ಕುಕನೂರು : ಪ್ರತಿ ಶುಕ್ರವಾರದಂದು ಪಟ್ಟಣದಲ್ಲಿ ವಾರದ ಸಂತೆ ನಡೆಯುತ್ತಿದ್ದು, ಜಾಗೆ ಇಕ್ಕಟ್ಟಿನಿಂದ ಕೂಡಿದ್ದು ಕಳ್ಳ ಖದೀಮರಿಗೆ ಕಳ್ಳತನಕ್ಕೆ ಸಲಿಸಾಗಿದೆ.
ಇಂದು ಶುಕ್ರವಾರ ವಾರದ ಸಂತೆ ಮಾಡಲೆಂದು ಬಂದ ಬೆಣಕಲ್ ಗ್ರಾಮದ ರಾಮಪ್ಪ ಜಾಲಿಕುಡಿ ಎನ್ನುವವರು ವೀರಭದ್ರಪ್ಪ ವೃತ್ತದ ಬಳಿ ನಿಲ್ಲಿಸಿ ತರಕಾರಿ, ಕಿರಾಣಿ ಸಾಮಾನುಗಳನ್ನು ಖರೀದಿಸಿ ಬಂದು, ಬೈಕ್ ನಿಲ್ಲಿಸಿದ ಜಾಗೆಯಲ್ಲಿ ತಡಕಾಡಿದಾಗ ಬೈಕ್ ಕಳ್ಳತನವಾಗಿರುವುದನ್ನು ಖಚಿತಪಡಿಸಿಕೊಂಡ ಅವರು ಸ್ಥಳೀಯ ಪೋಲಿಸ್ ಠಾಣೆಗೆ ತೆರಳಿ ದೂರ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂತೆ ಮಾಡಲು ಬಂದ ಇಬ್ಬರು ಮಹಿಳೆಯರ ಆಭರಣಗಳನ್ನು ಕಳ್ಳರು, ಗದ್ದಲದ ನಡುವೆ ಮುಖಕ್ಕೆ ಬೂದಿ ಎರಚಿ ಬಂಗಾರದ ಆಭರಣಗಳು ಕಳ್ಳತನ ಮಾಡಿದ್ದಾರೆ ಎಂದು ಸಂತೆ ಬಜಾರನಲ್ಲಿ ಮಾತನಾಡಿಕೊಳ್ಳುತ್ತಿದ್ದದ್ದು ಗಮನಕ್ಕೆ ಬಂದಿದೆ.
ವಾರದ ಸಂತೆ ನಡೆಯುವ ಸಂತೆ ಬಜಾರ ಬಹಳ ಚಿಕ್ಕದಿದ್ದು, ಜನಗಳು ಕಿಕ್ಕಿರಿದು ಸಂತೆಗೆ ಆಗಮಿಸುತ್ತಿರುವದರಿಂದ ಕಳ್ಳತನ ಮಾಡುವ ಖದೀಮರಿಗೆ ಸಲಿಸಾಗಿದೆ. ಅದಲ್ಲದೇ ಸಂತೆ ರಸ್ತೆಯ ಮೇಲೆ ತಳ್ಳುಬಂಡಿ ಹಾಗೂ ವ್ಯಾಪಾರಸ್ಥರು ರಸ್ತೆಯ ಮೇಲೆ ನಿಂತು ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ, ಸಂತೆಗೆ ಆಗಮಿಸುವ ಪಾದಾಚಾರಿಗಳು ಒಂದು ಬದಿಯಿಂದ ಇನ್ನೊಂದು ಬದಿಗೆ ತೆರಳಲು ಹರ ಸಾಹಸ ಪಡುವಂತಾಗುತ್ತಿದೆ.
ಸಂತೆ ಬಜಾರ ಇಕ್ಕಟ್ಟಿನಲ್ಲಿ ನಡೆಸುತ್ತಿರುವುದರಿಂದ ಕಳ್ಳತನಗಳು ಹೆಚ್ಚಾಗುತ್ತವೆ. ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದ್ದು, ವಾರದ ಸಂತೆಯನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಸಿದರೇ ಸಾಕಷ್ಟು ಜಾಗೆಯು ಇರುವುದರಿಂದ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ, ದ್ವಿಚಕ್ರ ವಾಹನ ಸವಾರರಿಗೆ ಅನೂಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯಾಗಿದೆ.