Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗದ್ದಲ, ಪರ-ವಿರೋಧ ಘೋಷಣೆ; ಪೊಲೀಸರ ಮಧ್ಯಪ್ರವೇಶ

ಲೆಕ್ಕ ಕೊಡ್ತೀವಿ ಕೂಡಲೇ ಮಠ ಖಾಲಿ ಮಾಡಿ

ದಾವಣಗೆರೆ: 

ಪಂಚಮಸಾಲಿ ಟ್ರಸ್ಟ್ ಮತ್ತು ವಚನಾನಂದ ಸ್ವಾಮೀಜಿ ನಡುವಿನ ಸಂಘರ್ಷ ತೀವ್ರಗೊಂಡಿದ್ದು ಮಠ ವ್ಯವಹಾರಗಳ ಲೆಕ್ಕ ಕೊಡ್ತೀವಿ ಕೂಡಲೇ ಮಠ ಖಾಲಿ ಮಾಡಿ ಎಂದು ಟ್ರಸ್ಟಿನವರು ಶ್ರೀಗಳಿಗೆ ತಾಕೀತು ಮಾಡಿದ್ದರು.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಂಚಮಸಾಲಿ ಟ್ರಸ್ಟಿನವರು, ಏಪ್ರಿಲ್​​ 27ರಂದು ಲೆಕ್ಕಾ ಕೊಡಲು ಸಿದ್ಧರಿದ್ದೇವೆ. ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿನವರು ತಾಕೀತು ಮಾಡಿದ್ದಾರೆ. ಆ ಮೂಲಕ ಹರಿಹರದ ಪಂಚಮಸಾಲಿ ಮಠದ ಆಡಳಿತ ಮಂಡಳಿ (ಟ್ರಸ್ಟ್) ಹಾಗೂ ವಚನಾನಂದ ಸ್ವಾಮೀಜಿ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ.

ಧರ್ಮದರ್ಶಿ ಸಮಿತಿಯ ಮುಖಂಡರು ಸ್ವಾಮೀಜಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಲೆಕ್ಕ ಕೊಡುತ್ತೇವೆ. ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿ ಹೆಚ್​.ಎಸ್.ನಾಗರಾಜ್ ತಾಕೀತು ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ಪಂಚಮಸಾಲಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಪಂಚಮಸಾಲಿ ಟ್ರಸ್ಟಿ ಹೆಚ್​.ಎಸ್.ನಾಗರಾಜ್, ನಮಗೆ ಲೆಕ್ಕ ಕೊಡಿ ಎಂದು ಕೇಳಿದ್ದಾರೆ, ನಾಳೆ ‌ಲೆಕ್ಕ ಕೊಡುತ್ತೇವೆ. ಈಗಾಗಲೇ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ವಚನಾನಂದ ಸ್ವಾಮೀಜಿಗೆ ತಾಕೀತು ಮಾಡಿದರು.

 ಅದರಂತೆ ಹರಿಹರ ಪಂಚಮಸಾಲಿ ಮಠದಲ್ಲಿಂದು ಮಠದ ಟ್ರಸ್ಟಿಗಳು ಲೆಕ್ಕ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಚನಾನಂದ ಸ್ವಾಮೀಜಿ ಹಾಗು ಟ್ರಸ್ಟಿಗಳ ಕಡೆಯ ಎರಡು ಗುಂಪುಗಳ ನಡುವೆ ಮಠದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ.‌

