LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಮಲಪ್ರಭಾ ಸಕ್ಕರೆ ಕಾರ್ಖಾನೆ ಅವ್ಯವಹಾರ: ವಿಚಾರಣಾ ವರದಿ ಜಾರಿಗೆ ಭೀರಪ್ಪ ದೇಶನೂರ ಆಗ್ರಹ

 

ಚನ್ನಮ್ಮನ ಕಿತ್ತೂರು: ತಾಲೂಕಿನ ಎಂ.ಕೆ. ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿವೆ ಎನ್ನಲಾದ ಅವ್ಯವಹಾರ ಹಾಗೂ ಹಣದ ದುರುಪಯೋಗದ ಕುರಿತು ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವಿಚಾರಣಾ ವರದಿಯ ಅನುಷ್ಠಾನದ ಬಗ್ಗೆ ಆಡಳಿತ ಮಂಡಳಿ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ರಾಜ್ಯಾಧ್ಯಕ್ಷ ಭೀರಪ್ಪ ದೇಶನೂರ ಆಗ್ರಹಿಸಿದ್ದಾರೆ.
ಕಾರ್ಖಾನೆಯಲ್ಲಿ ನಡೆದಿವೆ ಎನ್ನಲಾದ ಅವ್ಯವಹಾರ ಹಾಗೂ ಹಣದ ದುರುಪಯೋಗದ ಕುರಿತು ತಾವು ಸೇರಿದಂತೆ ಇತರರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸರ್ಕಾರವು ಸಹಕಾರಿ ಇಲಾಖೆಯ ನಿವೃತ್ತ ಅಪರ ನಿಬಂಧಕ ಎಸ್.ಎಂ. ಕಲೂತಿ ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಸಿ. ಇಂಗಳಗಿ ಅವರನ್ನು ವಿಚಾರಣಾಧಿಕಾರಿಗಳಾಗಿ ನೇಮಿಸಿತ್ತು. ಇಬ್ಬರು ಅಧಿಕಾರಿಗಳು ಒಂದು ತಿಂಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿ, ಡಿ. ೮, ೨೦೨೫ರಂದು ಪ್ರಕರಣ ಸಂಖ್ಯೆ ಎಸ್.ಎಂ.ಕೆ./ಎಸ್.ಸಿ.ಐ/೧೨/೨೦೨೫ರ ಅನ್ವಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ದೇಶನೂರ ತಿಳಿಸಿದ್ದಾರೆ.
ವಿಚಾರಣಾ ವರದಿಯಲ್ಲಿ ಕಾರ್ಖಾನೆಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಆಡಳಿತ ಮಂಡಳಿಯ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹೆಸರುಗಳನ್ನು ಉಲ್ಲೇಖಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ ವರದಿಯಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ವಿರುದ್ಧ ಪ್ರಸಕ್ತ ಆಡಳಿತ ಮಂಡಳಿ ಈವರೆಗೆ ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಸರ್ಕಾರದಿಂದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಯಾವುದೇ ಸೂಚನೆ ಬಂದಿದ್ದರೆ, ಅದರ ಅನುಷ್ಠಾನದ ಸ್ಥಿತಿಗತಿಯನ್ನೂ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾರ್ಖಾನೆಯ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಬೇಕು. ರೈತರು ಹಾಗೂ ಷೇರುದಾರರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಆರೋಪಗಳ ಕುರಿತು ಸೂಕ್ತ ಕ್ರಮ ಕೈಗೊಂಡು, ವಿಚಾರಣಾ ವರದಿಯ ಮುಂದಿನ ಪ್ರಕ್ರಿಯೆಯ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ದೇಶನೂರ ಆಗ್ರಹಿಸಿದ್ದಾರೆ.
ಈ ಕುರಿತು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಅವರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ತಿಲಗರ, ಬಸವರಾಜ ಮೋಖಾಶಿ, ಬಸನಗೌಡ ಪಾಟೀಲ, ರುದ್ರಪ್ಪ ಕೊಡ್ಲಿ, ಸುರೇಶ ಕರವಿನಕೊಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌-ನ ‘ನಾರಿ ನಿವೇಶ್‌ ಯಾತ್ರಾ’ಮಹಾಲಿಂಗಪುರದಲ್ಲಿ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನೂತನ ಶಾಖೆಯ ಉದ್ಘಾಟನೆ ದಕ್ಷಿಣ ಭಾರತದಲ್ಲೇ ಮೊದಲ 24 ಗಂಟೆ   ಗ್ರಾಹಕರಿಗೆ ಆಟೋವಾಲ್ಟ್ ಲಾಕರ್ ಸೇವೆ .ಮತ್ತು    ಶ್ರೇ:. 16 ಡಿವಿಡೆಂಡ್ ಘೋಷಣೆ - ದೆಹಲಿಯ ೨೦,೦೦೦ ಬಾಲಕಿಯರಿಗೆ ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್: ಉನ್ನತ ಶಿಕ್ಷಣಕ್ಕೆ ವರ್ಷಕ್ಕೆ ?೩೦,೦೦೦ ನೆರವುಮಲಪ್ರಭಾ ಸಕ್ಕರೆ ಕಾರ್ಖಾನೆ ಅವ್ಯವಹಾರ: ವಿಚಾರಣಾ ವರದಿ ಜಾರಿಗೆ ಭೀರಪ್ಪ ದೇಶನೂರ ಆಗ್ರಹ ವಿದ್ಯಾರ್ಥಿ ಹಂತ ಭವಿಷ್ಯದ ಭದ್ರ ಬುನಾದಿ: ಕಾಲೇಜಿನಲ್ಲಿ ಅಶೋಕ ಪಟ್ಟಣ ಹೇಳಿಕೆರಾಮದುರ್ಗದಲ್ಲಿ ವಿಜೃಂಭಿಸಿದ ಶಬರಿ ಉತ್ಸವ: ಜಾನಪದ ಕಲೆ ಉಳಿಸುವಂತೆ ಯುವಜನತೆಗೆ ಕರೆ1501ನೇ ಪ್ರವಾದಿ ಹಝರತ್ ರ್  ಪ್ರಾರ್ಥನಾ ಕಾರ್ಯ ಕ್ರಮ ದಲ್ಲಿ  ಶಾಸಕರ ಪುತ್ರ  ಹೆಚ್. ಜಿ. ಗುರುದತ್ತ ಭಾಗಿಬ್ "ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರಲ್ಲೂ ಇರಲಿ"ತಾಳಿಕೋಟೆ ತಾಲೂಕಿನ ಮೇಲೈಶ್ವರ ಗ್ರಾಮದಲ್ಲಿ ೨೦ ಎಕರೆ ಹತ್ತಿ ಹೊಲ ೧೦ ಗಂಟೆಗಳಲ್ಲಿ ಹರಗಿ ಸಾಧನೆಗೈದ ಜೊಡೆತ್ತುಗಳು