ರಬಕವಿ: ಜು.೨೪., ರಾಂಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಜಮಖಂಡಿ ತಾಲೂಕ, ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ "ಪೌಷ್ಟಿಕ ಆಹಾರ ಕಾರ್ಯಕ್ರಮ" ಜರುಗಿತು.
ಈ ಕಾರ್ಯಕ್ರಮವನ್ನು ಜಮಖಂಡಿ ತಾಲೂಕು ಯೋಜನಾಧಿಕಾರಿ ನಿಂಗಪ್ಪ ಗುಡಸಲಮಣಿ ರವರು ಉದ್ಘಾಟಿಸಿ, ಮಾತನಾಡಿ ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮವು ಮತ್ರೋಶ್ರೀ ಹೇಮಾವತಿ ಅಮ್ಮನವರ ಕನಸಿನ ಕಾರ್ಯಕ್ರಮ ಇದಾಗಿದ್ದು ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅವಶ್ಯ ಇರುವ ಅವರ ಕುಟುಂಬ ನಿರ್ವಹಣೆಗೆ.ಅವಶ್ಯಕತೆ ಇರುವ ಸರಕಾರದ ಹಾಗೂ ಬ್ಯಾಂಕಿನ ಸೌಲಭ್ಯಗಳು ವಯಕ್ತಿಕ ಆರೋಗ್ಯ, ಮಹಿಳಾ ಕಾನೂನು ಹೀಗೆ ಬೇರೆ ಇಲಾಖೆಗಳ ಸಂಪನ್ಮೂಲಗಳಿಂದ ತಿಳುವಳಿಕೆ ನೀಡಲಾಗುತ್ತಿದೆ.
ಪ್ರಸ್ತುತ ದಿನಗಳಲ್ಲಿ ಮನೆಯ ಆಹಾರಕಿಂತ ಹೊರಗಡೆಯ ಆಹಾರಕ್ಕೆ ಜನ ಆಸಕ್ತ ತೋರುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ದು?ರಿಣಾಮ ಬೀರುತ್ತದೆ. ಆದ್ದರಿಂದ ಮನೆಯ ಆಹಾರವೇ ಆರೋಗ್ಯಕ್ಕೆ ಪೂರಕವಾಗಿದೆ, ಉತ್ತಮ ಆಹಾರ ದಿಂದ ಉತ್ತಮ ಆರೋಗ್ಯ ಜೀವನ ಸಾಧ್ಯ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಗಳಾದ ಆರೋಗ್ಯ ಇಲಾಖೆಯ ಎಂ ಕೆ ಮುಲ್ಲಾ ಮಾತನಾಡಿ ನಮ್ಮ ಆರೋಗ್ಯ ಮನೆಯ ಅಡುಗೆ ಮನೆಯಲ್ಲಿದೆ, ಇವತ್ತಿನ ಆಧುನಿಕ ಯುಗದಲ್ಲಿ ಜಂಕ್ ಫುಡ್ ಗಳನ್ನು ಸೇವಿಸುವುದನ್ನು ಬಿಟ್ಟು ಮನೆಯಲ್ಲಿಯೆ ಆಹಾರ ತಯಾರಿಸಿ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ನಗರಸಭೆ ಸದಸ್ಯೆ ರೇಖಾ ಕೊಡತಿ ವಹಿಸಿದ್ದರು.
ಹೀರಿಯರಾದ ಶಿವಪುತ್ರಪ್ಪ ಮುರಗುಂಡಿ,
ಮೀನಾಕ್ಷಿ ಸಿದ್ದು ಸವದಿ,ಮಹಾಲಿಂಗಪ್ಪ ಘಂಟಿ,ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀದೇವಿ ಎಸ್ ವೈ, ಮೇಲ್ವಿಚಾರಕ ಕುಮಾರ ಮತ್ತು ಸೇವಾ ಪ್ರತಿನಿಧಿ ಶೈಲಜಾ ಹೊಸಕೋಟಿ, ಮಹಿಳಾ ಒಕ್ಕೂಟದ ಸದಸ್ಯರು,ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
