Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೈಭವದ ಗ್ರಾಮದೇವತೆ ಜಾತ್ರೆ ವಿಶೇಷ ಕಾರ್ಯಕ್ರಮ

ಗೀಗೀ ಪದಕ್ಕೆ ಚಾಲನೆ * ಭಕ್ತಿಯ ಪರಾಕಾಷ್ಠೆ ಹೆಚ್ಚಿಸಿದ ಭೈಲಾಟ * ವಿಶೇಷ ಅನ್ನಪ್ರಸಾದ

ತಾಳಿಕೋಟೆ,ಜು,೧೮ :  ಪಟ್ಟಣದ ಸಕಲ ಜನರ ಆರಾಧ್ಯ ದೇವತೆ ಶ್ರೀ ಗ್ರಾಮದೇವತೆ(ದ್ಯಾಮವ್ವ)ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರರಂದು ಬೆಳಿಗ್ಗೆ ೯ ಗಂಟೆಗೆ ಗೋಲಭಾವಿಯ ಶ್ರೀ ದುರ್ಗಾದೇವಿ ಗೀಗಿ ಗಾಯನ ಸಂಘ ಮತ್ತು ಕಣದಾಳದ ಶ್ರೀ ಹುಲಿಕಾಂತೇಶ್ವರ ಹರದೇಶಿ ಗೀಗಿ ಕಲಾ ಮೇಳದ ನೇತೃತ್ವದಲ್ಲಿ ಗೀಗಿ ಪದಕ್ಕೆ ಚಾಲನೆ ನೀಡಲಾಯಿತು.
ಗೀಗಿ ಪದದಲ್ಲಿ ತತ್ವಪದಗಳನ್ನು ಜೋಡಿಸುವದರೊಂದಿಗೆ ಶ್ರೀ ದೇವಿಯ ಚರಿತ್ರಾಮೃತವನ್ನು ವಿವರಿಸಲಾಯಿತ್ತಲ್ಲದೇ  ಸಮಯದಲ್ಲಿ ಧರ್ಮಕ್ಕೆ ಕುತ್ತು ಬರುತ್ತದೆಯೋ ಆ ಸಮಯದಲ್ಲಿ ಶ್ರೀ ದೇವಿಯು ಚಾಮುಂಡಿಯ ರೂಪದಲ್ಲಿ ಬಂದು ಧರ್ಮವನ್ನು ರಕ್ಷಣೆ ಮಾಡಿದ್ದರ ಕುರಿತು ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮರ್ಧಸ್ಯ ತದಾತ್ಮಾನಂ ಸೃಜಾಮ್ಯಹಮ್|| ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ | ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೆ ಯುಗೆ || ಎಂಬ ಸಜ್ಜನರನ್ನು ರಕ್ಷಿಸಲು ದುಷ್ಟರನ್ನು ಸಂಹರಸಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ಶ್ರೀದೇವಿಯು ನಾನಾ ಅವತಾರದಲ್ಲಿ ಆಗಮಿಸಿ ತನ್ನ ಭಕ್ತರನ್ನು ಈ ನಾಡನ್ನು ರಕ್ಷಣೆ ಮಾಡುತ್ತಾ ಬಂದಿದ್ದರ ಕುರಿತು ವಿವರಿಸಲಾಯಿತು.
ಭಕ್ತಿಯ ಮಾರ್ಗದತ್ತ ಕೊಂಡೊಯ್ದ ಶ್ರೀ ದೇವಿಯ ಭೈಲಾಟ : ಶ್ರೀ ಗ್ರಾಮದೇವತೆ(ದ್ಯಾಮವ್ವ)ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರರಂದು ಇಡೀ ರಾತ್ರಿ ರಾಜವಾಡೆ ಮೈಧಾನದಲ್ಲಿ ನಡೆದ ಶ್ರೀ ದೇವಿಯ ಭೈಲಾಟದಲ್ಲಿ ಶುಂಭ ನಿಶುಂಭರನ್ನು ಸಂಹಾರದ ಮಾಡಿದ ದೃಶ್ಯದ ಚಿತ್ರಣವು ನೋಡುಗ ಸಾವಿರಾರು ಜನ ಭಕ್ತರನ್ನು ಭಕ್ತಿಯ ಮಾರ್ಗದತ್ತ ಕೊಂಡೊಯಿತ್ತಲ್ಲದೇ ಶ್ರೀ ದೇವಿಯ ಪವಾಡ ಸದೃಶ್ಯಗಳು ಶ್ರೀ ದ್ಯಾಮವ್ವದೇವಿಯು ಚಂಡಿ ಚಾಮುಂಡಿಯಾಗಿ ತನ್ನ ಭಕ್ತರನ್ನು ನಾಡನ್ನು ರಕ್ಷಣೆ ಮಾಡಿದ್ದರ ಬಗ್ಗೆ ದೈತ ಕಥೆ ನೋಡುಗರರಿಗೆ ರೋಮಾಂಚನಗೊಳಿಸಿತು.