ಲೆಕ್ಕಕೊಡುವ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಟ್ರಸ್ಟಿಗಳು ಮಹಾಂತ ಸ್ವಾಮೀಜಿಯವರ ಗದ್ದುಗೆಗೆ ತೆರಳಿ ಅವರ ಪುತ್ಥಳಿಗೆ ಹೂಮಾಲೆ ಅರ್ಪಿಸಿದರು. ಈ ವೇಳೆ ಟ್ರಸ್ಟಿಗಳ ಕಾರ್ಯಕ್ರಮಕ್ಕೆ ತೆರಳುವಾಗ ಟ್ರಸ್ಟಿಗಳ ವಿರುದ್ಧ ಸ್ವಾಮೀಜಿಯ ಕಡೆಯ ಭಕ್ತರ ಗುಂಪು ಘೋಷಣೆ ಹಾಕಿತು. ಇದನ್ನು ಸಹಿಸಿಕೊಳ್ಳದ ಟ್ರಸ್ಟಿಗಳ ಕಡೆಯ ಗುಂಪು ಕೂಡ ಸ್ವಾಮೀಜಿ ವಿರುದ್ಧ ಘೋಷಣೆ ಕೂಗಿದರು. ಆಗ ಸ್ವಾಮೀಜಿ ಕಡೆಯ ಗುಂಪು ಹಾಗೂ ಟ್ರಸ್ಟಿಗಳ ಕಡೆಯ ಗುಂಪುಗಳ ನಡುವೆ ನೂಕಾಟ ತಳ್ಳಾಟ ಆಯಿತು. ಈ ವೇಳೆ, ವಚನಾನಂದ ಸ್ವಾಮೀಜಿ ಅವರು ಮೌನವಾಗಿ ಕೂತು ನೋಡುತ್ತಿದ್ದರು. ಸ್ವಾಮೀಜಿ ಪರ ಇರುವ ಗುಂಪು ಟ್ರಸ್ಟಿಗಳು ಕಳ್ಳರು ಎಂದು ಘೋಷಣೆ ಕೂಗಿದರೆ, ಟ್ರಸ್ಟಿಗಳ ಕಡೆಯ ಗುಂಪು ಕಳ್ಳ ಸ್ವಾಮೀಜಿ ಎಂದು ಘೋಷಣೆ ಹಾಕಿತು. ಆಗ ಎರಡು ಗುಂಪುಗಳ ಮಧ್ಯೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ಸಂದರ್ಭದಲ್ಲಿ ರಾಣೇಬೆನ್ನೂರು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಸ್ಥಳದಲ್ಲಿದ್ದರು. ಟ್ರಸ್ಟಿಗಳಾದ ಬಿ.ಸಿ. ಉಮಾಪತಿ, ಹೆಚ್.ಎಸ್. ನಾಗರಾಜ್, ಚಂದ್ರಶೇಖರ್ ಪೂಜಾರ್, ಭಾವಿ ಬೆಟ್ಟಪ್ಪ ಇತರರು ಇದ್ದರು. ಈ ವೇಳೆ ಟ್ರಸ್ಟಿಗಳು ಮಾತನಾಡದೆ ಕಾರ್ಯಕ್ರಮದತ್ತ ನಡೆದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ವಿಡಿಯೋ ವೈರಲ್: ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ್ ಅವರು ವಚನಾನಂದ ಸ್ವಾಮೀಜಿ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಿಂಗಾಯತ ಪಂಚಮಸಾಲಿ ಸಂಘದ ಪದಾಧಿಕಾರಿಗಳ ಜೊತೆ ಕುಳಿತು ಮಾತನಾಡಿದ ವಿಡಿಯೋ ಇದಾಗಿದೆ. "ವಚನಾನಂದ ಸ್ವಾಮೀಜಿ ನನಗೆ ಪರಿಚಯ ಇರಲಿಲ್ಲ, ವಚನಾನಂದ ಶ್ರೀಗಳನ್ನು ಕಿಚಡಿ ಕೊಟ್ರೇಶ್ ಪರಿಚಯ ಮಾಡಿಸಿದ. ಅಪ್ಪಾಜಿ ಅಪ್ಪಾಜಿ ಅಂತಾ ಹೇಳಿ ಬಿ.ಸಿ. ಉಮಾಪತಿಗೆ ಮೋಸ ಮಾಡಿದರು" ಎಂದು ಸೋಮನಗೌಡ ಮಾಲಿಪಾಟೀಲ್ ಹೇಳಿರುವುದು ವಿಡಿಯೋದಲ್ಲಿದೆ.

