ಮೂಡಲಗಿ : ಶ್ರೀ ಶಿವಭೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ., ಮೂಡಲಗಿ ಇದರ ೩೧ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಸೋಮವಾರ, ದಿನಾಂಕ ೨೧ ರಂದು ಮುಂಜಾನೆ ೧೧:೦೦ ಗಂಟೆಗೆ ಗುಡ್ಲಮಡ್ಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜರುಗಲಿದೆ. ಸಭೆಯ ಅಧ್ಯಕ್ಷತೆಯನ್ನು ಶ್ರೀ ಪುಲಕೇಶ್.ಆರ್ ಸೋನವಾಲ್ಕರ್ ಅವರು ವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವೆಂಕಟೇಶ್ ಬಾಲರಡ್ಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.