LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

 ಕಾರ್ಯನಿರತ ಪತ್ರಕರ್ತರ ಸಂಘದಿಂದ  ಪೌರಕಾರ್ಮಿಕರಿಗೆ ಸನ್ಮಾನ  

ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಪೌರಕಾರ್ಮಿಕರ ಕೊಡುಗೆ ಅಪಾರ  ಅಧ್ಯಕ್ಷ ರಾಕೇಶ ಮೈಗೂರ

ಅಥಣಿ : ಸಮಾಜದ ಸ್ವಚ್ಛತೆ ಮತ್ತು  ಪರಿಸರ ಸಂರಕ್ಷಣೆಯಲ್ಲಿ  ಪೌರಕಾರ್ಮಿಕರ ಕೊಡುಗೆ ಅಪಾರವಾದದ್ದು, ಸ್ವಚ್ಛ ಭಾರತ ನಿರ್ಮಾಣದಲ್ಲಿ ಅವರ  ಸೇವೆ  ಅಮೂಲ್ಯವಾಗಿದೆ ಎಂದು ಕನ್ನಡಪರ ಹೋರಾಟಗಾರ ಶಬ್ಬೀರ್ ಸಾತಬಚ್ಚೆ ಹೇಳಿದರು.
 ಅವರು ಇಲ್ಲಿನ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ  ಹಾಗೂ  ಕರ್ನಾಟಕ ರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯ ನಿಮಿತ್ಯ  ಪೌರಕಾರ್ಮಿಕರನ್ನು  ಸನ್ಮಾನಿಸಿ ಮಾತನಾಡಿದರು.ಪೌರಕಾರ್ಮಿಕರು ಸಮಾಜದ ಸ್ವಚ್ಛತೆ ಮತ್ತು ಆರೋಗ್ಯಕ್ಕಾಗಿ ಅತ್ಯಂತ ಶ್ರಮದಾಯಕ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ದೇವರ ಸೇವೆಯಂತೆಯೇ ಪವಿತ್ರವಾದದ್ದು ಎಂದರು.
  ಅಧ್ಯಕ್ಷತೆ ವಹಿಸಿದ್ದ  ಕಾ.ನಿ.ಪ ಸಂಘದ ಅಧ್ಯಕ್ಷ ರಾಕೇಶ ಮೈಗೂರ ಮಾತನಾಡಿ  ಪ್ರತಿದಿನ ಮುಂಜಾನೆ  ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತಿರುವ ‍ಪೌರ ಕಾರ್ಮಿಕರ ಸೇವೆಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು. ಪೌರಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಸೇವೆಯನ್ನು ಸ್ಮರಿಸಿ ಗೌರವಿಸುವುದು ನಮ್ಮ ಕರ್ತವ್ಯ. ರಾಜ್ಯ ಸರ್ಕಾರ ಪೌರಕಾರ್ಮಿಕರಿಗೆ  ಜೀವ ವಿಮೆ ಸೇರಿದಂತೆ  ಅಗತ್ಯ ಸೌಲಭ್ಯಗಳನ್ನ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. 
   ಪೌರ ನೌಕರರ ಸಂಘದ ಅಧ್ಯಕ್ಷ  ಬಸವರಾಜ ಕಾಂಬಳೆ ಮಾತನಾಡಿ  ಪಟ್ಟಣದ ಸ್ವಚ್ಛತೆಗಾಗಿ ಹಗಲಿರುಡು ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನ ಗುರುತಿಸಿ ಪೌರಕಾರ್ಮಿಕರಿಗೆ ಉಡುಗೊರೆ ನೀಡಿ ಗೌರವಿಸಿದ ಕಾರ್ಯನಿರ್ವತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳಿಗೆ ಧನ್ಯವಾದಗಳು ಸಲ್ಲಿಸುತ್ತೇನೆ. ಸಮಾನ ವೇತನ, ನೀರು ನೇಮಕಾತಿಯ ಪೌರ ನೌಕರರನ್ನು ಖಾಯಂ ಗೊಳಿಸುವುದು  ಸೇರಿದಂತೆ  ಪೌರಕಾರ್ಮಿಕರ ಅನೇಕ ಬೇಡಿಕೆಗಳಿಗಾಗಿ ಹೋರಾಟದ ಮೂಲಕ ಮನವಿ ಸಲ್ಲಿಸಿದ್ದೇವೆ. ತಮ್ಮೆಲ್ಲರ ಸಹಕಾರ ಮತ್ತು ಬೆಂಬಲದೊಂದಿಗೆ  ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು. 