   ಶುಂಭ ನಿಶುಂಭ-ರಕ್ತಬೀಜಾಸುರರ ಸಂಹಾರ : ರಕ್ತಬೀಜನು ಮಹಾಶಕ್ತಿಶಾಲಿ ಅಸುರನಾಗಿದ್ದನು. ಬ್ರಹ್ಮದೇವರಿಂದ ಅವನು ಒಂದು ವರವನ್ನು ಪಡೆದಿದ್ದನು ಅವನ ದೇಹದಿಂದ ಬೀಳುವ ಪ್ರತಿಯೊಂದು ರಕ್ತದ ಹನಿಯಿಂದ ಮತ್ತೊಬ್ಬ ರಕ್ತಬೀಜನು ಹುಟ್ಟಬೇಕು. ಆದ್ದರಿಂದ ಯುದ್ಧದಲ್ಲಿ ಅವನನ್ನು ಗಾಯಗೊಳಿಸಿದಷ್ಟೂ ಸಾವಿರಾರು ಹೊಸ ರಕ್ತಬೀಜರು ಹುಟ್ಟುತ್ತಿದ್ದರು.
  ಶ್ರೀ ದೇವಿಯ ಯುದ್ಧ :  ಶುಂಭ-ನಿಶುಂಭರ ವಿರುದ್ಧದ ಯುದ್ಧದಲ್ಲಿ ರಕ್ತಬೀಜನು ದೇವತೆಗಳ ಸೈನ್ಯಕ್ಕೆ ಭಾರಿ ತೊಂದರೆ ನೀಡಿದನು. ದುರ್ಗಾದೇವಿಯು ಅವನೊಂದಿಗೆ ಯುದ್ಧ ಮಾಡಿದಾಗ ಅವನ ರಕ್ತ ನೆಲಕ್ಕೆ ಬೀಳುತ್ತಲೇ ಅನೇಕ ರಕ್ತಬೀಜರು ಹುಟ್ಟತೊಡಗಿದರು. 
ಶ್ರೀ ಕಾಳಿದೇವಿಯ ಅವತಾರ : ಆಗ ಚಂಡಿಕಾ ದೇವಿಯ ಭ್ರೂಮಧ್ಯದಿಂದ ಮಹಾಕಾಳಿ (ಚಾಮುಂಡಿ) ಅವತರಿಸಿದಳು. ದೇವಿಯ ಆದೇಶದಂತೆ ಕಾಳಿದೇವಿಯು ತನ್ನ ವಿಶಾಲ ನಾಲಿಗೆಯನ್ನು ಚಾಚಿ, ರಕ್ತಬೀಜನ ದೇಹದಿಂದ ಹರಿಯುವ ಪ್ರತಿಯೊಂದು ರಕ್ತದ ಹನಿಯನ್ನೂ ನೆಲಕ್ಕೆ ಬೀಳುವ ಮುನ್ನವೇ ಕುಡಿದಳು. ಹೀಗಾಗಿ ಹೊಸ ರಕ್ತಬೀಜರು ಹುಟ್ಟಲು ಅವಕಾಶವೇ ಸಿಗಲಿಲ್ಲ. ನಂತರ ದೇವಿಯು ರಕ್ತಬೀಜನನ್ನು ಸಂಹರಿಸಿದಳು. ಈ ರೂಪಕ ನಾಟಕದಲ್ಲಿ ರಕ್ತಬೀಜಾಸುರನಿಗೆ ಶ್ರೀ ದೇವಿಯ ರೂಪಕ ದಾರಿ ವಧೆ ಮಾಡುವ ಸನ್ನಿವೇಶ ಭಕ್ತರನ್ನು ರೋಮಾಂಚನಗೊಳಿಸಿತ್ತಲ್ಲದೇ ಶ್ರೀ ದೇವಿಯ ಮೇಲೆ ಭಕ್ತಿಯ ಪರಾಕಾಷ್ಠೆ ಹೆಚ್ಚಿಸುವಂತೆ ಮಾಡಿತು.