ವಚನಾನಂದ ಶ್ರೀಗಳ ಉಚ್ಚಾಟನೆ ಬಳಿಕ ಎಲ್ಲಿಯೂ ಕಾಣಿಸಿಕೊಳ್ಳದ ಸೋಮನಗೌಡ ಮಾಲಿ ಪಾಟೀಲ್ ಕಳೆದ ದಿನ ದಿಢೀರ್ ಆಗಿ ಮಾಧ್ಯಮಗೋಷ್ಟಿ ನಡೆಸಿ, ಮೂವರು ಟ್ರಸ್ಟಿಗಳನ್ನು ಉಚ್ಚಾಟನೆ ಮಾಡಿದ್ದಾಗಿ ಘೋಷಿಸಿದ್ದರು. ಈ ಬೆನ್ನಲ್ಲೇ ವಿಡಿಯೋ ವೈರಲ್​​ ಆಗಿರುವುದು ಸಂಚಲನ ಮೂಡಿಸಿದೆ.

"ಉಮ್ಮಣ್ಣ (ಉಮಾಪತಿ) ನನ್ನ ತಂದೆ ಇದ್ದಂತೆ. ಅವರೇ ನನಗೆ ಅಧ್ಯಕ್ಷ ಮಾಡಿದ್ದು, ಸ್ವಾಮೀಜಿ ಯಾರೆಂದು ನನಗೆ ಗೊತ್ತಿಲ್ಲ, ಸ್ವಾಮೀಜಿ ನನಗೆ ಪರಿಚಯ ಆಗಿದ್ದೇ ಕಿಚಡಿ ಕೊಟ್ರೇಶ್ ಅವರಿಂದ, ಅ ಸ್ವಾಮೀಜಿಯನ್ನು ಮಾಡಬೇಡಿ ಎಂದಿದ್ದೆ. ನಾನು ವಚನಾನಂದ ಸ್ವಾಮೀಜಿ ಅವರನ್ನು ನಂಬಿದ್ದಿಲ್ಲ, ಸ್ವಾಮೀಜಿ ಅವರಿಂದ ನಾನು ಒಂದು ರೂಪಾಯಿ ಪಡೆದಿಲ್ಲ. ಸ್ವಾಮೀಜಿ ರಾತ್ರಿ ಹೋಗಿ ಉಮ್ಮಣ್ಣ ನೀನೇ ಎಂದು ಕೈ ಮುಗಿದರೆ ಸಾಕು, ಮಾಜಿ ಶಾಸಕ ಶಿವಶಂಕರ ಅವರು ವಿವಾದದ ನಡುವೆ ಎಂಟ್ರಿ ಕೊಡಲು ಹೇಳಿದ್ದೇ ನಾನು" ಎಂದು ವಿಡಿಯೋದಲ್ಲಿ ಮಾಲಿಪಾಟೀಲ್ ಅವರು ಹೇಳಿದ್ದಾರೆ.

ಏನಿದು ಲೆಕ್ಕದ ಲಡಾಯಿ?

ಮಠದ ಆಡಳಿತ ಮಂಡಳಿಯು ಭಕ್ತರ ದೇಣಿಗೆ ಮತ್ತು ಸರ್ಕಾರದ ಅನುದಾನದಲ್ಲಿ ಭಾರಿ ಅವ್ಯವಹಾರ ನಡೆಸಿದೆ ಎಂದು ವಚನಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯವಾಗಿ, ರಾಜ್ಯ ಸರ್ಕಾರದಿಂದ ವಸತಿಗೃಹ, ಹಾಸ್ಟೆಲ್ ಮತ್ತು ಸಮುದಾಯ ಭವನ ನಿರ್ಮಾಣಕ್ಕಾಗಿ ಬಂದಿದ್ದ 10 ಕೋಟಿ ರೂಪಾಯಿ ಅನುದಾನದಲ್ಲಿ ಗೋಲ್‌ಮಾಲ್ ನಡೆದಿದೆ ಎಂಬುದು ಶ್ರೀಗಳ ವಾದ. 2021ರಲ್ಲಿ ಟ್ರಸ್ಟಿಗಳು ಮತ್ತು ಆಡಳಿತಾಧಿಕಾರಿಗಳು ನಕಲಿ ಸಹಿ ಮಾಡಿ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ, ಆದರೆ ಕಟ್ಟಡಗಳೇ ನಿರ್ಮಾಣವಾಗಿಲ್ಲ ಎಂದು ಭಕ್ತರು ದೂರಿದ್ದಾರೆ.

