LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಒಂದೇ ಪ್ಯಾಕೇಜ್‌ನಲ್ಲಿ ಕಾಮಗಾರಿಗಳ ಟೆಂಡರ್ ಕರೆಯದಂತೆ ಗುತ್ತಿಗೆದಾರರ ಮನವಿ.


ಚ ​ಕಿತ್ತೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ನಗರಾಭಿವೃದ್ಧಿ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಒಂದೇ ದೊಡ್ಡ ಪ್ಯಾಕೇಜ್‌ನಲ್ಲಿ ಟೆಂಡರ್ ಕರೆಯದಂತೆ  ಹಾಗು ಮೀಸಲಾತಿಯನ್ನು ಕೈಬಿಡದಂತೆ  ಸ್ಥಳೀಯ ಗುತ್ತಿಗೆದಾರರ ಸಂಘ ಮನವಿ ಮಾಡಿದೆ.
​ಕಿತ್ತೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ₹3.25 ಕೋಟಿ  ಹಾಗೂ ಎಂ.ಕೆ. ಹುಬ್ಬಳ್ಳಿಯ 4.25 ಕೋಟಿ ಮೊತ್ತದ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಸಣ್ಣ ಮಟ್ಟದ ವಿಂಗಡಣೆ ಮಾಡದೇ, ಒಟ್ಟಾಗಿ ಬೃಹತ್ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ. ಈ ನಿರ್ಧಾರದಿಂದಾಗಿ ಹೊರಗಿನ ದೊಡ್ಡ ದೊಡ್ಡ ಗುತ್ತಿಗೆದಾರರಿಗೆ ಅನುಕೂಲವಾಗಲಿದ್ದು, ಸ್ಥಳೀಯ ಕಾಮಗಾರಿ ನಂಬಿಕೊಂಡಿರುವ ಸಣ್ಣ ಗುತ್ತಿಗೆದಾರರಿಗೆ ಹಾಗೂ ಕಾರ್ಮಿಕರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೃಹತ್ ಮೊತ್ತವನ್ನು ಒಂದೇ ಪ್ಯಾಕೇಜ್ ಮಾಡುವ ಬದಲಿಗೆ ₹20 ಲಕ್ಷದಿಂದ ₹50 ಲಕ್ಷದವರೆಗಿನ ಪ್ರತ್ಯೇಕ (ಸಣ್ಣ) ಟೆಂಡರ್‌ಗಳನ್ನು ಕರೆಯಬೇಕು. ಹೀಗೆ ಮಾಡುವುದರಿಂದ ಸ್ಥಳೀಯ ಸಣ್ಣ ಗುತ್ತಿಗೆದಾರರಿಗೆ ಕೆಲಸ ದೊರೆಯಲು ಸಾಧ್ಯವಾಗುತ್ತದೆ. ಕಾಮಗಾರಿಗಳನ್ನು ಒಂದೇ ಪ್ಯಾಕೇಜ್ ಮಾಡುವುದರಿಂದ ನಿಯಮಾನುಸಾರ ನಡೆಯಬೇಕಾದ ರಾಂಡಮೈಸೇಷನ್ ಪ್ರಕ್ರಿಯೆಗೆ ಅಡಚಣೆಯಾಗಲಿದ್ದು, ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡದ  ಗುತ್ತಿಗೆದಾರರಿಗೂ ದೊರೆಯಬೇಕಾದ ಅವಕಾಶಗಳು ಕೈತಪ್ಪುತ್ತಿವೆ.
ಹೊರಗಿನಿಂದ ಬರುವ ದೊಡ್ಡ ಗುತ್ತಿಗೆದಾರರು ತಮ್ಮದೇ ಆದ ಲೇಬರ್ ಹಾಗೂ ಮೇಸ್ತ್ರಿಗಳನ್ನು ಕರೆತರುತ್ತಾರೆ. ಇದರಿಂದ ಸ್ಥಳೀಯ ಸೆಂಟ್ರಿಂಗ್, ಗೌಂಡಿ ಮೇಸ್ತ್ರಿಗಳು ಹಾಗೂ ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
​ಸ್ಥಳೀಯ ಸಣ್ಣ ಗುತ್ತಿಗೆದಾರರ ಹಿತದೃಷ್ಟಿಯಿಂದ ಪೌರಾಡಳಿತ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ತಕ್ಷಣ  ಈ ಪ್ಯಾಕೇಜ್ ವ್ಯವಸ್ಥೆಯನ್ನು ರದ್ದುಪಡಿಸಿ, ಸಣ್ಣ ಕಾಮಗಾರಿಗಳಾಗಿ ಟೆಂಡರ್ ಕರೆಯಬೇಕು ಎಂದು ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಬು ಮಲ್ಲಾಪುರಕರ, ಮಾರುತಿ ಕಲ್ಲವಡ್ಡರ, ರಾಜು ಜಾಂಗಟಿ, ಮಡಿವಾಳಿ ಒಕ್ಕುಂದ, ಅಬ್ಬಾಸ ಅಲಿ ಕಾಶೀಮನವರ, ಶಿವಯೋಗಿ ದೊಡಮನಿ, ಬಾಬು ಹುಲಮನಿ,ಸುರೇಶ ಜಾಂಗಟಿ ಹಾಗು ಇತರರು ಉಪಸ್ಥಿತರಿದ್ದರು.


Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಟೋಬರ್ 23 ರಂದು ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ"ಸಾಧಕ ಶಿಕ್ಷಕರ ಸಾಧನೆ ಉಳಿದವರಿಗೆ ಪ್ರೇರಣೆಯಾಗಲಿ" : ಉಮೇಶ ಬೆಳಕೂಡಬ್ಯಾಂಕ್ ಅಭಿವೃದ್ಧಿಗೆ ಸಹಕಾರ ಅಗತ್ಯ: ರಾಮಲಿಂಗಯ್ಯಶ್ರೀಸಂಕೇಶ್ವರ: ನವೆಂಬರ್ 1ರೊಳಗೆ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಗಡುವು; ಕನ್ನಡಪರ ಸಂಘಟನೆಗಳ ಎಚ್ಚರಿಕೆ ಕಾರ್ಯನಿರತ ಪತ್ರಕರ್ತರ ಸಂಘದಿಂದ  ಪೌರಕಾರ್ಮಿಕರಿಗೆ ಸನ್ಮಾನ  ಕಾಗವಾಡ ತಾಲೂಕು ಬರಪೀಡಿತ ಘೋಷಣೆ: ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ರೈತರು ಹಾಗೂ ಬಿಜೆಪಿ ಕಾರ್ಯಕರ್ತರುಧನಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯ 7,500 ಮೆಟ್ರಿಕ್ ಟನ್‌ಗೆ ಹೆಚ್ಚಳ: ಮಹಾದೇವಪ್ಪ ಯಾದವಾಡಬೀಳಗಿಯಲ್ಲಿ ವಿಜೃಂಭಣೆಯ ಪೌರಕಾರ್ಮಿಕ ದಿನಾಚರಣೆ: ನೈರ್ಮಲ್ಯ ಸೇವಕರಿಗೆ ಗೌರವ ಸನ್ಮಾನಬಾಗಲಕೋಟೆಯಲ್ಲಿ ಬಲಗೈ ಸಮುದಾಯಗಳ ಒಕ್ಕೂಟದ ಸಭೆ: ಸಮುದಾಯದ ಹಿತಾಸಕ್ತಿಗೆ ಮುಖಂಡರ ಒಕ್ಕೊರಲ ಆಗ್ರಹಒಂದೇ ಪ್ಯಾಕೇಜ್‌ನಲ್ಲಿ ಕಾಮಗಾರಿಗಳ ಟೆಂಡರ್ ಕರೆಯದಂತೆ ಗುತ್ತಿಗೆದಾರರ ಮನವಿ.