 ಇದೇ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರ, ಸಾನ್ವಿ ಮೋಟರು ವಾಹನ ತರಬೇತಿ ಕೇಂದ್ರದ ಪ್ರಾಚಾರ್ಯ  ಸಿದ್ದು ಹಂಡಗಿ  ಅವರನ್ನು ಸನ್ಮಾನಿಸಲಾಯಿತು.
 ಸಂಘದ ಕಾರ್ಯದರ್ಶಿ ಹಾಗೂ ಕನ್ನಡ ಪರ ಹೋರಾಟಗಾರ   ಅಣ್ಣಾಸಾಬ ತೆಲಶಂಗ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ  ರಮೇಶ ಬಾದವಾಡಗಿ,  ಪರಶುರಾಮ ನಂದೇಶ್ವರ, ಶಿವಕುಮಾರ ಅಪರಾಜ, ಅಬ್ದುಲ್ ಜಬ್ಬಾರ ಚಿಂಚಲಿ, ವಿಲಾಸ ಕಾಂಬಳೆ, ಸಂದೀಪ ಘಟಕಾಂಬಳೆ, ಸುಂದರ ಸೌದಾಗರ, ಮಂಜು ಹೋಳಿಕಟ್ಟಿ, ಯಾಶಿನ್ ಝರೆ, ರಾಜು ಕಾವೇರಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಟೋಬರ್ 23 ರಂದು ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ"ಸಾಧಕ ಶಿಕ್ಷಕರ ಸಾಧನೆ ಉಳಿದವರಿಗೆ ಪ್ರೇರಣೆಯಾಗಲಿ" : ಉಮೇಶ ಬೆಳಕೂಡಬ್ಯಾಂಕ್ ಅಭಿವೃದ್ಧಿಗೆ ಸಹಕಾರ ಅಗತ್ಯ: ರಾಮಲಿಂಗಯ್ಯಶ್ರೀಸಂಕೇಶ್ವರ: ನವೆಂಬರ್ 1ರೊಳಗೆ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಗಡುವು; ಕನ್ನಡಪರ ಸಂಘಟನೆಗಳ ಎಚ್ಚರಿಕೆ ಕಾರ್ಯನಿರತ ಪತ್ರಕರ್ತರ ಸಂಘದಿಂದ  ಪೌರಕಾರ್ಮಿಕರಿಗೆ ಸನ್ಮಾನ  ಕಾಗವಾಡ ತಾಲೂಕು ಬರಪೀಡಿತ ಘೋಷಣೆ: ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ರೈತರು ಹಾಗೂ ಬಿಜೆಪಿ ಕಾರ್ಯಕರ್ತರುಧನಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯ 7,500 ಮೆಟ್ರಿಕ್ ಟನ್‌ಗೆ ಹೆಚ್ಚಳ: ಮಹಾದೇವಪ್ಪ ಯಾದವಾಡಬೀಳಗಿಯಲ್ಲಿ ವಿಜೃಂಭಣೆಯ ಪೌರಕಾರ್ಮಿಕ ದಿನಾಚರಣೆ: ನೈರ್ಮಲ್ಯ ಸೇವಕರಿಗೆ ಗೌರವ ಸನ್ಮಾನಬಾಗಲಕೋಟೆಯಲ್ಲಿ ಬಲಗೈ ಸಮುದಾಯಗಳ ಒಕ್ಕೂಟದ ಸಭೆ: ಸಮುದಾಯದ ಹಿತಾಸಕ್ತಿಗೆ ಮುಖಂಡರ ಒಕ್ಕೊರಲ ಆಗ್ರಹಒಂದೇ ಪ್ಯಾಕೇಜ್‌ನಲ್ಲಿ ಕಾಮಗಾರಿಗಳ ಟೆಂಡರ್ ಕರೆಯದಂತೆ ಗುತ್ತಿಗೆದಾರರ ಮನವಿ.