ಟ್ರಸ್ಟಿಗಳು ಹೇಳೋದೇನು?

ಶ್ರೀಗಳ ಆರೋಪಕ್ಕೆ ಪ್ರತಿಯಾಗಿ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು 2008ರಿಂದ 2026ರವರೆಗಿನ ಸಂಪೂರ್ಣ ಲೆಕ್ಕಪತ್ರಗಳ ಬ್ಯಾಗ್ ಹಿಡಿದು ಮಠಕ್ಕೆ ಆಗಮಿಸಿದರು. ‘ನಾವು ಪಾರದರ್ಶಕವಾಗಿದ್ದೇವೆ, ಶ್ರೀಗಳು ತಮ್ಮ ಉಚ್ಚಾಟನೆಯ ವಿಷಯವನ್ನು ದಾರಿ ತಪ್ಪಿಸಲು ಲೆಕ್ಕದ ನಾಟಕವಾಡುತ್ತಿದ್ದಾರೆ. ಈಗ ಲೆಕ್ಕ ನೀಡಿದ್ದೇವೆ, ಶ್ರೀಗಳು ಕೂಡಲೇ ಮಠವನ್ನು ಬಿಟ್ಟು ಹೋಗಲಿ’ ಎಂದು ಗುಡುಗಿದ್ದಾರೆ.

ವಚನಾನಂದ ಸ್ವಾಮೀಜಿ ಹೇಳಿದ್ದೇನು: ''ಸೋಮನಗೌಡ ಮಾಲಿಪಾಟೀಲ್ ಅವರು 1994ರಿಂದ ಈ ಸಂಘದಲ್ಲಿದ್ದಾರೆ. ಅವರನ್ನು ಎಕೆ47 ಎಂದು ಕರೆಯುತ್ತಾರೆ. ಅವರು ಕಟ್ಟಿದ ಸಮಾಜದಲ್ಲಿ ಇವರು ಹೊಕ್ಕಿಕೊಂಡಿದ್ದಾರೆ. ಇವರ ಕೊಡುಗೆ ಏನೂ ಇಲ್ಲ. ನಾನು ಮಾಡಿದೆ ನಾನು ಕಟ್ಟಿದೆ ಎಂಬ ಭ್ರಮೆಯಲ್ಲಿದ್ದರು. ಟ್ರಸ್ಟಿಗಳಿಗೆ ಲೆಕ್ಕ ಕೇಳಿ ಬೆತ್ತದಿಂದ ಬಡಿದಿದ್ದಾರೆ. ಒಬ್ಬ ಧರ್ಮದರ್ಶಿಗೆ ಮಹಾಂತ ಸ್ವಾಮಿಗಳು ಬೆತ್ತದಿಂದ ಹೊಡೆದಿದ್ದು, ಇನ್ನು ಸಿದ್ಧಲಿಂಗ ಸ್ವಾಮೀಜಿ ಅವರಿಗೂ ಇವರು ಕಿರುಕುಳ ಕೊಟ್ಟರು. ಅಂದು ಸಮಾಜ ಜಾಗೃತ ಆಗಿರಲಿಲ್ಲ. ಇಂದು ಅದೇ ಸಮಾಜ ಜಾಗೃತ ಆಗಿದೆ. ಇನ್ನು ನಮ್ಮ ಮಾಲಿಪಾಟೀಲ್ ಅವರು ಟ್ರಸ್ಟಿಗಳನ್ನು ಉಚ್ಚಾಟನೆ ಮಾಡಿದ್ದಾರೆ" ಎಂದು ವಚನಾನಂದ ಸ್ವಾಮೀಜಿ ಎಂದರು.

"ಇಂದು ನಮಗೆ ಖುಷಿ ಕೊಟ್ಟ ದಿನ. ಕಳ್ಳರಾಗಿ ಬಂದು ಪೊಲೀಸರ ನೇತೃತ್ವದಲ್ಲಿ ಲೆಕ್ಕಕೊಟ್ಟು ಹೋಗಲು ಬಂದಿದ್ದಾರೆ. ಇದನ್ನು ಸಮಾಜ ಒಪ್ಪುವುದಿಲ್ಲ. ನಮಗೆ ಕೃಷ್ಣನ ಲೆಕ್ಕ ಬೇಕಾಗಿಲ್ಲ, ರಾಮನ ಲೆಕ್ಕ ಬೇಕಾಗಿದೆ. ಮಠಕ್ಕೆ ದವಸ ಧಾನ್ಯ, ಬಂಗಾರ, ಬೆಳ್ಳಿ ಎಲ್ಲವನ್ನೂ ಕೊಟ್ಟಿದ್ದಾರೆ. ಎಲ್ಲಾ ಲೆಕ್ಕ ಕೊಡಬೇಕು, ತಾವು ಮೊಸರು ತಿಂದು ಮೇಕೆ ಬಾಯಿಗೆ ಒರೆಸುವುದಲ್ಲ. ಕಾವಿ ಎಂಬುದು ಬೆಂಕಿ. ಇದನ್ನು ಎಷ್ಟು ಬೇಕು ಅಷ್ಟೇ ಉಪಯೋಗಿಸಬೇಕು. ಇನ್ನು ಭಕ್ತರು ನಮ್ಮನ್ನು ಕಾಯುತ್ತಿದ್ದಾರೆ. ಪ್ರಧಾನ ಧರ್ಮದರ್ಶಿ ಮಹಾಂತ ಸ್ವಾಮೀಜಿ ಅವರ ಫೋಟೋ ಮನೆಯಲ್ಲಿ ಇಟ್ಟುಕೊಂಡಿಲ್ಲ. ಇವರು ಮಾಡಿರುವ ಅವ್ಯವಹಾರ ಜಗಜ್ಜಾಹೀರಾಗಿದೆ. ಅದಕ್ಕೆ ನಾವು ನಮ್ಮ ಭಕ್ತರು ಲೆಕ್ಕವನ್ನು ಕೇಳುತ್ತಿದ್ದೇವೆ. ಅ ಲೆಕ್ಕ ಪಾರದರ್ಶಕವಾಗಿ ಇರಬೇಕು. 2008ರಿಂದ ಇಲ್ಲಿ ತನಕ ಏನೆಲ್ಲ ಮಠಕ್ಕೆ ಬಂದಿದೆ. ಅದರ ಬಗ್ಗೆ ಲೆಕ್ಕ ಕೊಡಬೇಕು. ಇನ್ನು ಮಹಾಂತ ಸ್ವಾಮೀಜಿ ಅವರಿಗೆ ಇವರು ಎಷ್ಟೆಲ್ಲಾ ಕಿರುಕುಳ ಕೊಟ್ಟಿದ್ದಾರೆ ಎಂದು ಅವರೇ ಡೈರಿಯಲ್ಲಿ ಬರೆದಿದ್ದಾರೆ. ಅವರ ಕಣ್ಣಿನಲ್ಲಿ ರಕ್ತ ತರೆಸಿದ್ದಾರೆ ಇವರು" ಎಂದು ವಚನಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

 ಮಠದ ಆವರಣದಲ್ಲಿ ಹೈಡ್ರಾಮಾ

ಟ್ರಸ್ಟ್ ಸದಸ್ಯರು ಲೆಕ್ಕ ನೀಡಲು ಆಗಮಿಸುತ್ತಿದ್ದಂತೆಯೇ ವಚನಾನಂದ ಶ್ರೀಗಳ ಬೆಂಬಲಿಗರು ಮತ್ತು ಟ್ರಸ್ಟಿಗಳ ಬೆಂಬಲಿಗರ ನಡುವೆ ಘೋಷಣೆಗಳ ಯುದ್ಧ ನಡೆಯಿತು. ಉಭಯ ಗುಂಪುಗಳು ಮುಖಾಮುಖಿಯಾಗಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ‘ನಾನು ಮಠವನ್ನು ಬಿಟ್ಟು ಹೋಗುವುದಿಲ್ಲ, ಇಲ್ಲಿ ನಡೆದಿರುವ ಲೂಟಿಯ ತನಿಖೆಯಾಗಲಿ’ ಎಂದು ವಚನಾನಂದ ಶ್ರೀಗಳು ಪಟ್ಟು ಹಿಡಿದು ಕುಳಿತಿದ್ದಾರೆ.

 

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST