲೆ ಜನರನ್ನು ಎತ್ತಿಕಟ್ಟಿಕೊಂಡು ಹೋರಾಟ ಹಾದಿ ಹಿಡಿಯುತ್ತೇವೆಂದು ಹೇಳಿರುವ ಅವರ ಹೇಳಿಕೆ ಸಂಪೂರ್ಣ ಹತಾಷಯ ಭಾವನೆಯಿಂದ ಕುಡಿದ್ದಾಗಿದೆ ಎಂದು ಅವರು ತಿಳಿಸಿದರು.
      ಬರಗಾಲ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ಎಸ್‌ಡಿಆರ್‌ಎಫ್ ನಿಯಮಗಳು ಪ್ರಮುಖವಾಗಿವೆ. ಮಳೆ ಕೊರತೆ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಬರ ಪರಿಸ್ಥಿತಿಯನ್ನು ಪರಿಗಣಿಸಲಾಗುತ್ತದೆ. ಈ ನಿಯಮಗಳನ್ನು ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಬದಲಾಯಿಸಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಸಂದರ್ಭಗಳಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸುವುದು ಸಹಜವಾಗಿದೆ ಕೇಂದ್ರ ಸರ್ಕಾರದ ಮಾನದಂಡಗಳಲ್ಲಿ ತಾಳಿಕೋಟೆ ತಾಲೂಕು ತೀವ್ರ ಬರಗಾಲವೆಂದು ಗುರಿತಿಸಲ್ಪಟ್ಟಿದ್ದರಿಂದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಕೂಡಲೇ ಬರ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳ ಮೇಲೆ ಕಮದಾಯ ಸಚೀವರ ಮೇಲೆ ಒತ್ತಡ ಹಾಕಿ ಬರಗಾಲ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವರೊಂದಿಗೆ ಸರ್ಕಾರದಿಂದ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಗೊಳಿಸಿದ್ದಾರೆ ಶಾಸಕ ನಾಡಗೌಡ ಅವರ ಪ್ರಭುದ್ದ ರಾಜಕಾರಣಿಯಾಗಿದ್ದಾರೆ ಕಚಿಬಿಚಿ ರಾಜಕೀಯ ಎಂದೂ ಅವರು ಮಾತನಾಡಿಲ್ಲಾ ಬರಗಾಲದಂತಹ ಗಂಭೀರ ವಿಚಾರದಲ್ಲಿ ರಾಜಕೀಯ ಉದ್ದೇಶದಿಂದ ಜನರಲ್ಲಿ ಗೊಂದಲ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ ನಡಹಳ್ಳಿ ಅವರ ಪ್ರಯತ್ನ ಸಂಪೂರ್ಣ ವಿಫಲವಾಗಿದೆ ಶಾಸಕ ನಾಡಗೌಡರು ಯಾವಾಗಲೂ ಜನರ ಪರವಾಗಿ ರೈತರ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ ಇಂತಹ ಕಲಬೆರಿಕೆ ರಾಜಕಾರಣಿಗಳ ಮಾತಿಗೆ ಯಾರೂ ಬೆಲೆ ಕೊಡುವ ಅಗತ್ಯವಿಲ್ಲಾವೆಂದು ಹೇಳಿದರು. 
ಈ ಸಮಯದಲ್ಲಿ ಬಿ.ಎನ್.ಹಿಪ್ಪರಗಿ, ಸಿದ್ದನಗೌಡ ಪಾಟೀಲ(ನಾವದಗಿ), ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಬಿ.ಎನ್.ಹಿಪ್ಪರಗಿ, ಸಂಗನಗೌಡ ಅಸ್ಕಿ, ರೋಷನ್ ಡೋಣಿ, ಮೊದಲಾದವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಂಕರಗೌಡ ಪಾಟೀಲಗೆ ಶಿಕ್ಷಣ ಸೇವಾರತ್ನ ಪ್ರಶಸ್ತಿ ಪ್ರದಾನಹತಾಷಭಾವನೆಯಿಂದ ನಡಹಳ್ಳಿ ಹೋರಾಟ-ಪ್ರಭುಗೌಡಕಂಟೆಪ್ಪಗೌಡ ಪಾಟೀಲ ನಿಧನವಿದ್ಯಾರ್ಥಿಗಳು ಕಲಿಕಾ ಮಟ್ಟ ಸುಧಾರಿಸಿಕೊಳ್ಳಬೇಕು: ಜಮಗೊಂಡಿಕೃಷಿ ಸಖಿ ಮಾಡ್ಯೂಲ್-ಗಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ*27 ದಿನಗಳಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ; ಎಐಸಿಸಿ ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ಸಕ್ರಿಯ ಭಾಗಿ*ಕಾಗವಾಡ ಬರಪೀಡಿತ ಪಟ್ಟಿಯಿಂದ ಹೊರಕ್ಕೆ: ನಿರಂತರ ವಿದ್ಯುತ್ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ಬೃಹತ್ ರಸ್ತೆ ತಡೆ ಪ್ರತಿಭಟನೆಗುಡದಳ್ಳಿ ಗ್ರಾಮದಲ್ಲಿ ಅಂತರಾಷ್ಟಿçÃಯ ಹಾವು ಕಡಿತ ಜಾಗೃತಿ ದಿನ ಕಾರ್ಯಕ್ರಮಕಿತ್ತೂರು ಬಸ್ ನಿಲ್ದಾಣಕ್ಕೆ ಟ್ರ್ಯಾಕ್ಟರ್ ಅಡ್ಡಹಾಕಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆರಾಮದುರ್ಗವನ್ನು ಸಂಪೂರ್ಣ ಬರಪೀಡಿತ ತಾಲೂಕು ಎಂದು ಘೋಷಿಸಲು ಸರ್ಕಾರಕ್ಕೆ ಮನವಿ