LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ದೇವರ ಸಾನಿಧ್ಯ ಒದಗಿಸುವ ಕೆಲಸ:ಧರ್ಮಸಭೆಯಲ್ಲಿ ಸಹಜಾನಂದ ಶ್ರೀಗಳ ಅಭಿಮತ. 

ಮಹಾಲಿಂಗಪುರ: ಹುಟ್ಟಿದಾಗ ಪ್ರತಿಯೊಬ್ಬರೂ ಸಣ್ಣವರೇ ಇರುತ್ತಾರೆ. ಅನುಭವ, ಪರಿಸರ ಜ್ಞಾನದಿಂದ ದೊಡ್ಡವರಾಗುತ್ತಾರೆ ಎಂದು ಸ್ಥಳೀಯ ಸಿದ್ದಾರೂಢ ಮಠದ ಸಹಜಾನಂದ ಸ್ವಾಮಿಗಳು ಹೇಳಿದರು. 
ಸ್ಥಳೀಯ ಜವಳಿ ಬಜಾರದಲ್ಲಿ ಶುಕ್ರವಾರ ಮುಂಜಾನೆ ಜರುಗಿದ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದ ಕಳಸಾರೋಹಣ, ಮಲ್ಲೆಮ್ಮ ದೇವಿ ದೇವಸ್ಥಾನದ ಮೂರ್ತಿ ಪ್ರತಿ?ಪನೆ ಹಾಗೂ ಧರ್ಮ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಒಂದಾನೊಂದು ಕಾಲದಲ್ಲಿ ಈ ಜವಳಿ ಬಜಾರ ವೈಭವದ ಓಣಿಯಾಗಿತ್ತು. ಇಲ್ಲಿಂದ ದಾವಣಗೆರೆಗೆ ಸೀರೆ ಒಯ್ದು ಅಲ್ಲಿಂದ ನೂಲು ತಂದು ಮತ್ತೆ ಸೀರೆ ತಯಾರಿಸುತ್ತಿದ್ದರು. ಪಟ್ಟಣದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೃದಯ ಭಾಗವಾಗಿತ್ತು ಈ ಪ್ರದೇಶದಲ್ಲಿ ಅರ್ಧ ಶತಮಾನಗಳ ಹಿಂದೆ ನಿರ್ಮಿಸಲಾದ ಎಲ್ಲಮ್ಮನ ಗುಡಿ ಕಳಸಾರೋಹಣ ನೆರವೇರಿಸಿದ್ದು ಸಾರ್ಥಕ ಕ್ಷಣ ಇದು ಪ್ರತಿಯೊಬ್ಬರಿಗೂ ದೇವರ ಸಾನಿಧ್ಯ ಒದಗಿಸುವ ಕೆಲಸ ಎಂದರು. 

ಚಿಮ್ಮಡ ವಿರಕ್ತ ಮಠದ ಪ್ರಭುಸ್ವಾಮಿಗಳು ಮಾತನಾಡಿ ಭಕ್ತರು ಅತ್ಯಂತ ಕಠಿಣ ಪರಿಶ್ರಮ ಮತ್ತು ಛಲದಿಂದ ಇಂಥ ದೇವಸ್ಥಾನ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ರನ್ನ ಬೆಳಗಲಿಯ ಸಿದ್ಧರಾಮ ಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬ ಮನು?ನಿಗೂ ತಾಳ್ಮೆಯೇ ಮುಖ್ಯ ತಾಳ್ಮೆಯಿಂದ ಮಾನವ ದೇವನಾಗಬಹುದು ಎಂದರು. 
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ ಸರ್ಕಾರದಿಂದ ದೇವಸ್ಥಾನಕ್ಕೆ ೫ ಲಕ್ಷ ರೂ.ಅನುದಾನ ಒದಗಿಸುವ ಭರವಸೆ ನೀಡಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿದ್ಯಾಧರ ಸವದಿ ಮತ್ತು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಶಾಸಕ ಸಿದ್ದು ಸವದಿಯವರ ಅನುದಾನದಿಂದ ೫ ಲಕ್ಷ ರೂ. ದೇಣಿಗೆ ನೀಡುವ ಭರವಸೆ ನೀಡಿದರು.

ಮರೆಗುದ್ದಿ ಅಡವಿ ಸಿದ್ದೇಶ್ವರ ಮಠದ ಡಾ.ನಿರುಪಾಧೀಶ್ವರ   ಮಹಾಸ್ವಾಮಿಗಳ ನೈತೃತ್ವದಲ್ಲಿ ಕಳಸಾರೋಹಣ ಮತ್ತು ಮೂರ್ತಿ ಪ್ರತಿ?ಪನೆ ಜರುಗಿತು. 
 ಡಾ.ಬಸವರಾಜ ದುಂಡಪ್ಪ ಸೋರಗಾಂವಿ ಪ್ರಾಸ್ತಾವಿಕವಾಗಿ ಮಾತನಾಡಿದರು, 
ಎರಡು ದಿನಗಳ ಕಾಲ ಕುಂಭಮೇಳ, ಮೂರ್ತಿ ಮತ್ತು ಕಳಸ ಮೆರವಣಿಗೆ, ಲಕ್ಷ ದೀಪೋತ್ಸವ ಹೋಮಹವನ, ಉಡಿತುಂಬುವ ಕಾರ್ಯಕ್ರಮ, ಮಹಾಪ್ರಸಾದ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಶಂಕರಗೌಡ ಪಾಟೀಲ, ಅಲ್ಲಪ್ಪ ಗುಂಜಿಗಾಂವಿ ಇದ್ದರು.
ವಿಜಯಲಕ್ಷ್ಮಿ ಕುಳ್ಳೊಳ್ಳಿ ಸ್ವಾಗತಿಸಿ,   ನಾರನಗೌಡ ಉತ್ತಂಗಿ ನಿರೂಪಿಸಿದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್