LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌-ನ ‘ನಾರಿ ನಿವೇಶ್‌ ಯಾತ್ರಾ’

ಬೆಳಗಾವಿ, ಆಗಸ್ಟ್ 27, 2026: ಹೂಡಿಕೆದಾರರಲ್ಲಿ ಹಣಕಾಸು ಸಾಕ್ಷರತೆ  ಹಾಗೂ ಹೂಡಿಕೆ ಬಗ್ಗೆ ತಿಳಿವಳಿಕೆ ಮೂಡಿಸುವ ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌ನ  ವಿನೂತನ  ರಾಷ್ಟ್ರವ್ಯಾಪಿ ಪ್ರಚಾರ ಅಭಿಯಾನ ‘ನಾರಿ ನಿವೇಶ್ ಯಾತ್ರಾ’ ಬೆಳಗಾವಿ ಹಂತವನ್ನು ಪೂರ್ಣಗೊಳಿಸಿದೆ.

ಜೂನ್ 26ರಂದು ಚೆನ್ನೈನಿಂದ ಈ ಯಾತ್ರಾ  ಆರಂಭಗೊಂಡಿತ್ತು.

 ಈ ಕಾರ್ಯಕ್ರಮವು ನಗರದಲ್ಲಿ ಎಲ್ಲ ಭಾಗಗಳಲ್ಲಿನ ನಾಗರಿಕರನ್ನು ಸಂಪರ್ಕಿಸಿ, ಮಾಹಿತಿಪೂರ್ಣ ಹೂಡಿಕೆ, ದೀರ್ಘಾವಧಿಯ ಹಣಕಾಸಿನ ಯೋಜನೆಗಳು ಮತ್ತು ಹಣಕಾಸು ಸಂಬಂಧಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ  ಪಾಲ್ಗೊಳ್ಳುವುದರ ಪ್ರಯೋಜನಗಳ ಬಗ್ಗೆ ಗಮನ ನೀಡಲು ಉತ್ತೇಜನ ನೀಡಿತು.

ಕುಟುಂಬಗಳ ಮಟ್ಟದಲ್ಲಿ ಹಣಕಾಸಿನ ತೀರ್ಮಾನಗಳಲ್ಲಿ ಹಾಗೂ ಸಂಪತ್ತು ಸೃಷ್ಟಿಯಲ್ಲಿ  ಮಹಿಳೆಯರು ಮಹತ್ವದ ಪಾತ್ರ ವಹಿಸುತ್ತಿರುವುದು ಹೆಚ್ಚುತ್ತಿರುವುದನ್ನು ಗುರುತಿಸಿರುವ ನಾರಿ ನಿವೇಶ್‌ ಯಾತ್ರಾ’ ಅಭಿಯಾನವು - ಹೂಡಿಕೆದಾರರ ಹಣಕಾಸು ಸಾಕ್ಷರತೆ ಕಾರ್ಯಕ್ರಮವನ್ನು ದೇಶದಾದ್ಯಂತ ನೇರವಾಗಿ ಸಮುದಾಯಗಳ ಬಳಿ ಕೊಂಡೊಯ್ಯುವ ಉದ್ದೇಶ ಹೊಂದಿದೆ. ಆರು ತಿಂಗಳ ಅವಧಿಯ ಹಾಗೂ ಬಹಳ ವ್ಯಾಪಕವಾದ ಸಂಪರ್ಕ ಕಾರ್ಯಕ್ರಮಗಳ ಮೂಲಕ ಗುರಿ ಸಾಧಿಸುವುದು ಈ ಯಾತ್ರೆಯ  ಉದ್ದೇಶವಾಗಿದೆ.

