Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಮಾನವೀಯತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ಸಜ್ಜನ

ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕನಕದಾಸರ ಜಯಂತಿ ಆಚರಣೆ



ತಾಳಿಕೋಟೆ :   ಪಟ್ಟಣದ ಮಿಣಜಗಿ ಕ್ರಾಸ್‌ನಲ್ಲಿರುವ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶ ಸಾರಿದ ದಾಸಶ್ರೇಷ್ಠ ಸಂತ ಕನಕದಾಸರ ಜಯಂತಿಯನ್ನು ಭಕ್ತಿಭಾವ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
     ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ. ಸಜ್ಜನ ಮಾತನಾಡಿ, ತಿಮ್ಮಪ್ಪನಾಗಿ ಜನಿಸಿ, ದಾಸ ಪರಂಪರೆಯ ಶ್ರೇಷ್ಠ ದಾಸರಾದ ಕನಕದಾಸರ ಜೀವನ ಚರಿತ್ರೆ ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾಗಿದೆ. ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ, ವರ್ಣಭೇದ ಹಾಗೂ ಅಸಮಾನತೆಯನ್ನು ಧೈರ್ಯವಾಗಿ ವಿರೋಧಿಸಿದ ಮಹಾನ್ ಸಂತರು ಕನಕದಾಸರು ಎಂದು ಹೇಳಿದ ಅವರು"ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನ್ನಾದರೂ ನೀವು ಬಲ್ಲಿರಾ ಹುಚ್ಚಪ್ಪಗಳಿರ" ಎಂಬ ಕನಕದಾಸರ ವಾಣಿಯ ಮೂಲಕ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದರು. ಅವರ ಕೀರ್ತನೆಗಳಲ್ಲಿನ ತತ್ವ, ಆದರ್ಶ ಹಾಗೂ ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಎಷ್ಟೇ ವರ್ಷಗಳು ಕಳೆದರೂ ಕನಕದಾಸರು ನಮ್ಮೆಲ್ಲರಿಗೂ ಸ್ಫೂರ್ತಿಯ ಚಿಲುಮೆಯಾಗಿ ಉಳಿಯುತ್ತಾರೆ ಎಂದರು. ೨೧ನೇ ಶತಮಾನದಲ್ಲಿಯೂ ಸಮಾಜದಲ್ಲಿ ಬೇರುಬಿಟ್ಟಿರುವ ಜಾತಿ ವ್ಯವಸ್ಥೆ ಮತ್ತು ವರ್ಣಭೇದವನ್ನು ತೊಡೆದುಹಾಕಲು ನಾವೆಲ್ಲರೂ ಸಂಕಲ್ಪ ಮಾಡಬೇಕು. ಕನಕದಾಸರು ತೋರಿಸಿಕೊಟ್ಟ ಸಮಾನತೆ, ಮಾನವೀಯತೆ ಹಾಗೂ ಸಹೋದರತ್ವದ ಮಾರ್ಗದಲ್ಲಿ ನಡೆದು, ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
       ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಸವರಾಜ ಜಿ.ಎಸ್., ಆರ್.ಎಸ್. ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣಧೋಳಿ, ಪಿಯು ಕಾಲೇಜಿನ ಪ್ರಾಚಾರ್ಯ ಎಂ. ಮರೇಣ್ಣ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿ.ಎಡ್. ಕಾಲೇಜಿನ ಪ್ರಾಚಾರ್ಯ ಎನ್.ಎಂ. ಕೊಣ್ಣೂರ, ಐಟಿಐ ಕಾಲೇಜಿನ ಪ್ರಾಂಶುಪಾಲ ರಾಜು ಹಜೇರಿ ಸೇರಿದಂತೆ ಸಂಸ್ಥೆಯ ಸರ್ವ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ರೂಪಾ ನಿರೂಪಿಸಿದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನಕದಾಸರ ಆದರ್ಶಗಳನ್ನು ಪಾಲಿಸಿ ಉತ್ತಮ ಸಮಾಜ ಕಟ್ಟೋಣ: ಗ್ರೇಡ್-2 ತಹಶೀಲ್ದಾರ್ ರಶ್ಮಿ ಜಕಾತಿ ಡಾ. ಜೆ. ಪಿ. ದೊಡಮನಿ ಅವರ ಅನುವಾದಿತ " ಅಸ್ಪೃಶ್ಯರು " ಪುಸ್ತಕ ಲೋಕಾರ್ಪಣೆ / ಐಎಎಸ್ ಅಧಿಕಾರಿ ಜಾನಕಿ ಕೆ.ಎಂ ಅಭಿಮತ  ಕಾಗವಾಡ ರೇಷನ್ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲು – ಸರ್ವರ್ ಸಮಸ್ಯೆ ಬಗೆಹರಿಸಿ ಸಕಾಲಕ್ಕೆ ಪಡಿತರ ವಿತರಿಸಲು ರಾಹುಲ್ ಕಟಗೇರಿ ಆಗ್ರಹಸಂವಿಧಾನದ ಪ್ರಸ್ತಾವನೆಯ ಆಶಯದಂತೆ ನಡೆದಾಗ ಮಾತ್ರ ನಿಜವಾದ ಗೌರವ: ಶಾಸಕ ಪಾಟೀಲಕಾಟಾಚಾರದ ಜಯಂತಿ ಆಚರಣೆಗೆ ಹಾಲುಮತ ಸಮಾಜದ ಆಕ್ರೋಶಕನಕದಾಸರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಮೃದ್ಧ: ಸಿದ್ರಾಮ ಶೇಗುಣಸಿಶ್ರೀ ವಿನಾಯಕ ಶಾಲೆಯಲ್ಲಿ ಸಂತ ಕನಕದಾಸರ ಜಯಂತಿ ಆಚರಣೆಎಸ್.ಎಸ್. ವಿದ್ಯಾಸಂಸ್ಥೆಯಲ್ಲಿ ಸಂತ ಕನಕದಾಸರ ಜಯಂತಿ ಆಚರಣೆಕನಕದಾಸರ ಆದರ್ಶಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು-ಜವಳಗೇರಿ ಮಾನವೀಯತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ಸಜ್ಜನ