ಸಂಕೇಶ್ವರ : ರಾಷ್ಟ್ರೀಯ ಹೆದ್ದಾರಿ 48 ರ ಹುಕ್ಕೇರಿ ತಾಲೂಕಿನ ಕಣಗಲಾ ಬಳಿಯ ಟ್ರಕ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ-ತಮ್ಮ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ನಡೆದಿದೆ.
ಕಣಗಲಾ ಗ್ರಾಮದ ಅಪ್ಪಾಸಾಹೇಬ ಮಹಾಲಿಂಗ ಲಾಟ್ಕರ್ (60) ಹಾಗೂ ಮಾಂಗನೂರ ಗ್ರಾಮದ ಸುವರ್ಣ ಸಾತಗೌಡ ಪಾಟೀಲ (62) ಮೃತರು
ಎಂದು ಗುರುತಿಸಲಾಗಿದೆ.
ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಅಪ್ಪಾಸಾಹೇಬ್ ಲಾಟ್ಕರ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಅಸ್ವಸ್ಥಗೊಂಡಿದ್ದ ಸುವರ್ಣ ಪಾಟೀಲ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ಸಾಗಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಅಪಘಾತ ಹೇಗಾಯಿತು?:
ಕಣಗಲಾ ಸಮೀಪದ ಹಿಟ್ನಿ ಗ್ರಾಮ ಮಾರ್ಗದಿಂದ ಅಪ್ಪಾಸಾಹೇಬ್ ಲಾಟ್ಕರ್, ಸುವರ್ಣ ಪಾಟೀಲ ಅವರೊಂದಿಗೆ ಬೈಕ್ (ಸ್ಕೂಟಿ) ಯಲ್ಲಿ ಮಾಂಗನೂರ ಕಡೆಗೆ ತೆರಳುತ್ತಿದ್ದ ವೇಳೆ ಟ್ರಕ್ ಹಿಂದಿನಿಂದ ಬೈಕ್ ಗೆ
ಡಿಕ್ಕಿ ಹೊಡೆದ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಟ್ರಕ್ ಚಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