ಅಭಿಯಾನದ ಭಾಗವಾಗಿ ಎರಡು ವಾಹನಗಳು ದೇಶದಾದ್ಯಂತ ಎರಡು ಭಿನ್ನ ದಿಕ್ಕುಗಳಲ್ಲಿ ಸಂಚರಿಸುತ್ತಿವೆ. ಅವು ಬೇರೆ ಬೇರೆ ನಗರಗಳು ಹಾಗೂ ಪಟ್ಟಣಗಳಿಗೆ ಭೇಟಿ ನೀಡುತ್ತಿವೆ. ಭೇಟಿ ನೀಡುವ ಸ್ಥಳಗಳಲ್ಲಿ ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌ ಸಮುದಾಯಗಳ ಜೊತೆ ಸಂವಹನ ಸಂಪರ್ಕ, ಸಮಾಲೋಚನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಬೀದಿ ನಾಟಕ ಮತ್ತು ಸಂವಾದ ರೂಪದ ಹೂಡಿಕೆದಾರರ ಜಾಗೃತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಇವು ಹಣಕಾಸಿನ ವಿಚಾರಗಳನ್ನು ಸರಳಗೊಳಿಸಿ ಮನವರಿಕೆ ಮಾಡಿಕೊಡುತ್ತವೆ. ಹೂಡಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಚರ್ಚೆ  ನಡೆಯಲು ಉತ್ತೇಜನ ನೀಡುತ್ತಿವೆ.

ಬೆಳಗಾವಿಯ ಹಂತದಲ್ಲಿ ‘ನಾರಿ ನಿವೇಶ್ ಯಾತ್ರೆ’ ಸ್ಥಳೀಯ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಿ, ವಿವಿಧ ಪ್ರಮುಖ ಸ್ಥಳಗಳಲ್ಲಿ ಹೂಡಿಕೆ ಮತ್ತು ಹಣಕಾಸು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿತು. ಈ ಪ್ರಚಾರ ಪಯಣದಡಿ ಕಣಬರ್ಗಿ , ಕಣಬರ್ಗಿ ಮಾರುಕಟ್ಟೆ, ಬೆಳಗಾವಿ ಎಪಿಎಂಸಿ ಮಾರುಕಟ್ಟೆ, ತಿಳಕವಾಡಿ ಮಾರುಕಟ್ಟೆ, ಶಹಾಪುರ ಮಾರುಕಟ್ಟೆ, ಆಂಗೋಳ ಮಾರುಕಟ್ಟೆ ಮತ್ತು ಖಡೆ ಬಜಾರ್   ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಲಾಯಿತು

ಹಣಕಾಸಿನ ಯೋಜನೆಗಳು, ಶಿಸ್ತುಬದ್ಧ  ಹೂಡಿಕೆ  ಮತ್ತು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವುದರ ಕುರಿತು ನಗರದ ಮಹಿಳೆಯರ ಜೊತೆ ನೇರವಾಗಿ ಮಾತುಕತೆ ನಡೆಸಲಾಯಿತು.

ತಳಮಟ್ಟದಲ್ಲಿ ಮಹಿಳೆಯರ ಜೊತೆ ನೇರವಾಗಿ ಮಾತುಕತೆಯಲ್ಲಿ ತೊಡಗುವುದು ಈ ನಾರಿ ನಿವೇಶ್‌ ಯಾತ್ರಾ’ ಪ್ರಚಾರ ಅಭಿಯಾನದ ಬಹಳ ಮುಖ್ಯವಾದ ಸಂಗತಿಯಾಗಿದೆ. ಅಭಿಯಾನದ ಉದ್ದಕ್ಕೂ ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌ ಮಹಿಳಾ ಸ್ವಸಹಾಯ ಸಂಘಗಳ ಜೊತೆ ದೇಶದಾದ್ಯಂತ ಒಟ್ಟು 60 ಕಾರ್ಯಕ್ರಮಗಳನ್ನು ನಡೆಸಲಿದೆ. ಹಣಕಾಸಿನ ಯೋಜನೆಗಳು, ಗುರಿ ಆಧಾರಿತ ಹೂಡಿಕೆ, ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿ ಮತ್ತು ಶಿಸ್ತುಬದ್ಧವಾದ ಹೂಡಿಕೆ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದರ ಸುತ್ತ ಚರ್ಚೆಗೆ ವೇದಿಕೆ ಸೃಷ್ಟಿಸಲಿದೆ.

