Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗತ ವೈಭವದ ಕರ್ನಾಟಕ ರಾಜ್ಯೊತ್ಸವದ ನಡೆದು ಬಂದ ದಾರಿ


ಕನ್ನಡ ನಾಡಿಗೆ ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಚರಿತ್ರೆಯಿದೆ ಕನ್ನಡಿಗರು ಚಾರಿತ್ರಿಕವಾಗಿ ಬೇರೆ ಬೇರೆ ರಾಜಕೀಯ ವ್ಯವಸ್ಥೆಯಲ್ಲಿ ಬದುಕಿದವರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕನ್ನಡ ಭಾಷಿಕ ಪ್ರದೇಶಗಳು ಮರಾಠಾ ಪೇಶ್ವೆಗಳು ಪಾಳೆಗಾರರು ಬ್ರಿಟೀಷರು, ಸುಲ್ತಾನರು, ನವಾಬರು ಮುಂತಾದವರ ಆಳ್ವಿಕೆಯಲ್ಲಿ ಇಪ್ಪತ್ತು ಆಡಳಿತ ಘಟಕಗಳಲ್ಲಿ ಹಂಚಿ ಹೋಗಿದ್ದವು. ಇದರಿಂದ ಕನ್ನಡಿಗರು ಕನ್ನಡ ನೆಲದಲ್ಲಿಯೇ ಪರಕೀಯತೆಯ ಭಾವನೆಯನ್ನು ಅನುಭವಿಸುತ್ತಿದ್ದರು.


ರಾ.ಹ ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ 1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಏಕೀಕರಣ ಕಲ್ಪನೆಗೆ ಸಾಂಸ್ಥಿಕ ರೂಪ ನೀಡಿತು. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ 1915 ರಲ್ಲಿ ಸ್ಥಾಪಿತವಾಯಿತು. ಇದರಿ೦ದ ಏಕೀಕರಣಕ್ಕೆ ಪ್ರೋತ್ಸಾಹ, ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಬೆಳವಣಿಗೆ ಲಾಭದಾಯಕವಾಯಿತು.


1916 ರಲ್ಲಿ ಕರ್ನಾಟಕ ಏಕೀಕರಣ ಸಭೆ ಧಾರವಾಡದಲ್ಲಿ ಪ್ರಾರ೦ಭಿಸಲಾಯಿತು. ನ೦ತರ 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣರಾವ್ ಅವರು “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಎಂಬ ಸ್ವಾಗತ ಗೀತೆಯನ್ನು ಹಾಡುವ ಮೂಲಕ ಏಕೀಕರಣ ಚಳುವಳಿಗೆ ವಿದ್ಯುತ್ ಸಂಚಲನವನ್ನು ತಂದುಕೊಟ್ಟಾರು. ಈ ಸಮ್ಮೇಳನದ ಅಧ್ಯಕ್ಷರಾಗಿದ್ದ ಮಹಾತ್ಮಾ ಗಾಂಧೀಜಿಯವರು ಏಕೀಕರಣಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು.


ಕರ್ನಾಟಕದ ನಾಡು-ನುಡಿ ಸಂಸ್ಕೃತಿಗಳ ಸಂವರ್ಧನೆಗಾಗಿ ಆಲೂರು ವೆಂಕಟರಾಯರು ಬಹಳಷ್ಟು ಶ್ರಮಿಸಿದ ಹಿರಿಯರು. ಅವರು "ಕರ್ನಾಟಕದ ಗತವೈಭವ" ಎ೦ಬ ಗ್ರಂಥ ಬರೆದು ತಮ್ಮ ಖರ್ಚಿನಿಂದ ಪ್ರಕಟಿಸಿದರು. ಇದು ಅತ್ಯಂತ ಸ್ಪೂರ್ತಿದಾಯಕ ಪುಸ್ತಕವಾಗಿತ್ತು. ಹೈದರಾಬಾದಿನ ಕನ್ನಡಿಗರು ಅವರಿಗೆ ಸನ್ಮಾನ ಮಾಡಿ (1941) ರಲ್ಲಿ ಕರ್ನಾಟಕ ಕುಲಪುರೋಹಿತ ಎಂಬ ಬಿರುದನ್ನು ನೀಡಿದರು.

ಮುಂಬೈ ಕರ್ನಾಟಕದಲ್ಲಿ ಜಾಗೃತಿ ಮೂಡಿಬರಲು ಶಾಂತ ಕವಿಗಳ ಪಾತ್ರವೂ ಮಹತ್ವದ್ದಾಗಿದೆ. ಸಾಹಿತ್ಯ ಸಮ್ಮೇಳನದ ಖರ್ಚಿಗಾಗಿ ಬೇಡಲು ಕನ್ನಡದಾಸಯ್ಯ ಬಂದಿಹ ನೀಡಿರಮ್ಮಾ ತಡ ಮಾಡದೇ. ಎಂದು ದಾಸಯ್ಯನಾಗಿ ಹಾಡಿ ಹಣ ಸಂಗ್ರಹಿಸಿದರು. ಕುವೆಂಪು ಅವರ "ಜಯಹೇ ಕರ್ನಾಟಕ ಮಾಗೆ ನೀ ಮೆಟ್ಟುವ ನೆಲ ಅದೇ ಕರ್ನಾಟಕ" ಮುಂತಾದವು ಲಕ್ಷೋಪಲಕ್ಷ ಕನ್ನಡಿಗರ ಹೃದಯಗಳನ್ನು ತಟ್ಟಿದವು.

ಹುಯಿಲಗೋಳ ನಾರಾಯಣರಾವ್ ಅವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎಂಬ ನಾಡಗೀತೆಯ ಅತ್ಯ೦ತ ಜನಪ್ರೀಯವಾಯಿತು. ಕಯ್ಯಾರ ಕಿಞ್ಞಣ್ಣರೈ ಅವರು ಕಾಸರ್ಗೋಡು ಕರ್ನಾಟಕದಲ್ಲಿ ವಿಲೀನಗೊಳ್ಳಬೇಕೆಂದು ಕೊನೆಯವರೆಗೂ ಹೋರಾಡಿದರು. ಇನ್ನೂ ಅನೇಕ ಕವಿಗಳು, ಲೆಖಕರು, ಪತ್ರಕರ್ತರು ಕನ್ನಡಿಗರಲ್ಲಿ ಏಕೀಕರಣದ ಬಗ್ಗೆ ಪೂರ್ಣ ಅಭಿಮಾನದಿಂದ ಪರಿಚಯಿಸಿದರು.


ಅರ್ಧ ಶತಮಾನಕ್ಕಿಂತಲೂ ಅಧಿಕ ಕಾಲಾವಧಿಯ ಏಕೀಕರಣದ ಕನಸು ನನಸಾಯಿತು. ನಮ್ಮ ದೇಶ ಸ್ವಾತಂತ್ರ್ಯಗಳಿಸಿದ ನಂತರವೇ ಅದು ಮೂರು ಹಂತಗಳಲ್ಲಿ ಅಂದರೆ ಮೊದಲ ಹಂತ 1947-48, ಎರಡನೆಯ ಹಂತ 1953 ಅನಂತರ ಕೊನೆಯ ಹಂತ.

ಆಂಧ್ರಪ್ರದೇಶ ರಚನೆಯಾದ ನಂತರ ಭಾಷೆಯ ಆಧಾರದ ಮೇಲೆ ಪ್ರಾಂತ್ಯ ಪುನರ್ ರಚನೆಯ ಬೇಡಿಕೆ ತೀವ್ರಗೊಂಡಿತು. ಕೇಂದ್ರ ಸರಕಾರವು ರಾಜ್ಯಗಳ ಪುನರ್ ವಿಂಗಡನೆಯನ್ನು ಕುರಿತು ವರದಿ ನೀಡಲು ರಾಜ್ಯ ಪುನರ್ ರಚನೆಯ ಆಯೋಗವನ್ನು (SRC) ನೇಮಿಸಿತು. ಅದರ ಅಧ್ಯಕ್ಷರು ಎಸ್ ಫಜಲ್ ಅಲಿ(ಫಜಲ್ ಅಲಿ ಆಯೋಗ ಎನ್ನುವರು) ಅದರ ಇತರ ಸದಸ್ಯರು H N ಕುಂಜ್ರು ಮತ್ತು K M ಫಣಿಕ್ಕರ್ ಆಯೋಗವು 1955ರಲ್ಲಿ ವರದಿಯನ್ನು ಸಲ್ಲಿಸಿತು.


ಅದರಂತೆ ಭಾರತದ ರಾಜ್ಯಗಳ ಪುನರ್ ರಚನೆಯು ಭಾಷೆ ಮತ್ತು ಆಡಳಿತದ ಒಡೆತನದಲ್ಲಿ ನಡೆಯಿತು. ನಾಡಿನ ಎಲ್ಲ ಪಕ್ಷಗಳು ಆಯೋಗದ ವರದಿಯನ್ನು ಮ೦ಡಿಸಿದರು. ಕೇಂದ್ರ ಸರಕಾರವು ರಾಜ್ಯ ಪುನರ್ ರಚನೆಯ ಆಯೋಗದ ವರದಿಯನ್ನು ಸಮರ್ಥಿಸಿದ್ದರಿ೦ದ 1956 ನವೆ೦ಬರ 1 ರ೦ದು ವಿಶಾಲವಾದ ಮೈಸೂರು ರಾಜ್ಯ ರಚನೆಯಾಯಿತು. ಏಕೀಕೃತಗೊ೦ಡ ಮೈಸೂರು ರಾಜ್ಯವು ಈ ಕೆಳಕ೦ಡ ಜಿಲ್ಲೆಗಳನ್ನು ಒಳಗೊಂಡಿತ್ತು.


೧] ಹಳೇ ಪ್ರ್ಯಾಂತ್ಯದ ಮೈಸೂರು ಒಂಭತ್ತು ಜಿಲ್ಲೆಗಳು  ೧]ಮೈಸೂರು, ೨] ಮಂಡ್ಯ, ೩] ಬೆಂಗಳೂರು, ೪] ಕೋಲಾರ, ೫] ಹಾಸನ, ೬] ತುಮಕೂರು, ೭] ಚಿಕ್ಕಮಗಳೂರು, ೮] ಶಿವಮೊಗ್ಗ ಮತ್ತು ೯] ಚಿತ್ರದುರ್ಗ. ೨] ಮುಂಬಯಿ ಪ್ರಾಂತ್ಯದಿ೦ದ 4 ಜಿಲ್ಲೆಗಳು

 ೧]ಬೆಳಗಾವಿ, ೨] ಧಾರವಾಡ, ೩] ವಿಜಯಪುರ ಮತ್ತು ೪] ಉತ್ತರ ಕನ್ನಡ.೩] ಹೈದರಾಬಾದ ಪ್ರಾಂತ್ಯದಿಂದ 3 ಜಿಲ್ಲೆಗಳು

 ೧] ಗುಲ್ಬರ್ಗಾ (ಕಲಬುರಗಿ), ೨] ರಾಯಚೂರು ಮತ್ತು ೩] ಬೀದರ್ ೪] ಮದ್ರಾಸ್ ಪ್ರಾಂತ್ಯದಿ೦ದ 2 ಜಿಲ್ಲೆಗಳು

 ೧] ದಕ್ಷಿಣಕನ್ನಡ ಜಿಲ್ಲೆ ಕೊಳ್ಳೆಗಾಲ (ತಾಲೂಕು) ಮತ್ತು ಬಳ್ಳಾರಿ (ಬಳ್ಳಾರಿ 1953ರಲ್ಲಿ ಆಂಧ್ರಪ್ರದೇಶ ರಚನೆಯಾದಾಗ ಸೇರ್ಪಡೆಯಾಯಿತು.)


