(ವಿಜಯನಗರ ) ಹೊಸಪೇಟೆ : ನಗರದ ಹೋಟೆಲ್ ಮಲ್ಲಿಗೆಯಲ್ಲಿ. ಶ್ರೀ ಶಿವಶರಣ ಮಾದರ ಚನ್ನಯ್ಯ ಸೇವಾ ವಿಜಯನಗರ ಜಿಲ್ಲೆಯ. ಜಿಲ್ಲಾ ಕಾರ್ಯಕಾರಣಿ ಸಮಿತಿ ಸಭೆ ಜಿಲ್ಲಾಧ್ಯಕ್ಷ ಹೆಚ್. ಶ್ರೀನಿವಾಸ ಅವರ ಅಧ್ಯಕ್ಷತೆಯಲ್ಲಿ ಜರುಗಿತು .
ಈ ಸಂದರ್ಭದಲ್ಲಿ ಶ್ರೀ ಶಿವಶರಣ ಮಾದರ ಚನ್ನಯ್ಯ ಸೇವಾ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಹೂಡಿ ಮಂಜುನಾಥ್ ರವರು ಮಾತನಾಡಿ ಸೇವಾ ಸಮಿತಿಯು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನೆ ಮಾಡಲಾಗುತ್ತದೆ. ಸಮುದಾಯವು ಸಂಘಟಿತವಾದರೆ ಸಮಾಜ ಅಭಿವೃದ್ಧಿ ಹೊಂದುತ್ತದೆ ಅದರಂತೆ ನಾವೆಲ್ಲರೂ ಕೂಡ ಶ್ರೀ ಮಠದ ಸೇವೆಗೆ ನಾವೆಲ್ಲರೂ ಶ್ರಮಿಸೋಣ ಮಠದ ಪರಂಪರೆಯಿಂದ ನಾವೆಲ್ಲರೂ ಕೂಡ ಶಿಸ್ತು ಮತ್ತು ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿ ವಿಭಾಗಿ ಉಸ್ತವಾರಿಗಳಾದ ಪೂಜಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಕೊಂಡಪಲ್ಲಿ, ರಾಜ್ಯ ಕಾರ್ಯದರ್ಶಿ ರಾಜೇಶ್, ಮುಖಂಡರಾದ ಎಂ ಸಿ ವೀರಸ್ವಾಮಿ, ಬಲಹುಣಸಿ ರಾಮಣ್ಣ, ಎಚ್ ಶೇಷ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಸಿಆರ್, ಹೆಚ್. ರವಿಕಿರಣ್ ಸೇರಿದಂತೆ ಶ್ರೀ ಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿಯ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಾಗೂ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪ್ರತಿಯನ್ನು ನೀಡಿದರು.