ಈ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿರುವ  ಎಚ್‌ಡಿಎಫ್‌ಸಿ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ   ನವನೀತ್‌ ಮುನೋತ್‌ ಅವರು, ಕುಟುಂಬಗಳ ಮಟ್ಟದಲ್ಲಿ ದೇಶದ ಎಲ್ಲೆಡೆ ಮಹಿಳೆಯರೇ ಅತ್ಯಂತ ಶಿಸ್ತುಬದ್ಧವಾದ ಉಳಿತಾಯದ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಹೀಗಿದ್ದರೂ ಅವರಲ್ಲಿ ಹಲವರ ಪಾಲಿಗೆ ವ್ಯವಸ್ಥಿತವಾದ ಹೂಡಿಕೆಯು ಇಂದಿಗೂ ಕೈಗೆಟುಕಿಲ್ಲ.   ವೈಯಕ್ತಿಕ ಹಣಕಾಸಿನ ಕುರಿತು ಸಮರ್ಪಕ ಚರ್ಚೆ / ಸಂವಾದವೇ ನಡೆದಿಲ್ಲ. ನಾರಿ ನಿವೇಶ್‌ ಯಾತ್ರಾ ಈ ಬಗೆಯ ಮಾತುಕತೆಗಳ ಸುತ್ತ ಗಮನ ನೀಡುತ್ತದೆ. ಬೀದಿ ನಾಟಕಗಳು, ಸಮುದಾಯ ಕೇಂದ್ರಿತ ಕಾರ್ಯಾಗಾರಗಳು ಮತ್ತು ಸ್ವಸಹಾಯ ಸಂಘಗಳ ಜೊತೆ ನೇರವಾದ ಸಂವಾದದ ಮೂಲಕ ನಾವು ಈ ಚರ್ಚೆಯನ್ನು ಮಹಿಳೆಯರ ಬಳಿ ನೇರವಾಗಿ ತಲುಪಿಸುವ ಉದ್ದೇಶ ಹೊಂದಿದ್ದೇವೆ. ಹೂಡಿಕೆಯು ಬಹಳ ದೂರದ ಹಾಗೂ ಬಹಳ ಸಂಕೀರ್ಣವಾದ ಕೆಲಸ ಅಲ್ಲ, ಅದು ತಮ್ಮ ಮನಸ್ಸಿನಲ್ಲಿ ಅದಾಗಲೇ ಇರುವ ಹಣಕಾಸಿನ ಗುರಿಗಳನ್ನು ತಲುಪಲು ನೆರವಾಗುವ ಅಸ್ತ್ರ ಎಂಬುದನ್ನು ಮಹಿಳೆಯರಿಗೆ ಹೇಳುವ ಉದ್ದೇಶ ಹೊಂದಿದ್ದೇವೆ” ಎಂದು ಹೇಳಿದ್ದಾರೆ.

ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌ನ ಹೂಡಿಕೆದಾರರ ಶಿಕ್ಷಣ ಕಾರ್ಯಕ್ರಮವಾಗಿರುವ  ಭರಣಿ ಸೆ ಆಜಾದಿ ಭಾಗವಾಗಿ ನಾರಿ ನಿವೇಶ್‌ ಯಾತ್ರಾ ಅಭಿಯಾನ ಆರಂಭಿಸಲಾಗಿದೆ.

ಮಹಿಳೆಯರು ಸಾಮಾನ್ಯವಾಗಿ ಅಡುಗೆಮನೆಯ ಪಾತ್ರೆಯ ಒಳಗೆ (ಭರಣಿ) ಹಣವನ್ನು ಮರೆಮಾಡಿ ಉಳಿಸುತ್ತಾರೆ .   ಹಣವನ್ನು ಕೇವಲ ಜಾಡಿಯಲ್ಲಿ ಇಡುವುದನ್ನು ಬಿಟ್ಟು ಅದನ್ನು ವ್ಯವಸ್ಥಿತ ಹೂಡಿಕೆ ಯೋಜನೆಗಳ  (ಎಸ್‌ಐಪಿಮೂಲಕ ಸಾಂಪ್ರದಾಯಿಕ ಉಳಿತಾಯದಿಂದ ಆರ್ಥಿಕ ಸ್ವಾತಂತ್ರ್ಯದತ್ತ (ಭರಣಿ ಸೆ ಆಜಾದಿ) ಸಾಗುವುದಕ್ಕೆ  ಉತ್ತೇಜಿಸುವ ಉಪಕ್ರಮ ಇದಾಗಿದೆ.

ಈ ಕಾರ್ಯಕ್ರಮವು ಸಾಂಪ್ರದಾಯಿಕ ಉಳಿತಾಯ ಪ್ರವೃತ್ತಿಯ ಆಚೆಗೂ ಗಮನ ಹರಿಸಿ, ಹಣಕಾಸಿನ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಮಾಹಿತಿದಾಯಕ ಹೂಡಿಕೆಯ ಅನುಕೂಲಗಳನ್ನು ಗಮನಿಸುವಂತೆ ವ್ಯಕ್ತಿಗಳನ್ನು ಉತ್ತೇಜಿಸುತ್ತದೆ.

ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌ - ನಾರಿ ನಿವೇಶ್‌ ಯಾತ್ರಾ ಮೂಲಕ ಹಣಕಾಸಿನ ಅರಿವು ಹೆಚ್ಚಿಸುವ ಹಾಗೂ ಹಣಕಾಸಿನ ಗುರಿಗಳನ್ನು ತಲುಪಲು ವಿಶ್ವಾಸದಿಂದ ಹೆಜ್ಜೆ ಇರಿಸುವ ಸಾಮರ್ಥ್ಯವನ್ನು ಮಹಿಳೆಯರಲ್ಲಿ ಮೂಡಿಸುವುದರಲ್ಲಿ ತನಗೆ ಇರುವ ಬದ್ಧತೆಯನ್ನು  ಪುನರುಚ್ಚರಿಸಿದೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌-ನ ‘ನಾರಿ ನಿವೇಶ್‌ ಯಾತ್ರಾ’ಮಹಾಲಿಂಗಪುರದಲ್ಲಿ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನೂತನ ಶಾಖೆಯ ಉದ್ಘಾಟನೆ ದಕ್ಷಿಣ ಭಾರತದಲ್ಲೇ ಮೊದಲ 24 ಗಂಟೆ   ಗ್ರಾಹಕರಿಗೆ ಆಟೋವಾಲ್ಟ್ ಲಾಕರ್ ಸೇವೆ .ಮತ್ತು    ಶ್ರೇ:. 16 ಡಿವಿಡೆಂಡ್ ಘೋಷಣೆ - ದೆಹಲಿಯ ೨೦,೦೦೦ ಬಾಲಕಿಯರಿಗೆ ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್: ಉನ್ನತ ಶಿಕ್ಷಣಕ್ಕೆ ವರ್ಷಕ್ಕೆ ?೩೦,೦೦೦ ನೆರವುಮಲಪ್ರಭಾ ಸಕ್ಕರೆ ಕಾರ್ಖಾನೆ ಅವ್ಯವಹಾರ: ವಿಚಾರಣಾ ವರದಿ ಜಾರಿಗೆ ಭೀರಪ್ಪ ದೇಶನೂರ ಆಗ್ರಹ ವಿದ್ಯಾರ್ಥಿ ಹಂತ ಭವಿಷ್ಯದ ಭದ್ರ ಬುನಾದಿ: ಕಾಲೇಜಿನಲ್ಲಿ ಅಶೋಕ ಪಟ್ಟಣ ಹೇಳಿಕೆರಾಮದುರ್ಗದಲ್ಲಿ ವಿಜೃಂಭಿಸಿದ ಶಬರಿ ಉತ್ಸವ: ಜಾನಪದ ಕಲೆ ಉಳಿಸುವಂತೆ ಯುವಜನತೆಗೆ ಕರೆ1501ನೇ ಪ್ರವಾದಿ ಹಝರತ್ ರ್  ಪ್ರಾರ್ಥನಾ ಕಾರ್ಯ ಕ್ರಮ ದಲ್ಲಿ  ಶಾಸಕರ ಪುತ್ರ  ಹೆಚ್. ಜಿ. ಗುರುದತ್ತ ಭಾಗಿಬ್ "ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರಲ್ಲೂ ಇರಲಿ"ತಾಳಿಕೋಟೆ ತಾಲೂಕಿನ ಮೇಲೈಶ್ವರ ಗ್ರಾಮದಲ್ಲಿ ೨೦ ಎಕರೆ ಹತ್ತಿ ಹೊಲ ೧೦ ಗಂಟೆಗಳಲ್ಲಿ ಹರಗಿ ಸಾಧನೆಗೈದ ಜೊಡೆತ್ತುಗಳು