LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಈದ್‌ಮಿಲಾದ್ ಆಚರಣೆಯಲ್ಲಿ  ಸಾವಿರಾರು ಮಂದಿ ಭಾಗಿ; ಶಾಂತಿಯುತವಾಗಿ ನಡೆದ ಭವ್ಯ ರ‍್ಯಾಲಿ

ಬಳ್ಳಾರಿ. ಆ. 27:  ನಗರದ ಕೌಲ್‌ಬಜಾರ್ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಈದ್‌ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಲಾಯಿತು.
ಈದ್‌ಮಿಲಾದ್ ಅಂಗವಾಗಿ ಕುಣಿಟಾನಿ ಮಸೀದಿಯಿಂದ ದಿವಾನೆ ಮಸ್ತಾನ್ ದರ್ಗಾವರೆಗೆ ಭವ್ಯ ರ‍್ಯಾಲಿ ನಡೆಯಿತು. ರ‍್ಯಾಲಿಯಲ್ಲಿ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಮತ್ತು  ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ, ನಾತ್ ಶರೀಫ್ ಪಠಿಸುತ್ತಾ ಪ್ರವಾದಿ ಮಹಮ್ಮದ್ (ಸ) ಅವರ ಮೇಲಿನ ಭಕ್ತಿ ಹಾಗೂ ಗೌರವವನ್ನು ವ್ಯಕ್ತಪಡಿಸಿದರು.
ರ‍್ಯಾಲಿ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಹಾಗೂ ಭಾಗವಹಿಸಿದ್ದವರಿಗೆ ಊಟ, ಫಲಹಾರ ಮತ್ತು ಜ್ಯೂಸ್ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆಡೆ ಜನರು ರ‍್ಯಾಲಿಯನ್ನು ವೀಕ್ಷಿಸಿ, ಪರಸ್ಪರ ಈದ್‌ಮಿಲಾದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಸಮುದಾಯದ ಮುಖಂಡರು, ಯುವಕರು, ಹಿರಿಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡು ಶಾಂತಿ, ಸೌಹಾರ್ದತೆ, ಸಹಬಾಳ್ವೆ ಹಾಗೂ ಮಾನವೀಯತೆಯ ಸಂದೇಶದೊಂದಿಗೆ ಹಬ್ಬವನ್ನು ಆಚರಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿತ್ತು. ರ‍್ಯಾಲಿ ಸಾಗಿದ ಪ್ರಮುಖ ಮಾರ್ಗಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಸಂಚಾರ ಮತ್ತು ಭದ್ರತೆಯ ಮೇಲೆ ನಿಗಾ ವಹಿಸಲಾಗಿತ್ತು. ಪೊಲೀಸರ ಮುನ್ನೆಚ್ಚರಿಕೆ ಕ್ರಮಗಳಿಂದ ಭವ್ಯ ರ‍್ಯಾಲಿಯು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌-ನ ‘ನಾರಿ ನಿವೇಶ್‌ ಯಾತ್ರಾ’ಮಹಾಲಿಂಗಪುರದಲ್ಲಿ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನೂತನ ಶಾಖೆಯ ಉದ್ಘಾಟನೆ ದಕ್ಷಿಣ ಭಾರತದಲ್ಲೇ ಮೊದಲ 24 ಗಂಟೆ   ಗ್ರಾಹಕರಿಗೆ ಆಟೋವಾಲ್ಟ್ ಲಾಕರ್ ಸೇವೆ .ಮತ್ತು    ಶ್ರೇ:. 16 ಡಿವಿಡೆಂಡ್ ಘೋಷಣೆ - ದೆಹಲಿಯ ೨೦,೦೦೦ ಬಾಲಕಿಯರಿಗೆ ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್: ಉನ್ನತ ಶಿಕ್ಷಣಕ್ಕೆ ವರ್ಷಕ್ಕೆ ?೩೦,೦೦೦ ನೆರವುಮಲಪ್ರಭಾ ಸಕ್ಕರೆ ಕಾರ್ಖಾನೆ ಅವ್ಯವಹಾರ: ವಿಚಾರಣಾ ವರದಿ ಜಾರಿಗೆ ಭೀರಪ್ಪ ದೇಶನೂರ ಆಗ್ರಹ ವಿದ್ಯಾರ್ಥಿ ಹಂತ ಭವಿಷ್ಯದ ಭದ್ರ ಬುನಾದಿ: ಕಾಲೇಜಿನಲ್ಲಿ ಅಶೋಕ ಪಟ್ಟಣ ಹೇಳಿಕೆರಾಮದುರ್ಗದಲ್ಲಿ ವಿಜೃಂಭಿಸಿದ ಶಬರಿ ಉತ್ಸವ: ಜಾನಪದ ಕಲೆ ಉಳಿಸುವಂತೆ ಯುವಜನತೆಗೆ ಕರೆ1501ನೇ ಪ್ರವಾದಿ ಹಝರತ್ ರ್  ಪ್ರಾರ್ಥನಾ ಕಾರ್ಯ ಕ್ರಮ ದಲ್ಲಿ  ಶಾಸಕರ ಪುತ್ರ  ಹೆಚ್. ಜಿ. ಗುರುದತ್ತ ಭಾಗಿಬ್ "ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರಲ್ಲೂ ಇರಲಿ"ತಾಳಿಕೋಟೆ ತಾಲೂಕಿನ ಮೇಲೈಶ್ವರ ಗ್ರಾಮದಲ್ಲಿ ೨೦ ಎಕರೆ ಹತ್ತಿ ಹೊಲ ೧೦ ಗಂಟೆಗಳಲ್ಲಿ ಹರಗಿ ಸಾಧನೆಗೈದ ಜೊಡೆತ್ತುಗಳು