೫ ದಿನ ವಿವಿಧ ನಮೂನೆಯ ನಿತ್ಯ ಪ್ರಸಾದ : ಶ್ರೀ ಗ್ರಾಮದೇವತೆ(ದ್ಯಾಮವ್ವ)ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ರಾಜವಾಡೆಯಲ್ಲಿ ಜಾತ್ರಾ ಕಮಿಟಿಯವತಿಯಿಂದ ಈ ಭಾರಿಯು ನಿತ್ಯ ವಿವಿಧ ಭಗೆಯ ಪ್ರಸಾದವನ್ನು ಆಯೋಜಿಸಿ ಭಕ್ತವೃಂದದವರ ಮನತಣಿಸಲು ಮುಂದಾಗಿದೆ ಶುಕ್ರವಾರರಂದು ರೊಟ್ಟಿ ಸಾಂಭರ್, ಪದನಿಕಾಯಿ ಪಲ್ಲೆ, ಬೋಂಧೆ ನೀಡಿದ್ದರೆ ಶನಿವಾರರಂದು ಸಜ್ಜಕ ಅನ್ನ ಸಾಂಭರ್ ಬದನಿಕಾಯಿ ಪಲ್ಲೆ ಉಣಬಡಿಸುವಂತಹ ಕಾರ್ಯ ಮಾಡಲಾಗಿದೆ ಇನ್ನೂಳಿದ ಮೂರುದಿನಗಳ ಕಾಲ ವಿಶೇಷ ಪ್ರಸಾದದ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮರ್ಧಸ್ಯ ತದಾತ್ಮಾನಂ ಸೃಜಾಮ್ಯಹಮ್|| ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ | ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೆ ಯುಗೆ || ಈ ಶ್ಲೋಕವು ಧರ್ಮದ ವಿಜಯ ಮತ್ತು ಅಧರ್ಮದ ನಾಶವು ನಿಶ್ಚಿತ ಎಂಬ ವಿಸ್ವಾಸವನ್ನು ನೀಡುತ್ತದೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಲ್ಯ ವಿವಾಹ ಸಾಮಾಜಿಕ ಅನಿಷ, ಎಲ್ಲಾ ಇಲಾಖೆ ಸಮುದಾಯದ ಸಹಕಾರದಿಂದ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಿಸಿಬೇಕಾಗಿದೆ: ಮಂಜುನಾಥ ನಾಯಕಶ್ರೀ ಗ್ರಾಮದೇವತೆ(ದ್ಯಾಮವ್ವ)ದೇವಿಯ ಜಾತ್ರೋತ್ಸವಸಂಗೀತದ ಮೂಲಕ ಸಮಾಜವನ್ನು ತಿದ್ದುವ ಕೆಲಸವಾಗಬೇಕು: ಆರ್ ಆರ್ ಕುಲಕರ್ಣಿ ಜುಲೈ ೨೦ರಂದು ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ  ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮ ಶಿವಯೋಗದ ಮಹಾಪರ್ವತ ಶ್ರೀಮುರುಘೇಂದ್ರ ಶಿವಯೋಗಿಗಳು : ಡಾ.ಶಂಭುಲಿಂಗ ಹೆಗಡಾಳ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ನಿಯೋಗ ಮನವರಿಕೆ: 93 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಒಪ್ಪಿದ KHB ಅಧಿಕಾರಿಗಳು ಅಛಲ ನಿರ್ಧಾರ ದೊಂದಿಗೆ ಅಧ್ಯಯನ ಮಾಡಿದರೆ ಜೀವನದಲ್ಲಿ ಯಶಸ್ಸು : ಸಾಲಿಮಠಮಾದ್ಯಮರತ್ನ ರಾಜ್ಯ ಪ್ರಶಸ್ತಿಗೆ ಘೋರ್ಪಡೆ ಆಯ್ಕೆ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಮನವಿ