ಬೀಳಗಿ ಪಟ್ಟಣ ಪಂಚಾಯತ ಕಾರ್ಯಾಲಯ ಸಭಾಭವನದಲ್ಲಿ ಪೌರಕಾರ್ಮಿಕ ದಿನಾಚರಣೆ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಎಲ್ಲ ಪೌರಕಾರ್ಮಿಕ ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ತಹಶಿಲ್ದಾರರ ವಿನೋದ ಹತ್ತಳ್ಳಿ ವಹಿಸಿದ್ದರು. ಮುಖ್ಯಾಧಿಕಾರಿಗಳಾದ ದೇವಿಂದ್ರ ಧನಪಾಲ,ಶಾಖಾ ಸಂಘದ ಅಧ್ಯಕ್ಷರಾದ ರಾಘವೇಂದ್ರ ಕಪಾಟೆ, ಗೌರವಾಧ್ಯಕ್ಷರಾದ ವಿನೋದ ಗಿಡ್ಡಿ ಉಪಾಧ್ಯಕ್ಷರಾದ ಶ್ರೀಕಾಂತ ಲೋಕಾಪೂರ, ಕಾರ್ಯದರ್ಶಿಗಳಾದ ವಿ.ಎಸ್.ಚಲವಾದಿ, ಖಜಾಂಚಿ ಸೈದಬಾಷಾ, ಸಂಘಟನಾ ಕಾರ್ಯದರ್ಶಿ ರಾಜಕುಮಾರ ಹಲಗಣಿ ಸೇರಿದಂತೆ ಸಿಬ್ಬಂದಿಗಳು, ಪೌರಕಾರ್ಮಿಕರು ಇದ್ದರು.