LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಗೋಮಾಳದ ಜಾಗೆಯಲ್ಲಿ ಗರಸು ಎತ್ತು ವಿಚಾರಕ್ಕೆ ತಪಶೀಲ್ದಾರ ಮತ್ತು ಗ್ರಾಮಸ್ಥರ ಮಧ್ಯ ವಾಕ್ಸಮರ

ಹುನಗುಂದ: ಹೊನ್ನರಹಳ್ಳಿ ಗುಡ್ಡದ ಪ್ರದೇಶದಲ್ಲಿರುವ ಗೋಮಾಳದ ಜಾಗೆಯಲ್ಲಿ ಗರಸು ಎತ್ತು ವಿಚಾರಕ್ಕೆ ಸಂಬಂಧಿಸಿದಂತೆ ತಪಶೀಲ್ದಾರ ಮತ್ತು ಗ್ರಾಮಸ್ಥರ ಮಧ್ಯ ವಾಕ್ಸಮರದೇ ನಡೆದು ತಹಸೀಲ್ದಾರ ಮಾತಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಸಿದ್ದಾರೆ.           ತಾಲೂಕಿನ ಹೊನ್ನರಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಗ್ರಾಮಸ್ಥರೊಂದಿಗೆ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರು ಸಭೆ ನಡೆಸಿ ಮಾತನಾಡಿ ಗ್ರಾಮದ ಗುಡ್ಡದ ಗೋಮಾಳ ಜಾಗೆ ಸರ್ಕಾರಕ್ಕೆ ಸೆರಿದ್ದು, ಸರ್ಕಾರದ ಆದೇಶದಂತೆ ಕಾಮಗಾರಿ ಕೈಗೊಳ್ಳಲು ಗೋಮಾಳದಲ್ಲಿನ ಗರಸು ತೆಗೆಯಲು ಅಡ್ಡಿಪಡಿಸದೆ ಅವಕಾಶ ಮಾಡಿಕೊಡಿ ಎಂದರು. ಈ ಭಾಗದಲ್ಲಿ ೪ಗ್ರಾಮಗಳಿಗೆ ಸೇರಿದಂತೆ ವ್ಯಾಪ್ತಿಗನುಗುಣವಾಗಿ ಒಟ್ಟು ೪೮ ಎಕರೆ ಪ್ರದೇಶ ಗೋಮಾಳವಿದೆ. ಗ್ರಾಮಸ್ಥರ ಮನವಿಯಂತೆ ಗೋಮಾಳದಲ್ಲಿ ೬ ಎಕರೆ ಪ್ರದೇಶದಲ್ಲಿ ಮಾತ್ರ ಗರಸು ತೆಗೆಯಲು ಸರ್ಕಾ ಆದೇಸಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸರ್ಕಾರದ ಆದೇಶದಂತೆ  ಗರಸು ತೆಗೆಯಲು ಅವಕಾಶ ಮಾಡಕೊಡಿ ಎನ್ನುತ್ತಿದ್ದಂತೆ ಇತರ ಅಧಿಕಾರಿಗಳ ಮಾತಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಗೋಮಾಳ ಜಾನುವಾರುಗಳನ್ನು ಮೇಯಿಸಲು ಅನುಕೂಲವಾಗಿದೆ. ಇಲ್ಲಿನ ಗಿಡ ಮರಗಳು ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿವೆ. ಗೋಮಾಳದಲ್ಲಿ ಗರಸು ಗತೆಗೆಯುವದರಿಂಗ್ರಾಮಸ್ಥರಿಗೆ ತೊಂದರೆಯಾಗುತ್ತದೆ. ಹೀಗಾಗಿ ಯಾವುದೆ ಕಾರಣಕ್ಕೂ ಗರಸು ತೆಗೆಯಲಯ ಅವಕಾಶ ಒಡುವುದಿಲ್ಲ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಪಿಎಸ್‌ಐ ಸಿದ್ದಾರೂಢ ಆಬಲಕಟ್ಟಿ, ಮುಖಂಡರಾದ ಶಿವು ಗದ್ದಿ, ಮಹಾಂತೇಶ ಅಮಾತಿಗೌಡರ, ಮಹಾಂತೇಶ ಈರಣ್ಣವರ, ರುದ್ರಗೌಡ ಅಮಾತಿಗೌಡರ, ಬಸವಂತಪ್ಪ ಕೊಣ್ಣೂರ, ಮಹಾಂತೇಶ ಕುಳ್ಳೊಳ್ಳಿ, ಗುರುಬಸಯ್ಯ ಹಿರೇಮಠ, ಸಂಗಪ್ಪ ಮೂಲಿಮನಿ, ಬೊಮ್ಮೇಶ ಹುಗ್ಗಿ, ವಾಲಪ್ಪ ನಾಯಕ, ಬಸವ್ವ ಹಾವರಗಿ, ಮತ್ತು ಇಲಾಖಾ ಅಧಿಕಾರಿಗಳಿದ್ದರು.                                                                                           

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