೫] ಕೊಡಗು 1956ರಲ್ಲಿ 19 ಜಿಲ್ಲೆಗಳಿದ್ದವು. ಇಂದು ಒಟ್ಟು 31 ಜಿಲ್ಲೆಗಳಿವೆ.


1956ರಲ್ಲಿ ಏಕೀಕೃತ ವಿಶಾಲ ಮೈಸೂರು ರಾಜ್ಯಕ್ಕೆ ಎಸ್. ನಿಜಲಿಂಗಪ್ಪನವರು ಪ್ರಥಮ ಮುಖ್ಯಮಂತ್ರಿಗಳಾದರು. ನಂತರ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸರು 1973ರ ನವೆಂಬರ 1ರಂದು ಮೈಸೂರು ರಾಜ್ಯವನ್ನು ಇಂದಿನ "ಕರ್ನಾಟಕ" ಎಂದು ಮರು ನಾಮಕರಣ ಮಾಡಿದರು.


ಕರ್ನಾಟಕ ರಾಜ್ಯವು ಇಂದು ಭಾರತ ದೇಶದ ಪ್ರಗತಿಶೀಲ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಜನಸಂಖ್ಯೆ ಸುಮಾರು ಆರು ಕೋಟಿಗಿಂತಲೂ ಪ್ರಕೃತಿಯ ಪ್ರಾಕೃತಿಕ ಸೌಂದರ್ಯದಿಂದ ಕರ್ನಾಟಕ ಸೃಜನಗೊಂಡಿದೆ. ವಿಶಾಲವಾದ ಅರಬ್ಬಿ ಸಮುದ್ರ ಪಶ್ಚಿಮೋತ್ತರ ಘಟ್ಟಗಳನ್ನು ಸಮೃದ್ಡಿಗೊಳಿಸಿದೆ. ಉತ್ತರದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿಗಳ ನಯನ ಮನೋಹರ ದೃಶ್ಯವನ್ನು ಕಾಣಬಹುದು. ದಕ್ಷಿಣದ ನೀಲಗಿರಿ ಪರ್ವತಗಳು ಬಹಳ ಸುಂದರವಾಗಿ ಶೊಭಿತವಾಗಿದೆ.


ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಶಿಕ್ಷಣ ಕೆಂದ್ರ ಮಾತ್ರವಾಗಿದೆ. ಔದ್ಯೋಗಿಕ ಕೇಂದ್ರವೂ ಆಗಿದೆ. ಇಲ್ಲಿ ಸುಪ್ರಸಿದ್ದ ವೈಜ್ಞ್ಯಾನಿಕ ಸಂಶೋಧನಾ ಕೇಂದ್ರಗಳು ವಿಶ್ವದ ಬಾಗಿಲು ತಟ್ಟಿವೆ. HAL, HMT, BEL, BHEL ಮುಂತಾದ ಬೃಹತ್ ಕೈಗಾರಿಕೆಗಳು ಸಾಧನೆಯ ಹಾದಿಯಲ್ಲಿವೆ ಅಂತೆಯೇ ಬೆಂಗಳೂರನ್ನು ಸಿಲಿಕಾನ ಸಿಟಿ ಎಂದು ಕೂಡ ಕರೆಯಲಾಗಿದೆ.


ಡಾ. ಸರ್ ಸಿ. ವಿ. ರಾಮನ್ ಸರ್. ಎಂ. ವಿಶ್ವೇಶ್ವರಯ್ಯ, ಡಾ|| ಸಿ. ಎನ್. ಆರ್. ರಾವ್, ಶಕುಂತಲಾ ದೇವಿ, ಮುಂತಾದ ದಿಗ್ಗಜರು ವೈಜ್ಞಾನಿಕ ಹಾಗೂ ಔದೋಗಿಕ ಕ್ಷೇತ್ರದಲ್ಲಿ ನಾರಾಯಣ ಮೂರ್ತಿ ಮುಂತಾದವರು ಕರ್ನಾಟಕದ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಬೆಳಗಿದ್ದಾರೆ. 2013ರಲ್ಲಿ ಡಾ|| ಸಿ. ಎನ್. ಆರ್. ರಾವ್ ಅವರಿಗೆ ಭಾರತ ರತ್ನ ಎಂಬ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕವು ಚಿನ್ನ, ಕಂಚು, ಕಬ್ಬಿಣಗಳ ಗಣಿಗಳನ್ನು ಹೊ೦ದಿದ್ದು ಸಿರಿವ೦ತ ರಾಜ್ಯಗಳಲ್ಲಿ ಒಂದಾಗಿದೆ. ಭಾದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕಾಗದ ಕಾರ್ಖಾನೆ, ಸಕ್ಕರೆ, ಸಿಮೆಂಟ, ರೇಷ್ಮೆ ಉದ್ಯಿಮೆಗಳು ಪ್ರಖ್ಯಾತವಾಗಿವೆ.


ಕರ್ನಾಟಕವು ಶ್ರೀಗಂಧದ ಬೀಡು ಎ೦ಬ ಖ್ಯಾತಿಯನ್ನು ಪಡೆದಿದೆ.. ಇದಕ್ಕಿ ಕಾರಣ ಇಲ್ಲಿರುವ ವಿಪುಲವಾದ ಶ್ರೀಗಂಧದ ಕಾಡುಗಳು. ಶ್ರೀಗಂಧದ ಮರಗಳಿಂದಾಗಿ ಇಲಲಿ ಸು೦ದರ ಮೂರ್ತಿಗಳ ಕೆತ್ತನೆ, ಶ್ರೀಗ೦ಧದ ಎಣ್ಣೆ, ಸೋಪು ಮುಂತಾದ ತಯಾರಿಕೆಯೂ ವಿಪುಲವಾಗಿದೆ.


ಕರ್ನಾಟಕದಲ್ಲಿ ಕಾವೇರಿ, ಕೃಷ್ಣಾ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾ ಮು೦ತಾದ ನದಿಗಳು ಸಾವಿರಾರು ಏಕರೆ ಭೂಮಿಯನ್ನು ಫಲವತ್ತಾಗಿಸಿವೆ. ಜೋಗ, ಅಬ್ಬಿ, ಗೋಕಾಕ, ಶಿವನ ಸಮುದ್ರ ಜಲಪಾತಗಳು ರಮಣೀಯವಾಗಿವೆ.


ಕರ್ನಾಟಕವು ಶಿಲ್ಪಕಲೆಗಳ ಬೀಡಾಗಿದೆ. ಹಂಪಿ, ಬದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೆಬೀಡು ಮೂರ್ತಿ ಶಿಲ್ಪ ಹಾಗೂ ವಾಸ್ತು ಶಿಲ್ಪ ಕಲೆಗೆ ಪ್ರಖ್ಯಾತವಾಗಿವೆ. ಶ್ರವಣಬೆಳಗೂಳದ 57 ಅಡಿ ಎತ್ತರದ ಏಕ ಶಿಲಾ ಗೊಮ್ಮಟೇಶ್ವರ ಮೂರ್ತಿಯು ವಿಶ್ವವಿಖ್ಯಾತವಾಗಿದೆ. ವಿಜಯಪುರದ ಗೋಲ್ ಗುಂಬಜನ ಸ್ಪ್ರಿಂಗ್ ಗ್ಯಾಲರಿ ಅದ್ವಿತೀಯ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ. ಮೈಸೂರು ಅರಮನೆ, ಸೆಂಟ್ ಫಿಲೋಮಿನ ಚರ್ಚ, ಜಗನ್ ಮೋಹನ ಅರಮನೆ, ವಿಶ್ವವಿಖ್ಯಾತ ಮೈಸೂರು ಬೃಂದಾವನ, ಪ್ರಾಣಿ ಸಂಗ್ರಹಾಲಯ ಮು೦ತಾದವುಗಳು ಪ್ರೇಕ್ಷಣಿಯ ಸ್ಥಳಗಳಾಗಿವೆ.


ಕರ್ನಾಟಕವು ಗಂಗ, ಕದಂಬ, ರಾಷ್ಟ್ರಕೂಟ ಚಾಲುಕ್ಯ, ಹೊಯ್ಸಳರು, ಒಡೆಯರು ಮುಂತಾದ ರಾಜ ವಂಶಗಳಿಂದ ಆಳಲ್ಪಟ್ಟ ವೈಭವ ಪೂರ್ಣಆಳ್ವಿಕೆಗೆ ಪ್ರಸಿದ್ಧವಾಗಿದೆ. ಕೃಷ್ಣದೇವರಾಯ, ಮದಕರಿ ನಾಯಕ, ಕಿತ್ತೂರಿನ ರಾಣಿ ಚೆನ್ನಮ್ಮ, ಕೆಳದಿಯ ಚನ್ನಮ್ಮ, ರಾಣಿ ಅಬ್ಬಕ್ಕದೇವಿ, ಟಿಪ್ಪು ಸುಲ್ತಾನ, ಆದಿಲಶಾಹರ ಕೊಡುಗೆಗಳು ಕರ್ನಾಟಕದ ಖ್ಯಾತಿಯನ್ನು ಕೀರ್ತಿ ಶಿಖರಕ್ಕೇರಿಸಿವೆ.


ಕರ್ನಾಟಕವು ಅನೇಕ ಸಾಹಿತಿಗಳು, ಕವಿಗಳಿಂದ ಶೃಂಗಾರಗೊ೦ಡಿದೆ ಬಸವಣ್ನನವರು ಕ್ರಾ೦ತಿಕಾರಿ ಸಮಾಜ ಸುಧಾರಕರಾಗಿದ್ದರು, ಅಕ್ಕ ಮಹಾದೇವಿ, ಅಲ್ಲಮಪ್ರಭುಗ, ಸರ್ವಜ್ಞ ಮುಂತಾದವರು ತಮ್ಮ ವಚನ ಸಾಹಿತ್ಯಗಳಿಂದ ಪ್ರೇಮ ದಯೆ ಧರ್ಮಗಳನ್ನು ಭೋಧಿಸಿದ್ದಾರೆ.


ಪಂಪ ರನ್ನ ಪೊನ್ನ ಕುಮಾರವ್ಯಾಸ ಹರಿಹರ ರಾಘವಾಂಕರಂತಹ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಪ್ರಮುಖ ಅಧುನಿಕ ಸಾಹಿತ್ಯಕಾರರೆಂದರೆ ಕುವೆ೦ಪು, ದ. ರಾ. ಬೆ೦ದ್ರೆ, ಶಿವರಾಮ ಕಾರ೦ತ, ಮಾಸ್ತಿ ವೆಂಕಟೇಶ ಅಯ್ಯಂಗಾರ, ವಿಕೃ ಗೋಕಾಕ, ಯು. ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ ಹಾಗೂ ಚಂದ್ರಶೇಖರ ಕ೦ಬಾರರು ಕನ್ನಡದ ಸಾಹಿತ್ಯವನ್ನು ಶೀಮಂತಗೊಳಿಸಿದ್ದಾರೆ.


ಕನ್ನಡದ ಖ್ಯಾತ ನಟ ಸಾರ್ವಭೌಮ ಡಾ|| ರಾಜ್ ಕುಮಾರರವರು ಕನ್ನಡಾಭಿಮಾನದ ಎಷ್ಟೋ ಗೀತೆಗಳು ಪ್ರೇಕ್ಷಕರ ಮನದಲ್ಲಿ ಹರಿದಾಡುತ್ತಿವೆ. ಇದಲ್ಲದೆ ಪಿ. ಬಿ. ಶ್ರೀನಿವಾಸ, ಎಸ್. ಪಿ ಬಾಲಸುಬ್ರಮಣ್ಯಂ, ಎಸ್ ಜಾನಕಿ ಹೀಗೆ ಎಷ್ಟೋ ಗಾಯಕ ಗಾಯಕಿಯರು ತಮ್ಮ ಶ್ರಮದ ಸೇವೆ ಸಲ್ಲಿಸಿದ್ದಾರೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