ಬಳ್ಳಾರಿ. ಸೆ. 09:: 12ನೇ ಶತಮಾನವನ್ನು ವಚನಕಾರರ ಸುವರ್ಣ ಯುಗ ಎಂದು ಕರೆಯುತ್ತಾರೆ ವಚನಕಾರರು ಸಮಾಜದಲ್ಲಿ ಮಾನವೀಯತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯ ಇಂತಹ ಮೌಲ್ಯಗಳನ್ನು ಹೆಚ್ಚಿಸುವ ಕೆಲಸವನ್ನು ವಚನಕಾರರು ತಮ್ಮ ವಚನಗಳ ಮೂಲಕ ಸಾಬೀತುಪಡಿಸಿದ್ದಾರೆ.ಜಾತಿ, ವರ್ಣ, ಲಿಂಗ, ಸಾಮಾಜಿಕ ಸ್ಥಾನಮಾನಗಳ ಆಧಾರದ ಮೇಲೆ ಮನುಷ್ಯರನ್ನು ವಿಭಜಿಸಬಾರದು ಎಂಬ ಸಂದೇಶವನ್ನು ನೀಡಿ ನಡತೆ ಮತ್ತು ಕಾಯಕ ವ್ಯಕ್ತಿಯ ಮೌಲ್ಯವನ್ನು ಗುರುತಿಸುತ್ತದೆ ಕಾಯ -ವಾಚಾ - ಮನಸ ಪರಿಶುದ್ಧವಾಗಿ ದುಡಿಯುವುದೇ ಪ್ರಾಮಾಣಿಕ ಕಾಯಕ ಎಂದು ತಮ್ಮ ನಿಫ್ಟಿ ರುದ್ರಪ್ಪ ತಿಳಿಸಿದರು.
ಅವರು ನಗರದ ನೇತಾಜಿ ನಗರದ ಗಣೇಶ ದೇವಸ್ಥಾನದ ಆವರಣದಲ್ಲಿ ಲಿಂ. ಅಕ್ಕಿ ಪರ್ವತಪ್ಪ ಮತ್ತು ಲಿಂ. ಅಕ್ಕಿ ಈರಮ್ಮ ಕುಡುತಿನಿ ಇವರ ಸ್ಮರಣಾರ್ಥ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ತಾಲೂಕು ಘಟಕವು ಸೋಮವಾರದಂದು ಹಮ್ಮಿಕೊಂಡಿದ್ದ
ದತ್ತಿ ಕಾರ್ಯಕ್ರಮದಲ್ಲಿ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು .
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡರಾದ ಎಲ್ ಮಾರಪ್ಪ ರವರು ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಬಗ್ಗೆ ವಿಶೇಷ ಕಾಳಜಿ ಮತ್ತು ಜವಾಬ್ದಾರಿ ಇರುವ ಸಂಸ್ಥೆ. ಗಡಿ ಭಾಗದಲ್ಲಿ ಕನ್ನಡವನ್ನು ಉಳಿಸುವ ಕೆಲಸವನ್ನು ಮಾಡುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ನಿಷ್ಟಿ ರುದ್ರಪ್ಪ ರವರು ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು
ಗಾಯಕರಾದ ಟಿ ತಿಮ್ಮಪ್ಪ, ರಾಘವೇಂದ್ರ ಗುಡದೂರ್ ವಿಜೇಂದ್ರ ಕ್ಷತ್ರಿಯ, ಗಣೇಶ್ ಅಭಯ್ ಕಶಪ್, ದೊಡ್ಡ ಬಸವ ಗವಾಯಿಗಳು ವಚನ ಗಾಯನ ಮಾಡಿದರು. ತಬಲವಾದ ಕರಾದ ವಿರೂಪಾಕ್ಷಪ್ಪ ಟಿ., ಕೀಪ್ಯಾಡ್ ವಾದಕರಾದ ತಿಪ್ಪೇಸ್ವಾಮಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ದತ್ತಿದಾನಿಗಳಾದ ಅಕ್ಕಿ ಮಲ್ಲಿಕಾರ್ಜುನ ಸರ್ ರವರು ವಚನ ಗಾಯನ ನಡೆಸಿಕೊಟ್ಟ ಎಲ್ಲಾ ಗಣ್ಯಮಾನ್ಯರಿಗೂ ಸತ್ಕರಿಸಿದರು .
ಕಾರ್ಯಕ್ರಮದ ಪ್ರಾರಂಭದಲ್ಲಿ ಟಿ.ತಿಮ್ಮಪ್ಪ ಪ್ರಾರ್ಥನೆಯನ್ನು ನೆರವೇರಿಸಿದರು. ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ನಾಗರೆಡ್ಡಿ ಕೆ.ವಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಶ್ರೀಧರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೋಶಾಧ್ಯಕ್ಷರಾದ ಎಂ. ಶರಣಬಸವ ಕೊನೆಗೆ ವಂದಿಸಿದರು.