Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಕ್ಕುಂದ ಗ್ರಾಮದಲ್ಲಿ ಪೀಡೆನಾಶಕಗಳ ಸುರಕ್ಷತೆ ಕುರಿತು ಜಾಗ್ರತಿ ಕಾರ್ಯಕ್ರಮ.


 ಬೈಲಹೊಂಗಲ.ಜು,೨೪ :  ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಶುಕ್ರವಾರದಂದು  ಕೃಷಿ ಇಲಾಖೆ ಬೈಲಹೊಂಗಲ ವತಿಯಿಂದ ಶ್ರೀ ಸಂಗತಿಕೊಪ್ಪ ಬಸವೇಶ್ವರ ದೇವಸ್ಥಾನದಲ್ಲಿ ಕೃಷಿಯಲ್ಲಿ ಪೀಡೆನಾಶಕಗಳ ಸುರಕ್ಷಿತ ಮತ್ತು ವಿವೇಚನಾತ್ಮಕ ಬಳಕೆ ಕುರಿತು ರೈತರಿಗೆ ಜಾಗೃತಿ ಕಾರ್ಯಕ್ರಮ ಜರುಗಿತು.
ಇವತ್ತಿನ ಆಧುನಿಕ ಜಗತ್ತಿನಲ್ಲಿ ಕೃಷಿ ಭೂಮಿಯನ್ನು ಆರೋಗ್ಯದಿಂದ ಇಡಲು ರಾಸಾಯನಿಕ ಗೊಬ್ಬರ ಮತ್ತು ಪಿಡೆನಾಶಕಗಳ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ ವಿಷಮುಕ್ತ ಆಹಾರ ಉತ್ಪಾದನೆ ಮಾಡಲು ಕೃಷಿ ಅಧಿಕಾರಿ  ಯಮನಪ್ಪ ಆರ್ ಎಂ ರೈತರಿಗೆ ಮನವಿ ಮಾಡಿದರು.
ಕೃಷಿ ಕಾಯಕದಲ್ಲಿ   ರೈತರು ಸುರಕ್ಷಿತವಾಗಿ ರಾಸಾಯನಿಕ ವಸ್ತುಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿಟಶಾಸ್ತ್ರಜ್ಞ. ಕೆ.ಎಲ್. ಈ  ಕೃಷಿ ಮಹಾವಿದ್ಯಾಲಯದ ಡಾ. ನಿಂಗರಾಜ ಬೆಳಗಲ್ ವಿವರಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಊರಿನ ಹಿರಿಯರಾದ   ಅಶೋಕ ಪಾಟೀಲ, ಅಶೋಕ ಜಂತಿ ವಹಿಸಿದ್ದರು ಮತ್ತು ಇಲಾಖೆಯ ಜಾಗೃತಿ ಕಾರ್ಯಕ್ರಮದ ಕುರಿತು ಹರ್ಷ ವ್ಯಕ್ತಪಡಿಸಿದರು.
 ಹಾಗೆಯೇ ಶಿಕ್ಷಣ ಪ್ರೇಮಿಗಳು, ಸಮಾಜ ಸೇವಕರು ಹಾಗೂ ಉದ್ಯಮಿಗಳು ಆದ  ನಾರಾಯಣ ನಲವಡೆ ಅವರು ಕಾರ್ಯಕ್ರಮದಲ್ಲಿ ರೈತರಿಗೆ ಪ್ರಸ್ತುತ ಕೃಷಿಯಲ್ಲಿ ರೈತರು ಅನುಸರಿಸ ಬೇಕಾದ ವಿವಿಧ ರೀತಿಯ ಕೆಲಸಗಳ ಬಗ್ಗೆ ವಿವರಿಸಿ ಇಲಾಖೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೋರ್ಟಿವ ಕಂಪನಿ ಪ್ರತಿನಿಧಿಗಳು, ಕೃಷಿ ಅಧಿಕಾರಿ  ಬಿ. ಕೆ ಜಮಾದಾರ, ಗಂಗಾಧರ, ಬಸವರಾಜ, ಚಂದ್ರಕಾಂತ ಮರಡಿ ನಿರೂಪಿಸಿ ವಂದಿಸಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST